ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ

I T I ಪಾಸಾದವರಿಗೆ NORTH WESTERN RAILWAY ಇಲಾಖೆಯಲ್ಲಿ ಅವಕಾಶ

North western railway (ವಾಯುವ್ಯ ರೈಲ್ವೆ) 2025ರ ನೇಮಕಾತಿ ಪ್ರಕ್ರಿಯೆಯು ಆರಂಭಗೊಂಡಿದೆ. ಒಟ್ಟು 898 ಅಪ್ರೆಂಟಿಸ್‌ ಹುದ್ದೆಗಳನ್ನು ತುಂಬಿಸಲು ರೈಲ್ವೆ ಇಲಾಖೆಯು ಮೂಲಕ ನೇಮಕಾತಿ ನಡೆಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಅಕ್ಟೋಬರ್‌ 03,10, 2025 ರಿಂದ ನವೆಂಬರ್‌ 02,11,2025 ಕ್ಕೆ ಕೊನೆಯ ದಿನವಾಗಿರುತ್ತದೆ. ಆಸಕ್ತರು ಅಧಿಕ್ರತ ವೆಬ್‌ಸೈಟ್‌ ((https://nwr.indianrailways.gov.in/)ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಅಭ್ಯರ್ಥಿಗಳ ವಯಸ್ಸು 24 ವರ್ಷಗಳನ್ನು ಮೀರಿರಬಾರದು. ಕೆಲವು ವರ್ಗಗಳಿಗೆ ವಯೋಮಿತಿಯನ್ನು ಸಡಿಲಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.
ಇತರ ಹಿಂದುಳಿದ ವರ್ಗ 3 ವರ್ಷಗಳ ಸಡಿಲಿಕೆ
ವಿಕಲ ಚೇತನರಿಗೆ 10 ವರ್ಷಗಳ ಸಡಿಲಿಕೆ
ಶಿಕ್ಷಣ
10ನೇ ತರಗತಿಯಲ್ಲಿ ಕನಿಷ್ಟ 50% ಅಂಕಗಳೊಂದಿಗೆ ತರಗತಿಯಲ್ಲಿ ಉತ್ತಿರ್ಣರಾಗಿರಬೇಕು.
ಐಟಿಐ ಪ್ರಮಾಣಪತ್ರ NCVT ಅಥವಾ SCVT ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಶುಲ್ಕ
. ಒ ಬಿ ಸಿ ಮತ್ತು ಸಾಮಾನ್ಯ ವರ್ಗದವರಿಗೆ 100ರೂ ಗಳು
. ಉಳಿದ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ರೈಲ್ವೆ ರಿಕ್ರೂಟ್‌ಮೆಂಟ್‌ ಸೆಲ್‌ (RRC) ಇದರ ಅಧಿಕೃತ ವೆಬ್‌ಸೈಟ್‌ನ ಮೂಲಕ ಅರ್ಜಿ ಸಲ್ಲಿಸಬಹುದು. rrcjaipur.in ಇದರ ಮೂಲಕ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ
ಮೆರಿಟ್‌ ಪಟ್ಟಿಯ ಆಧಾರದ ಮೇಲೆ ಆಯ್ಕೆ ನಡೆಸಲಾಗುತ್ತದೆ.
ವೈದ್ಯಕೀಯ ಪರೀಕ್ಷೆಯ ಆಧಾರದ ಮುಖಾಂತರ
ದಾಖಲೆ ಪರಶೀಲನೆ ನಡೆಸಿ ಆಯ್ಕೆಯ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

ಇದನ್ನು ಓದಿ:BPL CARD:ರಾಜ್ಯ ಸರ್ಕಾರದಿಂದ ಅನರ್ಹ ರೇಷನ್ ಕಾರ್ಡ್‌ಗಳು ರದ್ದು.

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page