ಆಂಧ್ರಪ್ರದೇಶ – ತುಳು ಟೈಮ್ಸ್ : ಅಮೆರಿಕಾದ ವೀಸಾ ಸಿಕ್ಕಿಲ್ಲ ಎಂದು ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್ ನ ಪದ್ಮರಾವ್ ನಗರದ ವೈದ್ಯೆ ಹೆಚ್ಚಿನ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹಿಣಿ ಎಂಬಾಕೆ ಜೀವಾಂತ್ಯ ಮಾಡಿಕೊಂಡ ಯುವ ವೈದ್ಯೆ.
ರೋಹಿಣಿ ಅಮೆರಿಕಾದ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೇ ವೀಸಾ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ನೊಂದು ಖಿನ್ನತೆಗೊಳಗಾಗಿದ್ದರು. ಅಪಾರ್ಟ್ ಮೆಂಟ್ ನಲ್ಲಿ ಹೆಚ್ಚಿನ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಕೆಲಸದ ಮಹಿಳೆ ಬೆಳಿಗ್ಗೆ ಬಂದು ಬೆಲ್ ಮಾಡಿದಾಗ, ಮನೆ ಬಾಗಿಲು ತೆರೆದಿಲ್ಲ. ಆಗ ಮನೆ ಕೆಲಸದ ಮಹಿಳೆಯ ವೈದ್ಯೆಯ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ಪ್ಲ್ಯಾಟ್ ನ ಡೋರ್ ಒಡೆದು ಒಳ ಹೋಗಿ ನೋಡಿದಾಗ, ವೈದ್ಯೆ ರೋಹಿಣಿ ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ಇನ್ನು ವೈದ್ಯೆಯ ಪ್ಲ್ಯಾಟ್ ನಲ್ಲಿ ಡೆತ್ ನೋಟ್ ಸಿಕ್ಕಿದೆ . ಡೆತ್ ನೋಟ್ ನಲ್ಲಿ ವೈದ್ಯೆ ಖಿನ್ನತೆಯಿಂದ ಬಳಲುತ್ತಿರುವುದು ಉಲ್ಲೇಖವಾಗಿದೆ. ಜೊತೆಗೆ ವೀಸಾ ಅರ್ಜಿ ತಿರಸ್ಕಾರವೂ ಪ್ರಸ್ತಾಪವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವೈದ್ಯೆ ರೋಹಿಣಿ ಅವಿವಾಹಿತೆ. ಹೀಗಾಗಿ ಸಂಪೂರ್ಣ ಗಮನವನ್ನು ಕೆರಿಯರ್ ಬೆಳವಣಿಗೆಯತ್ತ ಕೇಂದ್ರೀಕರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
A 38-year-old woman doctor from Guntur district in Andhra Pradesh has allegedly died by suicide at her flat in Hyderabad due to depression over not getting US visa, said a police official on Sunday. Tulutimes
ಇದನ್ನೂ ಓದಿ: ವಿಟ್ಲ: ಸೊಸೈಟಿ ಆವರಣದಲ್ಲಿದ್ದ ನಾಲ್ಕು ಗೋವು ಕಳವುಗೈದ ಮುಸುಕುಧಾರಿಗಳು
==============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess/











