ಕಾಂತಾರ ಸಿನೆಮಾ ತೆರಕಂಡ ಬಳಿಕ ದೈವಕ್ಕೆ ಭಾರೀ ಅಪಚಾರ ಆಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ತುಳುನಾಡಿನ ದೈವಗಳ ನಂಬಿಕೆಯನ್ನು ಬೀದಿಗೆ ತಂದ ಅಪಕೀರ್ತಿ ಕಾಂತಾರ ಸಿನಿಮಾ ತಂಡದ್ದು.ನಂಬಿಕೆ ಆಚರಣೆಯ ಪ್ರತೀಕವಾಗಿದ್ದ ದೈವಗಳು ಇದೀಗ ಮನೋರಂಜನೆಯ ಕೇಂದ್ರ ಆಗಿದೆ. ಚಲನಚಿತ್ರ, ನಾಟಕಗಳಲ್ಲಿ ದೈವಗಳನ್ನು ತೋರಿಸುವುದು ತುಳುನಾಡಿನ ಅಸ್ಮಿತೆಗೆ ಧಕ್ಕೆಯಾಗುತ್ತಿದೆ.
ಕಾಂತಾರದ ಯಶಸ್ಸು ಸಿನಿಮಾಕರ್ಮಿಗಳಿಗೆ ತಲೆಗೆ ಹತ್ತಿಹೋಗಿದೆ. ದೈವಾರಾದನೆ ಇಟ್ಟುಕೊಂಡು ಹೇಗೆ ಬೇಕಾದ್ರೂ ಸಿನಿಮಾ ಮಾಡಬಹುದು. ಆ ಮೂಲಕ ಹಣ ಗಳಿಸಬಹುದು ಎಂಬ ಸೂತ್ರವನ್ನು ಅಂಟಿಸಿಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿರುವವರು ಹೆಚ್ಚಾಗುತ್ತಿದ್ದಾರೆ.
ಕಾಂತಾರ ಸಿನೆಮಾ ತೆರೆಕಂಡ ಬಳಿಕ ದೈವಗಳನ್ನೇ ಕೇಂದ್ರವಾಗಿರಿಸಿಕೊಂಡು ಸಾಲು ಸಾಲು ಸಿನೆಮಾಗಳು ತೆರೆ ಕಾಣ್ತಿವೆ,. ಸಿನೆಮಾಗಳಲ್ಲಿ, ನಾಟಕಗಳಲ್ಲಿ ಅಪಚಾರ ಆಗಿಲ್ಲ ಎಂಬ ವಾದಗಳನ್ನು ಮಾಡುತ್ತಲೇ, ತುಳುನಾಡಿನ ಜನರ ಭಾವನೆಗಳಿಗೆ ಮತ್ತೆ ಮತ್ತೆ ನೋವುಂಟು ಮಾಡುವ ಕೆಲಸ ಸಿನಿಮಾರಂದಿಂದ ನಡೀತಾನೆ ಇದೆ. ಕಾಂತಾರದ ಯಶಸ್ಸನ್ನೇ ಸ್ಪೂರ್ತಿಯಾಗಿಸಿಕೊಂಡು ಸಿನಿಮಾ ಮಂದಿ ದಿನಕ್ಕೊಂದು ಅವಂತಾರ ಸೃಷ್ಟಿಸುತ್ತಿದ್ದಾರೆ. ತುಳುನಾಡಿನ ಜನರು ದೈವಾರಾಧನೆಯ ವಿರುದ್ದ ನಡೆಯುತ್ತಿರುವ ವಿಕೃತಿಗಳನ್ನು ಎಷ್ಟೇ ಖಂಡಿಸಿದರೂ ಸಿನಿಮಾದವ್ರು ಕ್ಯಾರೇ ಮಾಡ್ತಿಲ್ಲ.
ಕೊರಗಜ್ಜ ಸಿನೆಮಾ ತೆರೆಕಾಣಲು ಸಿದ್ಧತೆ
ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿರುವ ಕೊರಗಜ್ಜ ಸಿನೆಮಾ ತೆರೆ ಕಾಣಲು ಸಕಲ ಸಿದ್ಧತೆ ನಡೆದಿದೆ. ಕಳೆದ ವಾರವಷ್ಟೇ ಟ್ರೈಲರ್ ಬಿಡುಗಡೆಗೊಂಡಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆಯಷ್ಟೇ ಝೀ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಕೊರಗಜ್ಜ ಸಿನೆಮಾದ ಗುಳಿಗ ಗುಳಿಗ ವೀಡಿಯೋ ಹಾಡು ಬಿಡುಗಡೆಗೊಂಡಿದ್ದು, ಇದು ತುಳುವರ ಆಕ್ರೋಶಕ್ಕೆ ಕಾರಣವಾಗಿದೆ.
ತೆರೆಮೇಲೆ ಗುಳಿಗ, ಪಂಜುರ್ಲಿ, ಕೊರಗಜ್ಜ..!
ಗುಳಿಗ ಗುಳಿಗ ಹಾಡು ತುಳುವರ ಆಕ್ರೋಶಕ್ಕೆ ಕಾರಣವಾಗಿದೆ. ವಿಚಿತ್ರವಾಗಿ ದೈವಗಳಿಗೆ ಅವಮಾನ ಆಗುವ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಕಾಂತಾರ ಸಿನೆಮಾದಲ್ಲಿ ಬಳಕೆಯಾಗಿದ್ದ ದೈವದ ಪಕ್ಕಾ ನೈಜತೆ ಕಂಡುಬಂದಿಲ್ಲ. ಫ್ಯಾಬ್ರಿಕ್ ಪೈಂಟ್, ಆರ್ಟಿಫೀಶಿಯಲ್ ಉಡುಗೆ, ವೇಷಭೂಷಣ ತುಳುವರಿಗೆ ಇರಿಸು ಮುರಿಸು ಉಂಟುಮಾಡಿದೆ.
ದೈವಕ್ಕೆ ಅವಮಾನ
ಗುಳಿಗನ ಹಾಡಿನಲ್ಲಿ ಗುಳಿಗ, ಕೊರಗಜ್ಜ, ಪಂಜುರ್ಲಿ ದೈವವನ್ನು ತೋರಿಸಲಾಗಿದೆ. ಹೋಲಿಕೆ ಇಲ್ಲದ ವೇಷ, ಮೈತುಂಬಾ ಕೆಂಪು ಬಣ್ಣ ಬಳಿದ ಗುಳಿಗ ಕಲಾವಿದ, ಗೋಲ್ಡನ್ ಬಣ್ಣದಲ್ಲಿ ಪಂಜುರ್ಲಿ, ಪಾಸ್ಟಿಕ್, ಇತರೆ ವಸ್ತು ಬಳಸಿದ ಉಡುಗೆಯನ್ನು ಕಾಣಬಹುದು. ಕೊರಗಜ್ಜ ಸಿನೆಮಾವನ್ನು ಅತ್ಯದ್ಭುವಾಗಿ ನಿರ್ಮಾಣ ಮಾಡಲಾಗಿದೆ. ಯಾವುದೇ ಅಪಚಾರ ಆಗಿಲ್ಲ, ನಾವು ನ್ಯಾಯ ಒದಗಿಸಿದ್ದೇವೆ ಎಂದು ಈ ಹಿಂದೆ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದರು. ಆದರೆ ಬಿಡುಗಡೆಯಾಗಿರುವ ಹಾಡಿನ ದೃಶ್ಯಗಳನ್ನು ಕಂಡ ದೈವಭಕ್ತರು, ತುಳುವರು ಭಾರೀ ಆಕ್ರೋಶಗೊಂಡಿದ್ದಾರೆ.
ಈ ಚಿತ್ರದ ತಾರಾಗಣದಲ್ಲಿ ಕಬೀರ್ ಬೇಡಿ, ಭವ್ಯ, ಶ್ರುತಿ ಕೃಷ್ಣ, ಗಣೇಶ್ ಆಚಾರ್ಯ, ಸಂದೀಪ್ ಸೋಪರ್ಕರ್, ಶುಭಾ ಪೂಂಜಾ, ಸರ್ದಾರ್ ಸತ್ಯ, ನವೀನ್ ಪಡೀಲ್ ಸೇರಿದಂತೆ ವಿವಿಧ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Bengaluru: “ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ” ಕುರಿತು ಬಿಜೆಪಿ ವಿಡಿಯೋ ಬಿಡುಗಡೆ!
=====================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











