Smriti Mandhana: ಇಂಡಿಯಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹಸೆಮಣೆ ಏರಲು ತಯಾರಾಗಿದ್ದಾರೆ. ತಾನು ಪ್ರೀತಿಸಿದ ಹುಡುಗ ಸಂಗೀತ ನಿರ್ದೇಶಕ ಪಲಾಶ್ ಮುಚ್ಛಿಲ್ ಜೊತೆಗೆ ಮದುವೆ ನಿಶ್ಚಯವಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಪರಭಾಷೆಯಿಂದ ಕನ್ನಡಕ್ಕೆ ಹಾರಿದ ಬ್ಯೂಟಿ..ಈ ಚೆಲುವೆ!
ಹಳದಿ ಶಾಸ್ತ್ರದಲ್ಲಿ ಮಸ್ತ್ ಡಾನ್ಸ್..!
ಈಗಾಗಲೇ ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದು, ವಿವಾಹ ಸಿದ್ಧತೆಗಳು ಆರಂಭವಾಗಿದೆ. ಹಳದಿ ಶಾಸ್ತ್ರ ಮುಕ್ತಾಯವಾಗಿದೆ. ನವೆಂಬರ್ 23ರಂದು ವಿವಾಹ ಸಮಾರಂಭ ನಡೆಯಲಿದ್ದು, ಸ್ಮೃತಿ ಮಂದಾನ ಕುಟುಂಬ ಹಾಗೂ ಪಲಾಶ್ ಮುಚ್ಛಿಲ್ ಕುಟುಂಬ ಜೊತೆಗೆ ಸ್ಟಾರ್ ಆಟಗಾರರು ಕೂಡ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇಬ್ಬರಿಗೂ ಹಳದಿ ಹಚ್ಚುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಇನ್ನು ಅದರಲ್ಲೂ, ಸ್ಮೃತಿ ಮಂದಾನಾಗೆ ಪಲಾಶ್ ಪ್ರಪೋಸ್ ಮಾಡಿರುವ ವೀಡಿಯೋ ಸಖತ್ ವೈರಲ್ ಆಗಿದೆ. 2019 ರಲ್ಲಿ ಇವರಿಬ್ಬರು ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.
ಭಾರತ ಮಹಿಳಾ ತಂಡ ಮೊನ್ನೆ ಮೊನ್ನೆಯಷ್ಟೇ ವಿಶ್ವಕಪ್ ಫೈನಲ್ ಪಂದ್ಯ ಗೆದ್ದ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ, ತಮ್ಮ ಪ್ರೇಮ ನಿವೇದನೆ ಮಾಡಿದ್ದಾರೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ವೀಡಿಯೋದಲ್ಲಿ ಪಲಾಶ್ ಮುಚ್ಛಿಲ್ ಅವರು ಸ್ಮೃತಿ ಮಂದಾನ ಕಣ್ಣಿಗೆ ಬಟ್ಟೆ ಕಟ್ಟಿ ಡಿವೈ ಪಾಟೀಲ್ ಕ್ರೀಡಾಂಗಣದೊಳಗೆ ಕರೆ ತಂದಿದ್ದಾರೆ.
ಪಲಾಶ್ ಅವರು ಸೂಟ್ ತೊಟ್ಟಿದ್ದರೆ ಸ್ಮೃತಿ ಮಂದಾನ ಅವರು ಕಡು ಕೆಂಪು ಬಣ್ಣದ ಗೌನ್ ತೊಟ್ಟಿದ್ದರು. ಈ ಸಂದರ್ಭ ವರ ದೊಡ್ಡದಾದ ಹೂಗುಚ್ಛ ಹಿಡಿದ ವ್ಯಕ್ತಿ ಬರುತ್ತಿರುತ್ತಾನೆ. ಮೈದಾನದ ಮಧ್ಯ ಭಾಗಕ್ಕೆ ಬಂದಾಗ ಸ್ಮೃತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗುತ್ತದೆ. ನಂತರ ಪಲಾಶ್ ಮಂಡಿಯೂರಿ ಗುಲಾಬಿಗಳ ಪುಷ್ಪಗುಚ್ಛ ಮತ್ತು ವಜ್ರದ ಉಂಗುರದೊಂದಿಗೆ ಸ್ಮೃತಿಯ ಮುಂದೆ ಹಿಡಿದು ಅವರಿಗೆ ಪ್ರಪೋಸ್ ಮಾಡುತ್ತಾರೆ. ಇದನ್ನು ನೋಡಿದ ಸ್ಮೃತಿ ಫುಲ್ ಖುಷಿ ಆಗುತ್ತಾರೆ. ಈ ವೇಳೆ ಅವರ ಬಂಧುಮಿತ್ರರು ಮೈದಾನಕ್ಕೆ ಆಗಮಿಸಿ ಶುಭಾಶಯಗಳನ್ನು ತಿಳಿಸುತ್ತಾರೆ. ಇಬ್ಬರೂ ತಮ್ಮ ಎಂಗೇಜ್ ಮೆಂಟ್ ರಿಂಗ್ ತೋರಿಸುತ್ತಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











