ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಡಿಕೇರಿ : ವಿದ್ಯಾರ್ಥಿಯ ಅಪಹರಣಕ್ಕೆ ಪ್ರಯತ್ನ

ಮಡಿಕೇರಿ : Tulu Times | ಮಕ್ಕಳ ಕಳ್ಳರಿದ್ದಾರೆ ಎಚ್ಚರ…! ಅಂತೇಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸಂದೇಶವನ್ನು ಎಲ್ಲರೂ ಗಮನಿಸಿರುತ್ತಾರೆ. ಆದರೆ, ಇಲ್ಲೊಂದು ಘಟನೆ ಮಡಿಕೇರಿಯಿಂದ ವರದಿಯಾಗಿದ್ದು, ಇಲ್ಲಿನ ಗಣಪತಿ ಬೀದಿಯಲ್ಲಿ ನಿನ್ನೆ (NOV. 21)ರಾತ್ರಿ ಅಂದಾಜು 9 ಗಂಟೆ ಸಮಯಕ್ಕೆವಿ ದ್ಯಾರ್ಥಿಯೊಬ್ಬನನ್ನು ಅಪರಿಚಿತರು ಅಪಹರಣಕ್ಕೆ ಪ್ರಯತ್ನಿಸುವ ಘಟನೆ ನಡೆದಿದೆ.

ಮಡಿಕೇರಿಯ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ರಾತ್ರಿ ಮನೆಯಿಂದ, ಮೊಸರು ತರಲು ಗಣಪತಿ ಬೀದಿಯ ಅಂಗಡಿಗೆ ಬಂದಿದ್ದ. ಮೊಸರು ಖರೀದಿಸಿ ಹಿಂದುರುಗಿ ಮನೆಗೆ ಬರುವ ವೇಳೆ ಮಾರುತಿ ಓಮ್ನಿ ಕಾರಿನಲ್ಲಿದ್ದ ಅಪರಿಚಿತರು ವಿದ್ಯಾರ್ಥಿಯನ್ನು ಹಿಡಿದು ಕಾರಿನೊಳಗೆ ತಳ್ಳುವ ಪ್ರಯತ್ನ ಮಾಡಿದ್ದಾರೆ. ಅದೇ ವೇಳೆಗಾಗಲೇ ವಿದ್ಯಾರ್ಥಿ ಕಿರುಚಿಕೊಂಡಿದ್ದಾನೆ, ಯುವಕನ ಕಿರುಚಾಟಕ್ಕೆ ಅಕ್ಕಪಕ್ಕದ ಮನೆಯರು ಹೊರಬಂದಿದ್ದಾರೆ. ಮನೆಯಿಂದ ಜನರು ಹೊರಬರುತ್ತಲೇ ಅಪಹರಣಕ್ಕೆ ಪ್ರಯತ್ನಿಸುತ್ತಿದ್ದ ಅಪರಿಚಿತರು ವಿದ್ಯಾರ್ಥಿಯನ್ನು ಅಲ್ಲೇ ಬಿಟ್ಟು, ಬಂದಿದ್ದ ಓಮ್ನಿ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಈ ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೋಷಕರು ರಾತ್ರಿ ವೇಳೆಯಲ್ಲಿ ಒಬ್ಬಂಟಿಯಾಗಿ ಮಕ್ಕಳನ್ನು ಹೊರಕಳುಹಿಸದಂತೆ ಎಚ್ಚರವಹಿಸಬೇಕಾಗಿದೆ.

Attempt to kidnap student foiled – ತುಳು ಟೈಮ್ಸ್‌

ಇದನ್ನೂ ಓದಿ :ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಹೃದಯಾಘಾತದಿಂದ ನಿಧನ…!

….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/B7DSbRcw80Q?si=d6Bwq3WJM3jFU2OR

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page