CNAP : ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಬದಲಾವಣೆ ಆಗುತ್ತಲೇ ಇರುವ ಕಾರಣ, ನಾವು ಕೂಡಾ ಅದರೊಂದಿಗೆ ಅಪ್ಡೇಟ್ ಆಗಬೇಕಾಗುತ್ತದೆ. ಮೊದ ಮೊದಲು ನಮ್ಮ ಫೋನ್ ಗೆ ಅನ್ಯ ಕರೆ ಪದೇ ಪದೇ ಬರುವಾಗ ಅದನ್ನು ಬ್ಲಾಕ್ ಲಿಸ್ಟ್ ಗೆ ಹಾಕಿ, ಆನಂತರ ಟ್ರೂ ಕಾಲರ್ ನಲ್ಲಿ ನಂಬರ್ ಯಾರದ್ದು ಅಂತ ಹುಡುಕಾಟಕ್ಕೆ ಶುರು ಮಾಡಿದ್ದೂ ಇದೆ. ಕೆಲವೊಮ್ಮೆ ಟ್ರೂ ಕಾಲರ್ ನಲ್ಲಿಯೂ ಮೊಬೈಲ್ ಸಂಖ್ಯೆಯ ಬಗ್ಗೆ ಸಂಪೂರ್ಣ ಹೆಸರು ಸಿಗುವುದಿಲ್ಲ. ಆದ್ರೆ ಇನ್ನು ಮುಂದೆ ಅಪರಿಚಿತ ಸಂಖ್ಯೆಗಳಿಂದ ಕಾಲ್ ಬಂದ್ರೆ ನೀವು ಟ್ರೂ ಕಾಲರ್ ನಂತಹ ಅಪ್ಲಿಕೇಶನ್ ಗಳನ್ನು ಬಳಸುವಂತಿಲ್ಲ ಎಂಬುದು ಭಾರತ ಸರ್ಕಾರ ಸಿಎನ್ಎಪಿ ಎಂಬ ಹೊಸ ಕಾಲರ್ ಐಡಿ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದು ಎಲ್ಲೆಡೆ ಇದರ ಬಗ್ಗೆ ಈ ಅಪ್ಲಿಕೇಶನ್ ಬಗ್ಗೆ ವಿವರಗಳನ್ನ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸರ್ಕಾರಿ ದಾಖಲೆಗಳಿಂದ ಹೆಸರುಗಳನ್ನು ಪಡೆಯುತ್ತದೆ ;
ಇದು ಕರೆ ಮಾಡಿದವರನ್ನು ಗುರುತಿಸುವುದನ್ನು ಸುಲಭಗೊಳಿಸುತ್ತದೆ ಮತ್ತು ಸದ್ಯ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು, ಸಂಖ್ಯೆಯನ್ನು ಮಾತ್ರ ತೋರಿಸುತ್ತವೆ. ಆದರೆ ಶೀಘ್ರದಲ್ಲೇ ಈ ಕರೆ ಮಾಡಿದವರ ಹೆಸರಿನ ಜೊತೆ ಅವರ ಆಧಾರ್ ಸಂಖ್ಯೆ ಕೂಡ ಬರಲು ಆರಂಭಿಸುತ್ತದೆ ಎಂದು ಹೇಳಲಾಗಿದೆ. ದೇಶದ ಹಲವಾರು ಭಾಗಗಳಲ್ಲಿ ಇದರ ಬಗ್ಗೆ ಪರೀಕ್ಷೆಯು ಪ್ರಾರಂಭವಾಗಿದೆ. ಸಿಎನ್ಎಪಿ ಸರ್ಕಾರಿ ದಾಖಲೆಗಳಿಂದ ಹೆಸರುಗಳನ್ನು ಪಡೆಯುತ್ತದೆ ಯಾರಾದರೂ ಕರೆ ಮಾಡಿದಾಗ ಆ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ಆಧಾರ್ ಹೆಸರು ಮೊದಲು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ. ಇದರ ಅರ್ಥ ಕರೆ ಮಾಡಿದವರ ನಿಜವಾದ ಐಡಿ ಆಧಾರಿತ ಹೆಸರು ಮೊದಲು ಕಾಣಿಸಿಕೊಳ್ಳುತ್ತದೆ.
ಅಪ್ಲಿಕೇಶನ್ ಬಂದರೆ ಜನರಿಗೆ ತುಂಬಾ ಅನುಕೂಲ ;
ಸೈಬರ್ ಅಪರಾಧಗಳು ಇತ್ತೀಚೆಗೆ ಹೆಚ್ಚಾಗುವ ಕಾರಣ ಇದನ್ನ ಪರಿಚಯಿಸಲಾಗುತ್ತಿದೆ ಎಂದು ವರದಿಯಾಗಿರುತ್ತದೆ. ಟೆಲಿಕಾಂ ಕಂಪನಿಗಳು ಈಗ ಅದನ್ನು ಬಳಸಲು ಪ್ರಾರಂಭಿಸಿದ್ದು, ಇದು ಸಂಖ್ಯೆಗೆ ಲಿಂಕ್ ಮಾಡಲಾದ ಆಧಾರ ಕಾರ್ಡ್ ನಿಂದ ಕರೆ ಮಾಡಿದವರ ಹೆಸರನ್ನು ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಬಳಕೆದಾರರು ತಮ್ಮ ಆಧಾರ್ ಲಿಂಕ್ ಮಾಡಿದ ಹೆಸರುಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆಯೇ ? ಮತ್ತು ಅವರ ಹೆಸರುಗಳನ್ನು ಪ್ರತಿ ಕರೆ ಸ್ವೀಕರಿಸುವವರಿಗೆ ಗೋಚರಿಸುತ್ತವೆಯಾ..? ಎಂಬಂತ ಕೆಲವು ಆರಂಭಿಕ ಪ್ರಶ್ನೆಗಳನ್ನು ಸಿಎನ್ಎಪಿ ಉತ್ತರ ಕಂಡುಕೊಳ್ಳಬೇಕಷ್ಟೇ. ಭವಿಷ್ಯದಲ್ಲಿ ಈ ಅಪ್ಲಿಕೇಶನ್ ಬಂದರೆ ಜನರಿಗೆ ತುಂಬಾ ಅನುಕೂಲವಾಗುವುದಂತೂ ನಿಜ.
ಇದನ್ನೂ ಓದಿ :Puttur: ಶ್ರೀನಿವಾಸ ಕಲ್ಯಾಣೋತ್ಸವದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು; ಕಾನೂನಿನ ಮೊರೆ ಹೋಗುವ ಸಾಧ್ಯತೆ
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/PDFUjSkFTZA?si=SV8x2vbnKJEXRI8p











