ಬ್ರೇಕಿಂಗ್ ನ್ಯೂಸ್
ಕರಾವಳಿಬೆಳ್ತಂಗಡಿ

ಬೆಳ್ತಂಗಡಿ: ನ. 26ರಂದು ಶ್ರೀ ಕಾಲಭೈರವೇಶ್ವರ ಸೊಸೈಟಿ ಬೆಳ್ತಂಗಡಿ ಶಾಖೆ ಉದ್ಘಾಟನೆ

ಬೆಳ್ತಂಗಡಿ – ತುಳು ಟೈಮ್ಸ್: ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖೆಯ ಉದ್ಘಾಟನಾ ಸಮಾರಂಭ ನ.26ರಂದು ಚರ್ಚ್ ರೋಡ್ ಬಳಿಯ ಟ್ರಿನಿಟಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾವೂರು ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಪ್ರಸನ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಉಜಿರೆ ತಾಲೂಕು ಒಕ್ಕಲಿಗರ ಸಂಘ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ರಂಜನ್‌ ಜಿ. ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳ್ತಂಗಡಿ ನಗರ ಪಂಚಾಯತ್‌ ಅಧ್ಯಕ್ಷ ಜಯಾನಂದ ಗೌಡ, ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಅಧ್ಯಕ್ಷ ಡಿ.ಬಿ. ಬಾಲಕೃಷ್ಣ ಗೌಡ, ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್‌ ಗೌಡ ಕಲ್ಮಂಜ, ಕಾರ್ಯಾಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಭಾರತಿ ಜಿ.ಭಟ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎಸ್., ವಕೀಲ ವಸಂತ ಗೌಡ ಮರಕಡ, ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ನಿರ್ದೇಶಕ ವಿಜಯ ಗೌಡ ವೇಣೂರು, ಸೌಮ್ಯಲತಾ ಜಯಂತ್ ಗೌಡ, ಜತೆ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಜತೆ ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ, ವಕೀಲ ನವೀನ್ ಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ರಂಜನ್‌ ಜಿ. ಗೌಡ ತಿಳಿಸಿದ್ದಾರೆ.

The inauguration ceremony of the Belthangady branch of Ujire Sri Kalabhairaveshwara Vokkaliga Gowda Credit Souharda Sahakari Sangha will be held on November 26 at Trinity Complex near Church Road. Tulu Times

ಇದನ್ನೂ ಓದಿ: ATM ಹಣದ ವ್ಯಾನ್ ದರೋಡೆ – ಪಾಳು ಬಿದ್ದ ಮನೆಯಲ್ಲಿ ಕೋಟಿ ರೂ. ಬಚ್ಚಿಟ್ಟ ಆರೋಪಿಗಳು

==================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B7DSbRcw80Q?si=U42XMUvT9of7QRAN

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 38

You cannot copy content of this page