ಬ್ರೇಕಿಂಗ್ ನ್ಯೂಸ್
ಕರಾವಳಿಬಂಟ್ವಾಳ

ವಿಟ್ಲ: ಸೊಸೈಟಿ ಆವರಣದಲ್ಲಿದ್ದ ನಾಲ್ಕು ಗೋವು ಕಳವುಗೈದ ಮುಸುಕುಧಾರಿಗಳು

ವಿಟ್ಲ – ತುಳುಟೈಮ್ಸ್‌: ಸೊಸೈಟಿ ಆವರಣದಲ್ಲಿದ್ದ ನಾಲ್ಕು ಗೋವುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ನಸುಕಿನ ಜಾವ ಸುಮಾರು 2:30ರ ಹೊತ್ತಿಗೆ ಮುಸುಕುಧಾರಿಗಳು ದನಕಳವು ನಡೆಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದಲ್ಲಿ ಗೋ ಕಳವು ನಡೆದಿದೆ. ಗೋಕಳವು ಕೃತ್ಯದ ದೃಶ್ಯಾವಳಿಗಳು ಸೊಸೈಟಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆರುವಾಯಿ ಗ್ರಾಮದ ಗಣೇಶ್ ರೈ (39) ಮತ್ತು ನಾರಾಯಣ ನಾಯ್ಕ ಎಂಬುವವರಿಗೆ ಸೇರಿದ ತಲಾ ಎರಡು ದನಗಳು ಸೊಸೈಟಿ ಮೈದಾನದಲ್ಲಿ ಮೇಯುತ್ತಿದ್ದವು.

ತುಳು ಟೈಮ್ಸ್‌

ಸಂಜೆಯಾದರೂ ದನಗಳು ಮನೆಗೆ ಹೋಗದೆ, ಸೊಸೈಟಿ ಆವರಣದಲ್ಲೇ ಉಳಿದುಕೊಂಡಿದ್ದವು. ರಾತ್ರಿ ವೇಳೆ ಸುರಕ್ಷತೆಯ ದೃಷ್ಟಿಯಿಂದ ಸೊಸೈಟಿಯ ಸಿಬ್ಬಂದಿ ಗೇಟಿಗೆ ಬೀಗ ಹಾಕಿ ತೆರಳಿದ್ದರು.

ಆದರೆ, ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಆವರಣದಲ್ಲಿದ್ದ ನಾಲ್ಕು ದನಗಳು ಕಾಣೆಯಾಗಿದ್ದವು. ತಕ್ಷಣ ಎಚ್ಚೆತ್ತ ದನಗಳ ಮಾಲೀಕರು ಹಾಗೂ ಸೊಸೈಟಿ ಸಿಬ್ಬಂದಿ ಸೇರಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.

ಸುಮಾರು 2:30ರ ಹೊತ್ತಿಗೆ ಸೊಸೈಟಿಯ ಬಳಿ ಬಂದ ಮೂವರು ಮುಸುಕುಧಾರಿಗಳು, ಸೊಸೈಟಿಯ ಗೇಟಿನ ಬೀಗ ಮುರಿದು ಅಕ್ರಮ ಪ್ರವೇಶಿಸಿದ್ದಾರೆ. ಬಳಿಕ ಆವರಣದೊಳಗಿದ್ದ ದನವನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Four cows were stolen from the Co-operative premises. The incident was caught on CCTV at around 2:30 am by three masked men. A case has been registered at the Vittla police station in this regard. – Tulu Times

ಇದನ್ನೂ ಓದಿ: ಬೆಳ್ತಂಗಡಿ: ನ. 26ರಂದು ಶ್ರೀ ಕಾಲಭೈರವೇಶ್ವರ ಸೊಸೈಟಿ ಬೆಳ್ತಂಗಡಿ ಶಾಖೆ ಉದ್ಘಾಟನೆ

==================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :  https://www.youtube.com/@tulutimess/

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 32

You cannot copy content of this page