ಪುತ್ತೂರು: Tulutimes | ಪುತ್ತಿಲ ಪರಿವಾರದ ನೇತೃತ್ವದಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಹಾಗೂ ಹಿಂದವೀ ಸಾಮ್ರಾಜ್ಯೋತ್ಸವದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ನಡೆದಿದೆ. ಈ ಕೃತ್ಯವನ್ನು ಖಂಡಿಸಿ ಅರುಣ್ ಕುಮಾರ್ ಪುತ್ತಿಲ ಹಾಗೂ ಪರಿವಾರದ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ.

ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ್ದನ್ನು ಖಂಡಿಸಿ ಬಲ್ನಾಡು ಉಳ್ತಾಲ್ತಿ ನಡೆಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ಕೃತ್ಯವನ್ನು ಮಾಡಿದವರಿಗೆ ಉಳ್ಳಾಲ್ತಿಯೇ ಶಿಕ್ಷೆ ನೀಡಬೇಕು. ಈ ದುಷ್ಕೃತ್ಯ ಮಾಡಿದವರು ಯಾರೆಂದು ಶೀಘ್ರದಲ್ಲಿ ತಿಳಿದು ಬರಬೇಕೆಂದು ಪ್ರಾರ್ಥಿಸಲಾಯಿತು.

ಈ ಸಾಮೂಹಿಕ ಪ್ರಾರ್ಥನೆ ವೇಳೆ ಅರುಣ್ ಕುಮಾರ್ ಪುತ್ತಿಲ, ಅನಿಲ್ ತೆಂಕಿಲ, ರಾಜ್ ಶೆಟ್ಟಿ, ಭೀಮ್ ಭಟ್, ಎ.ಬಿ ಶೆಟ್ಟಿ, ವೆಂಕಟರಮಣ ಭಟ್ ಸೇರಿದಂತೆ ಪುತ್ತಿಲ ಪರಿವಾರದ ಪ್ರಮುಖರು ಸೇರಿದ್ದರು. ಈ ಘಟನೆಯನ್ನು ವಿರೋಧಿಸಿ ಕಾನೂನು ಮೊರೆ ಹೋಗುವ ಸಾಧ್ಯತೆಯೂ ಇದೆ.

Srinivasa Kalyanotsava banner damaged – Mass prayer held at Balnadu Ullalthi Nadi – ತುಳು ಟೈಮ್ಸ್
ಇದನ್ನೂ ಓದಿ: Puttur: ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ
==========================================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











