ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮೊಟ್ಟೆ ತಿನ್ನುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ..?

Egg: Tulutimes ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೇಯಿಸಿದ ಮೊಟ್ಟೆ ತಿನ್ನುವ ಹವ್ಯಾಸ ನಿಮ್ಮದಾಗಿದ್ದರೆ ಏನೆಲ್ಲ ಲಾಭಗಳಿವೆ..ಸಾಮಾನ್ಯವಾಗಿ ಚಿಕ್ಕವರಿದ್ದಾಗ ಮೊಟ್ಟೆ ತಿನ್ನುವುದನ್ನು ಅಭ್ಯಾಸ ಮಾಡಿಸುತ್ತಾರೆ.

ಇದನ್ನೂ ಓದಿ: ಗರ್ಭಿಣಿ ಸ್ತ್ರೀಯರಿಗೆ ಉತ್ತಮ ಬೀಟ್ರೋಟ್ ಪಾಯಸ…!

ಶುಗರ್‌ ಪೇಷೆಂಟ್ಸ್‌ ಗಳಿಗೆ ಮೊಟ್ಟೆ ತಿನ್ನಿ!
ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ಮಧುಮೇಹ ಕಂಡುಬರುತ್ತಿದೆ. ಹೀಗಾಗಿ ಶುಗರ್‌ ಪೇಷೆಂಟ್ಸ್‌ ಗಳಿಗೆ ಮೊಟ್ಟೆ ತಿನ್ನುವುದರಿಂದ ಬಹಳ ಪ್ರಯೋಜನಗಳಿವೆ. ಮೊಟ್ಟೆ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುವುದಿಲ್ಲ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರದ ಪಟ್ಟಿಯಲ್ಲಿ ಮೊಟ್ಟೆ ಬರುತ್ತದೆ.

ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಮಾಲೆ ಧರಿಸಿದಕ್ಕಾಗಿ ಕ್ಯಾಂಪಸ್ ನಿಂದ ಹೊರಗೆ

ತೂಕ ಇಳಿಕೆಗೆ ಸಹಕಾರಿ!
ಮೊಟ್ಟೆ ತಿನ್ನುವುದರಿಂದ ದೇಹದ ತೂಕ ಕಡಿಮೆಯಾಗಲು ಸಹಾಯಕವಾಗಿದೆ. ಏಕೆಂದರೆ ಇದರಲ್ಲಿ ಪ್ರೋಟೀನ್ ಕಂಡುಬರುತ್ತದೆ, ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಹೀಗಾಗಿ ಹಸಿವು ಬೇಗ ಆಗುವುದಿಲ್ಲ. ಆರೋಗ್ಯವಂತ ವ್ಯಕ್ತಿಯು ಬೆಳಗಿನ ಉಪಾಹಾರದಲ್ಲಿ 2 ಮೊಟ್ಟೆಗಳನ್ನು ತಿನ್ನಬೇಕು.

ಕೊಲೆಸ್ಟ್ರಾಲ್ ನಿಂದ ರಿಲೀಫ್‌ !

ಪ್ರತಿ ದಿನ ಆಹಾರದಲ್ಲಿ ಮೊಟ್ಟೆಯನ್ನು ಸೇವಿಸಿದರೆ ದೇಹದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ . ಮೊಟ್ಟೆಯ ಹಳದಿ ಲೋಳೆಯಲ್ಲಿ ಲಿಪಿಡ್ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಅಧಿಕವಾಗಿರುವುದರಿಂದ ಇದು ಕೊಬ್ಬಿನ ಆಮ್ಲಗಳನ್ನು ಒದಗಿಸುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಸ್ನಾಯುಗಳನ್ನು ಇನ್ನಷ್ಟು ಶಕ್ತಿಯುತಗೊಳಿಸಲು ಮೊಟ್ಟೆ ಸಹಾಯ ಆಗುತ್ತದೆ. ಇದರಿಂದ ದೇಹದಲ್ಲಿ ನಿತ್ರಾಣ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಇದನ್ನೂ ಓದಿ: ಬಾಳೆಗೊನೆಯಲ್ಲಿಯೇ ಗಾಂಜಾ, ಸಿಗರೇಟ್ ಸಾಗಿಸುವ ಪ್ರಯತ್ನ…!

ಹೃದಯದ ಕಾಯಿಲೆ ಇರುವವರಿಗೆ ಒಳ್ಳೆಯದಲ್ಲ!
ಹೃದಯಕ್ಕೆ ಸಂಬಂಧಿಸಿದಂತಹ ಸಮಸ್ಯೆ ಇರುವವರು ಮೊಟ್ಟೆ ಸೇವಿಸುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಮೊಟ್ಟೆ ಹಳದಿ ಭಾಗ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುವುದರಿಂದ ಇದು ರಕ್ತನಾಳಗಳಲ್ಲಿ ಹೋಗುವುದರಿಂದ ರಕ್ತ ಪರಿಚಲನೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಇದರಿಂದ ಆಕ್ಸಿಜನ್ ಪೂರೈಕೆ ಆಗುತ್ತದೆ. ಹಲವಾರು ಜನ ಜಿಮ್ ಗೆ ಹೋಗುವವರು ಮೊಟ್ಟೆಯನ್ನು ಸೇವಿಸುವಂತಹ ಹವ್ಯಾಸ ಇಟ್ಟುಕೊಂಡಿರುತ್ತಾರೆ ಇಂತವರು ಆದಷ್ಟು ಕಡಿಮೆ ಸೇವನೆ ಮಾಡಿದರೆ ಒಳ್ಳೆಯದು.

Do you know what are the benefits of eating eggs?– ತುಳು ಟೈಮ್ಸ್‌

ಇದನ್ನೂ ಓದಿ: ಕೃಷ್ಣಮೃಗಗಳ ಸಾವಿಗೆ ಕಾರಣವಾದ ಗಳಲೆ ಕಾಯಿಲೆ…!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page