ಬ್ರೇಕಿಂಗ್ ನ್ಯೂಸ್
ದೇಶ

MUSLIM ಮಹಿಳೆಗೆ ಟ್ರೀಟ್ ಮೆಂಟ್ ಕೊಡಲ್ಲ ಅಂದ್ರಾ,ಯು.ಪಿ ಡಾಕ್ಟರ್?

MUSLIM ಮಹಿಳೆಗೆ ಟ್ರೀಟ್ ಮೆಂಟ್ ನೀಡುವುದಿಲ್ಲ ಎಂಬ ಡಾಕ್ಟರ್ ಹೇಳಿಕೆಯ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ.ಈ ಸುದ್ದಿ ಬಂದಿದ್ದು ಉತ್ತರ ಪ್ರದೇಶದಿಂದ.ಬಿರಿಬರಿ ಗ್ರಾಮದಲ್ಲಿ ಹೆರಿಗೆಯ ಕಾರಣದಿಂದ ಶಮಾ ಪರ್ವೀನ್ ಎಂಬವ್ರು ಆಸ್ಪತ್ರೆಗೆ ಬಂದಿದ್ರು.ರಾತ್ರಿ 10 ಗಂಟೆ ಸುಮಾರಿಗೆ ಸಮೀಪದ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು.ಶಮಾ ಪರ್ವೀನ್ ಅವರಿಗೆ ಹೆರಿಗೆ ನೋವು ಕಾಣಿಸ್ಕೊಂಡಿದ್ದರಿಂದ ರಾತ್ರಿಯೇ ಆಸ್ಪತ್ರೆಗೆ ಕರೆತರಲಾಗಿತ್ತಂತೆ.

ಎಲ್ಲಾ ಆಸ್ಪತ್ರೆಗಳಲ್ಲಿ ಇರುವಂತೆ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆಯೊಬ್ಬರು ಪರೀಕ್ಷೆ ಆರಂಭಿಸಿದ್ದಾರೆ.ಆ ನಂತರದಲ್ಲಿ ವೈದ್ಯರು ನಿನಗೆ ಚಿಕಿತ್ಸೆ ನೀಡುವುದಿಲ್ಲ (http://Muslims ಮಹಿಳೆಗೆ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಎಂದು ಶಮಾ ಪರ್ವೀನ್ ಗಂಭೀರವಾದ ಆರೋಪ ಮಾಡಿದ್ದಾರೆ.

ಶಮಾ ಪರ್ವೀನ್ ಅವರಿಗೆ ನಿನ್ನ ಹೆರಿಗೆಯನ್ನು ಇಲ್ಲಿ ಮಾಡುವುದಿಲ್ಲ ಎಂದು ಹೇಳಿ,ಬೇರೆಲ್ಲಾದರೂ ಆಸ್ಪತ್ರೆಗೆ ಹೋಗಲು ವೈದ್ಯರು ನಿರ್ದೇಶಿಸಿದ್ದಾರಂತೆ.ಆಸ್ಪತ್ರೆಯ ಹೊರಗೆ ಕಳುಹಿಸಲು ವೈದ್ಯರು ಸೂಚನೆ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಆರೋಪವನ್ನು ವೈದ್ಯಕೀಯ ಇಲಾಖೆ ನಿರಾಕರಿಸಿದೆ.ವೈದ್ಯರು ಆರೋಪಿಸಿದಂತೆ ವರ್ತಿಸಿಲ್ಲ ಎಂದು ವೈದ್ಯಕೀಯ ಇಲಾಖೆ ಸ್ಪಷ್ಟಪಡಿಸಿದೆ.ಈ  ಬಗ್ಗೆ ಸಾಮಾಜಿಕ ತಾಣಗಳಲ್ಲಿ ವೀಡಿಯೋ ಕೂಡ ಹರಿದಾಡಿದೆ.ವೀಡಿಯೋ ಹರಿಬಿಟ್ಟವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಿದ್ದು ಡಾಕ್ಚರ್ ವಿರುದ್ದ ಆಕ್ರೋಶ ಜೋರಾಗ್ತಿದೆ.ವೈದ್ಯರು ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ ಎಂದಿದ್ದಾರೆ.ಧರ್ಮದ ವಿಚಾರದ ಗಲಭೆಗಳು ಚರ್ಚೇಗೆ ಬರ್ತಾನೆ ಇದೆ.ಅದರಲ್ಲೂ ವೈದ್ಯರು ಧರ್ಮದ ಕಾರಣಕ್ಕೆ ಚಿಕಿತ್ಸೆ ನೀಡುವುದಿಲ್ಲ ಎಂದಿರುವುದು ನಾಗರಿಕ ಸಮಾಜದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ಇನ್ನೂ ಈ ಹೇಳಿಕೆಯ ಬಗ್ಗೆ ತನಿಖೆಯ ಬಳಿಕವಷ್ಟೇ ಸಂಪೂರ್ಣ ವಿವರ ತಿಳಿಯಬೇಕಿದೆ.
ಇದನ್ನೂ ಓದಿ:ARUN KUMAR PUTTILA:ಸಂಸಾರವೇ ಬೇಡ ಅಂದುಕೊಂಡಿದ್ರು!

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page