ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

ಹೈಕಮಾಂಡ್ ಸಿಎಂ ಆಗಿ ಮುಂದುವರಿಯಿರಿ ಅಂದ್ರೆ ಮುಂದುವರಿಯುತ್ತೇನೆ: ಸಿಎಂ !

ಬೆಂಗಳೂರು: Tulu Times | ಹೈಕಮಾಂಡ್ ಮುಂದುವರಿಯಿರಿ ಅಂದ್ರೆ ನಾನೇ ಮುಂದುವರಿಯುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ, ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ. ನಾನು ಒಪ್ಪಬೇಕು, ಡಿಕೆಶಿನೂ ಕೇಳಬೇಕು. ಹೈಕಮಾಂಡ್ ನಾನೇ ಮುಂದುವರೆಯಬೇಕು ಎಂದರೆ ನಾನೇ ಮುಂದುವರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಸಿಎಂ ಆಯ್ಕೆ ಎಲ್ಲವೂ ಹೈಕಮಾಂಡ್ ತೀರ್ಮಾನ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಫುಲ್ ಟರ್ಮ್ ಸಿಎಂ ಕ್ಲೈಮ್ ಬದಲಾಯ್ತಾ ಎಂಬ ಚರ್ಚೆಯನ್ನ ಅವರೇ ಹುಟ್ಟುಹಾಕಿದ್ದಾರೆ. ಮೈಸೂರಲ್ಲಿ ನಾನೇ 5 ವರ್ಷ ಸಿಎಂ, ನಾನೇ 17ನೇ ಬಜೆಟ್ ಮಂಡಿಸುತ್ತೇನೆ ಅಂದಿದ್ದ ಸಿಎಂ ಈಗ ಮೇಲ್ನೋಟಕ್ಕೆ ಬಹಳ ಸಾಫ್ಟ್ ಅಸ್ತ್ರ ಪ್ರಯೋಗಿಸಿದ್ದಾರೆ.

ಡಿಸಿಎಂ ಡಿಕೆಶಿ ಒಂದೇ ಸಾಲಿನಲ್ಲಿ ಮಾರ್ಮಿಕವಾಗಿ ಉತ್ತರಿಸಿ, ಅವರು ಹೇಳಿದ್ದೇ ವೇದವಾಕ್ಯ ಎಂದಷ್ಟೇ ಹೇಳಿದ್ದಾರೆ. ಹೈಕಮಾಂಡ್ ಅಂಗಳಕ್ಕೆ ಫುಲ್ ಟರ್ಮ್ ಚೆಂಡೆಸೆದ ಸಿದ್ದರಾಮಯ್ಯ ಹೇಳಿಕೆ ತಂತ್ರಗಾರಿಕೆಯೋ? ದಿಕ್ಕು ಬದಲಿಸುವ ಆಟವೋ? ಖರ್ಗೆ ಕೊಟ್ಟ ಸಂದೇಶವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಕಾಂಗ್ರೆಸ್ ಒಳಜಗಳ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದು, ಸಿದ್ಧರಾಮಯ್ಯನವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಸಿಎಂ ಸ್ಥಾನವನ್ನು ಕೂಡ ಯಾವುದೇ ಕಾರಣಕ್ಕಾಗಿ ಸಿದ್ಧರಾಮಯ್ಯನವರು ಬಿಟ್ಟು ಕೊಡುವುದಿಲ್ಲ. ಹೈ ಕಮಾಂಡ್ ನಿರ್ದೇಶನ ನೀಡಿದರೂ ಸಿಎಂ ಖುರ್ಚಿ ಬಿಟ್ಟು ಕೊಡಲ್ಲ ಎಂದು ತಿಳಿಸಿದ್ದಾರೆ. ಇನ್ನು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಶಾಕಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ಇನ್ನು ವಿರೋಧ ಪಕ್ಷಗಳು ಹಗಲುಗನಸು ಕಾಣುವುದನ್ನು ಬಿಡಬೇಕು. ಏಕೆಂದರೆ 2028 ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಜನಸೇವೆ ಮುಂದುವರೆಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

If the high command continues as CM, I will continue: CM! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 125

You cannot copy content of this page