ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bengaluru: ವಾಹನ ಸವಾರರಿಗೆ ಗುಡ್‌ ನ್ಯೂಸ್..! ಶೇ.50ರಷ್ಟು‌ ಭಾರೀ ರಿಯಾಯಿತಿ ಯಾಕೆ..?

Bengaluru: ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡದ ಮೇಲೆ ರಾಜ್ಯ ಸರ್ಕಾರ
ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ರಿಯಾಯಿತಿ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಜಾರಿಯಲ್ಲಿರಲಿದ್ದು, ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ  ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಮುಹೂರ್ತ ಇಟ್ಟ ಪಾಪಿ ಹೆಂಡ್ತಿ..!
ಕಳೆದ ಬಾರಿ  ರಿಯಾಯಿತಿ ಘೋಷಿಸಿದಾಗ, ವಾಹನ ಸವಾರರು ಭಾರೀ ಪ್ರತಿಕ್ರಿಯೆ ತೋರಿದ್ದು, 120 ಕೋಟಿ ರೂ. ಗಿಂತ ಹೆಚ್ಚು ಸಂಗ್ರಹವಾಗಿತ್ತು. ಈ ಹಿನ್ನೆಲೆ  ಸರ್ಕಾರ ಮತ್ತೊಮ್ಮೆ ರಿಯಾಯಿತಿ ನೀಡಲು ತೀರ್ಮಾನಿಸಿದೆ. ಸಾರಿಗೆ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ, ಬಾಕಿ ದಂಡ ವಸೂಲಾತಿ ಸುಗಮವಾಗಲು ಹಾಗೂ ಹೆಚ್ಚಿನ ವಾಹನ ಸವಾರರು ದಂಡ ಪಾವತಿಸಲು ಮುಂದೆ ಬರಲು ಈ ಸೌಲಭ್ಯ ನೀಡಿದೆ.

ಕಳೆದ ಬಾರಿ ಕೂಡ ಆಫರ್​​ ನೀಡಲಾಗಿತ್ತು., ಭರ್ಜರಿ ದಂಡದ ಕಲೆಕ್ಷನ್​ ಆಗಿತ್ತು. ತಿಂಗಳುಗಟ್ಟಲೆ  ದಂಡ ಪಾವತಿ ಉಳಿಸಿಕೊಂಡಿರುವ ವಾಹನ ಸವಾರರು ಇದೀಗ ಆಫರ್​ ಬಳಸಿ ದಂಡ ಪಾವತಿಸಬಹುದಾಗಿದೆ. ಬೆಂಗಳೂರಿನಲ್ಲಿ ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ವೆಬ್‌ ಸೈಟ್‌ ಗಳಲ್ಲಿ ದಂಡದ ವಿವರ ಪಡೆದು ಅಲ್ಲೇ ಹಣ ಪಾವತಿಸಬಹುದು. ರಿಯಾಯಿತಿ ಬಳಸಿಕೊಳ್ಳಲು ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: ATM ವಾಹನದಿಂದ 7 ಕೋಟಿ ದರೋಡೆ – ಪೊಲೀಸ್ ಕಾನ್ಸ್ಟೇಬಲ್ ಪ್ರಕರಣದ ಸೂತ್ರಧಾರ

ಜಿಲ್ಲೆಗಳಲ್ಲಿ ಸಮೀಪದ ಯಾವುದೇ ಪೊಲೀಸ್ ಠಾಣೆಗೆ ತೆರಳಿ ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದು. ಇನ್ನುಬೆಂಗಳೂರು ನಗರದಲ್ಲಿ ಸಂಚಾರ ಪೊಲೀಸ್ ಠಾಣೆಗಳು, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ದಂಡ ಪಾವತಿಸಬಹುದು.ಕೆಎಸ್‌ಪಿ ಆ್ಯಪ್, ಬಿಟಿಪಿ ಅಸ್ಲಂ ಪೋರ್ಟಲ್ ಮೂಲಕವೂ ದಂಡ ಪಾವತಿಸಬಹುದು,
ಆನ್‌ಲೈನ್ ಪಾವತಿ ವ್ಯವಸ್ಥೆಲ್ಲೂ ಪಾವತಿಸಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ವಾಹನ ಸವಾರರಿಗೆ ಪ್ರಕರಣ ನಿವಾರಣೆ ಹಾಗೂ ಇಲಾಖೆಗೆ ವಸೂಲಿ ಸುಗಮವಾಗುವುದಕ್ಕೂ ಈ ರಿಯಾಯಿತಿ ನೆರವಾಗಲಿದೆ. ರಾಜ್ಯದಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಬಾಕಿ ದಂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page