ಬ್ರೇಕಿಂಗ್ ನ್ಯೂಸ್
ಕರ್ನಾಟಕ

Kushalnagara : ಕಾವೇರಿ ನದಿಯ ಒಡಲಿಗೇ ಮಣ್ಣು ತುಂಬಿ ಅವಾಂತರ…!

Kushalnagara : ಕುಶಾಲನಗರ ತಾಲೂಕಿನ ಮಾದ ಪಟ್ಟಣದಲ್ಲಿ ಅತಿಕ್ರಮಣ ನಡೆಯಲಾಗುತ್ತಿದ್ದು, ಕಾವೇರಿ ನದಿಯ ಒಡಲನ್ನೇ ಅಗೆಯುತ್ತಿದ್ದಾರೆ ಮತ್ತು ನದಿಯ ಒಡಲಿಗೆನೇ ಮಣ್ಣು ತುಂಬಿ ಅವಾಂತರ ಮಾಡುತ್ತಿದ್ದಾರೆ. ಲೋಡುಗಟ್ಟಲೆ ಮಣ್ಣು ತುಂಬುತ್ತಿರುವ ಸ್ಥಳೀಯರು ಕೂಡ ಇದಕ್ಕೆ ಸಾಕ್ಷಿಯಾಗಿರುತ್ತಾರೆ. ಇಲ್ಲಿ ತಿಲಕ್ ಎಂಬ ವ್ಯಕ್ತಿಯ ವಿರುದ್ಧ ಅತಿಕ್ರಮಣ ಮಾಡುತ್ತಿರುವುದರ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು, ನದಿಯ ಅಂಚಿನಲ್ಲಿ ಅಂದ್ರೆ ಅದರ ಹತ್ತಿರದಲ್ಲೇ ತಡೆಗೋಡೆ ಕಟ್ಟಲು ಸಿದ್ಧತೆ ಮಾಡುತ್ತಿದ್ದಾರೆ. ಇದೆಲ್ಲಾ ವಾಣಿಜ್ಯ ಚಟುವಟಿಕೆಗಳಿಗೋಸ್ಕರ ಈ ತರಹದ ಅತಿಕ್ರಮಣ ಆಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.

ಹೌದು…! ಕಾವೇರಿ ನದಿಯ ಹತ್ತಿರವಿರುವ ಅದೆಷ್ಟೋ ಬಿದಿರು ಮೆಳೆಗಳ ಮತ್ತು ಮರಗಳ ನಾಶವಾಗಿರುವುದು ಕೂಡ ಬಹಳ ನೋವನ್ನುಂಟು ಮಾಡಿದ್ದು, ಮಳೆಗಾಲದಲ್ಲಿ ನೀರು ಹರಿಯಲು ತೀವ್ರ ಅಡ್ಡಿಯಾಗುತ್ತಿವೆ. ಅಷ್ಟೇ ಅಲ್ಲದೆ, ಇಲ್ಲಿ ಸುಮಾರು ರೆಸಾರ್ಟ್, ಹೋಟೆಲ್ ಗಳಿವೆ. ಇದರ ಎಲ್ಲಾ ವೇಸ್ಟ್ ನೀರು ಸೀದಾ ಕಾವೇರಿ ನದಿಗೇ ಬರುತ್ತವೆ. ಇದಕ್ಕೆ ಜಿಲ್ಲಾಡಳಿತವಾಗಲೀ, ನಗರ ಸಭೆ, ಪುರಸಭೆ , ಇಲ್ಲಿನ ಗ್ರಾಮ ಪಂಚಾಯತಿ ಕೂಡಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ವಿಪರ್ಯಾಸ. ಇದು ಮೊದಲ ಬಾರಿಯೇನಲ್ಲ. ಅದೆಷ್ಟೋ ಸಲ ಕಂಪ್ಲೇಂಟ್ ಕೂಡಾ ಮಾಡಲಾಗಿದೆ. ಅವರಿಗೆಲ್ಲ ಇನ್ನು ಯಾವ ರೀತಿ ರೆಸ್ಪಾನ್ಸ್ ಮಾಡಬೇಕೆಂದು ನಮಗೆ ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರೊಬ್ಬರು ಮಾಧ್ಯಮದಲ್ಲಿ ಹೇಳಿಕೊಂಡಿರುತ್ತಾರೆ. ಈ ಸ್ಥಳದಲ್ಲಿ ಅವೈಜ್ಞಾನಿಕವಾಗಿ ಪರಿಸರ ಸಂಪೂರ್ಣ ನಾಶವಾಗ್ತಾ ಇದೆ. ಮೊದಲು ಕಾವೇರಿ ನದಿಯ ಮೂಲದಿಂದಲೇ ಇಲ್ಲಿ ಪರಿಸರ ನಾಶವಾಗ್ತಾ ಇದೆ. ಕಾವೇರಿ ನದಿಯಲ್ಲಿ ಆಗುತ್ತಿರುವಂತಹ ಇತರ ಅತಿಕ್ರಮಣಗಳನ್ನ ನಿಲ್ಲಿಸಬೇಕು ಮತ್ತು ಕಾವೇರಿ ನದಿಯನ್ನು ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳುತ್ತಾರೆ.

ನದಿಯ 30 ಮೀಟರ್ ಪ್ರದೇಶದಲ್ಲಿ ಯಾವುದೇ ಕಟ್ಟಡವನ್ನು ಕಟ್ಟಬಾರದು ಎಂಬ ಆಜ್ಞೆ ಇದ್ದರೂ ಕೂಡ ಬರೀ 10 ರಿಂದ 15 ಮೀಟರ್ ಸ್ಥಳದಲ್ಲೇ ಈ ರೆಸಾರ್ಟ್ ಗಳು ಮತ್ತು ಹೋಟೆಲ್ ಗಳು ತಲೆಯೆತ್ತಿದ್ದು, ಇದೀಗ ಅಲ್ಲಿಂದ ಬರುವಂತಹ ಎಲ್ಲಾ ಕಲುಷಿತ ನೀರುಗಳು ನದಿಯನ್ನು ಸಂಪೂರ್ಣವಾಗಿ ಕಲುಷಿತ ಮಾಡುತ್ತಿವೆ. ಇದರ ಬಗ್ಗೆ ಆದಷ್ಟು ಬೇಗ ಪ್ರತಿಕ್ರಿಯೆ ನೀಡಿ, ಆಡಳಿತ ಅಧಿಕಾರಿಗಳ ಬಗ್ಗೆಯೂ ಕ್ರಮವನ್ನು ಕೈಗೊಳ್ಳಬೇಕೆಂದು ಕೆಲ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿರುತ್ತಾರೆ.

ಇದನ್ನೂ ಓದಿ :Kicha Sudeep: ಸುದೀಪ್ ವಿರುದ್ಧ ಮಾತನಾಡಿದ ಮಹಿಳೆಗೆ ಕಿಚ್ಚನ ಅಭಿಮಾನಿಗಳಿಂದ ಧಮ್ಕಿ.!

…………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/PDFUjSkFTZA?si=JMH85nvF-1Ww-kiz

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page