ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿಮಂಗಳೂರು

ಚಿನ್ನಯ್ಯಗೆ ಜಾಮೀನು ಮಂಜೂರು! ಕೋರ್ಟ್‌ ವಿಧಿಸಿದ ಷರತ್ತುಗಳೇನು..?

ಬೆಳ್ತಂಗಡಿ: Tulu Times | ಮಂಗಳೂರಿನ ಜಿಲ್ಲಾ ಕೋರ್ಟ್ ನಲ್ಲಿ ಚಿನ್ನಯ್ಯನಿಗೆ ಜಾಮೀನು ಮಂಜೂರು ನೀಡಿದ್ದು, ಮಂಗಳೂರಿನ ಜಿಲ್ಲಾ ನ್ಯಾಯಾಲಯದಿಂದ ಚಿನ್ನಯ್ಯಗೆ ಜಾಮೀನು ಮಂಜೂರು ಮಾಡಿ ಷರತ್ತು ವಿಧಿಸಿದೆ.

ಬಂಗ್ಲಗುಡ್ಡೆ ಬುರುಡೆ ರಹಸ್ಯ ಪ್ರಕರಣದ ಬಗ್ಗೆ  ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ ವಿಚಾರ ಮಾಡಲಾಗಿದ್ದು, ಇಂದು ಮಂಗಳೂರು ಜಿಲ್ಲಾ ಕೋರ್ಟ್  ಜಾಮೀನು ಅರ್ಜಿ ವಿಚಾರಣೆ ನಡೆಸಿದೆ.  ಸದ್ಯ ಮೂರು ತಿಂಗಳಿಂದ  ಆರೋಪಿ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಜಾಮೀನು ಮಂಜೂರು ಮಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ  12 ಕಂಡಿಷನ್‌ ಮೇಲೆ ಜಾಮೀನು ಮಂಜೂರು ಮಾಡಿದೆ.  1 ಲಕ್ಷ ಬಾಂಡ್ ಇಡೋದನ್ನು ಸೇರಿ 12 ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಲಾಗಿದೆ. ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ಜಿಲ್ಲಾ ಕೋರ್ಟ್ ನಲ್ಲಿ ಚಿನ್ನಯ್ಯ ಪರ ವಕೀಲರು  ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 23 ರಂದು ಸುಧೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್ ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯ ಬಂಧನವಾಗಿತ್ತು, ಸೆಪ್ಟೆಂಬರ್ 6ರಂದು ಚಿನ್ನಯ್ಯ ನ್ಯಾಯಾಂಗ ಬಂಧನವಾಗಿ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಂದು  ದ.ಕ ಜಿಲ್ಲಾ ಸೆಷನ್ಸ್ ಕೋರ್ಟ್ ಚಿನ್ನಯ್ಯನಿಗೆ ಜಾಮೀನು ನೀಡಿತ್ತು. ಬುರುಡೆ ರಹಸ್ಯ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ ನಿಗೆ ಜಾಮೀನು ಮಂಜೂರು ವಿಚಾರವಾಗಿ ಹಾಕಿದ ಷರತ್ತುಗಳನ್ನು ವಿಧಿಸಿದೆ.  12 ಷರತ್ತುಗಳ ಮೇಲೆ ಕೋರ್ಟ್  ಆರೋಪಿಗೆ ಬೇಲ್ ನೀಡಿದೆ. ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ.

ಕೋರ್ಟ್‌ ಷರತ್ತುಗಳೇನು..?
ಸಮಾನ ಅಪರಾಧ ಮತ್ತೆ ಮಾಡಬಾರದು, ಮುಂದೆ ಇದೇ ರೀತಿಯ ಅಪರಾಧಕ್ಕೆ ಕೈ ಹಾಕಬಾರದು. ಓಡಿಹೋಗಬಾರದು (Abscond ಆಗಬಾರದು), ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವುದು, ಸ್ಥಳ ಬಿಟ್ಟು ಮರೆಮಾಡಿಕೊಳ್ಳುವುದು ಬೇಡ., ಸಾಕ್ಷಿದಾರರಿಗೆ ಬೆದರಿಕೆ, ಲಂಚ, ಅಥವಾ ಪ್ರಲೋಭನೆ ಕೊಡಬಾರದು, Prosecution witnesses‌ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ ಕೆಲಸ ಮಾಡಬಾರದು,  ಸಾಕ್ಷಿಗಳನ್ನು ನಾಶ ಮಾಡಬಾರದು, ಕೇಸಿಗೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ಅಳಿಸುವುದು / ನಾಶಗೊಳಿಸುವುದು ಬೇಡ. ತನಿಖಾ ಅಧಿಕಾರಿಗೆ ಸಹಕರಿಸಬೇಕು, (Investigating Officer) ಕರೆ ಮಾಡಿದಾಗ ಹಾಜರಾಗಬೇಕು, ತನಿಖೆಗೆ ತೊಂದರೆ ಕೊಡಬಾರದು, ನ್ಯಾಯಾಲಯಕ್ಕೆ ಹಾಜರಾಗಬೇಕು, ಕೋರ್ಟ್ ದಿನಾಂಕಗಳಿಗೆ regularly ಹಾಜರಾಗಬೇಕು. ಕೋರ್ಟ್ ಕ್ಷಮಿಸಿದಾಗ ಮಾತ್ರ ಹಾಜರಾಗದೇ ಇರಬಹುದು,  ವಿಳಾಸದ ಪುರಾವೆ (Address Proof) ಕೊಡಬೇಕು, ತಾನೂ ಹಾಗೂ ಜಾಮೀನಾದರೂ ಕೂಡ: ಆಧಾರ್, ಮತದಾರರ ಗುರುತಿನ ಚೀಟಿ ಇದಲ್ಲಾದರೂ ಪುರಾವೆ ಕೊಡಬೇಕು,  ವಿಳಾಸದಲ್ಲಿ ಬದಲಾವಣೆ ಬಂದರೆ ಕೋರ್ಟ್‌ಗೆ ತಿಳಿಸಬೇಕು, ತಮ್ಮ ನಿವಾಸದ ವಿಳಾಸ ಬದಲಾಗಿದ್ರೆ, ತಕ್ಷಣ ಕೋರ್ಟ್‌ಗೆ ತಿಳಿಸಬೇಕು, ಮೊಬೈಲ್ ನಂಬರ್ / ವಾಟ್ಸಪ್ / ಇಮೇಲ್ ಕೊಡಬೇಕು, ಲಭ್ಯವಿದ್ದರೆ ಎಲ್ಲಾ contact details ಕೋರ್ಟ್‌ಗೆ ಕೊಡಬೇಕು, ಕೋರ್ಟ್ ಜುರಿಸ್ಡಿಕ್ಷನ್ ಹೊರಗೆ ಹೋಗಬಾರದು,ಕೋರ್ಟ್ ಅನುಮತಿ ಇಲ್ಲದೇ ಜಿಲ್ಲೆಯ ಹೊರಗೆ ಅಥವಾ jurisdiction ಹೊರಗೆ ಹೋಗಬಾರದು,  ಕೇಸ್‌ ಬಗ್ಗೆ ಮಾಧ್ಯಮಕ್ಕೆ ಮಾತನಾಡಬಾರದು, Crime No.39/2025 ಬಗ್ಗೆ:, TV, ಪತ್ರಿಕಾ/ವರದಿಗಾರರು, ಸೋಶಲ್ ಮೀಡಿಯಾ, ಇತರ ಮಾಧ್ಯಮಗಳು ಯಾವುದಕ್ಕೂ ಸಂದರ್ಶನ / ಹೇಳಿಕೆ ಕೊಡಬಾರದು, ಪೊಲೀಸ್ ಠಾಣೆಗೆ ಹಾಜರಾತಿ, ಬೇಲ್‌ ಮೇಲೆ ಬಿಡುಗಡೆ ಆದ ನಂತರ alternative days (ಒಂದು ದಿನ ಹಾಜರಿ – ಒಂದು ದಿನ ಬಿಟ್ಟು) ಪೊಲೀಸ್ ಠಾಣೆಗೆ ಹಾಜರಾಗಬೇಕು,  ಮುಂಚಿತ ವರದಿ (charge sheet / final report) ಫೈಲ್ ಆಗುವ ತನಕ. ಜಾಮೀನು ಮೊತ್ತ: Personal bond: 1,00,000, 2 Sureties: ತಲಾ 1,00,000 ಮೌಲ್ಯದ ಜಾಮೀನು.

Belthangady: Chinnaiah granted bail! What are the conditions imposed by the court..?  – ತುಳು ಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 163

You cannot copy content of this page