Bengaluru – ತುಳು ಟೈಮ್ಸ್: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 7.11 ಕೋಟಿ ರೂಪಾಯಿ ATM ಹಣದ ವ್ಯಾನ್ ದರೋಡೆ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಲಾಲ್ ಬಾಗ್ ಸಿದ್ದಾಪುರ ಬಳಿ RBI ಅಧಿಕಾರಿಗಳ ಸೋಗಿನಲ್ಲಿ ಈ ದರೋಡೆ ನಡೆದಿತ್ತು. ಈ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
ದರೋಡೆ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರುತ್ತಿದ್ದಂತೆ ಪೊಲೀಸರ ತಂಡ ವಿವಿಧ ಆಯಾಮದಲ್ಲಿ ತನಿಖೆಗೆ ಇಳಿದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣದ ಮಾಸ್ಟರ್ ಮೈಂಡ್ ಕ್ಸೇವಿಯರ್ ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ತುಳುಟೈಮ್ಸ್
ದರೋಡೆಕೋರರು ಸಾಲ, ಜೂಜಿನ ಚಟಕ್ಕೆ ಬಿದ್ದು ಈ ಕೃತ್ಯ ಎಸಗಿರುವುದು ಬಯಲಾಗಿದೆ. ದೋಚಿದ ಹಣವನ್ನು ಪಾಳು ಬಿದ್ದ ಮನೆಯಲ್ಲಿ ಬಚ್ಚಿಟ್ಟಿದ್ದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೈದರಾಬಾದ್ನಲ್ಲಿ ಬಂಧಿತ ಮೂವರಿಂದ 53 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಒಟ್ಟು 6.3 ಕೋಟಿ ರೂಪಾಯಿ ವಸೂಲಿಯಾಗಿದೆ. ಚಿತ್ತೂರಿನಲ್ಲಿ ಪತ್ತೆಯಾದ ಇನ್ನೋವಾ ಕಾರಿನ ಜಿಪಿಎಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.
ಕೇರಳ, ತಮಿಳುನಾಡು, ಹೈದರಾಬಾದ್ನಲ್ಲಿ ತಲೆಮರೆಸಿಕೊಂಡಿದ್ದವರನ್ನು ಬಂಧಿಸಲಾಗಿದೆ. ದರೋಡೆಕೋರರೊಂದಿಗೆ ಕೈಜೋಡಿಸಿದ್ದ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ.
Bengaluru ATM van heist: 2 confessed they had to repay loans – Police Discover Robbery Cash Hidden in Deserted Home – Tulu Times
ಇದನ್ನೂ ಓದಿ: ಕಾಸರಗೋಡು: ಮ್ಯೂಸಿಕ್ ಕನ್ಸರ್ಟ್ನಲ್ಲಿ ಭಾರೀ ಕಾಲ್ತುಳಿತ – 20ಕ್ಕೂ ಅಧಿಕ ಮಂದಿ ಅಸ್ವಸ್ಥ
========================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B7DSbRcw80Q?si=U42XMUvT9of7QRAN











