ಬ್ರೇಕಿಂಗ್ ನ್ಯೂಸ್
ಕರ್ನಾಟಕ

Mysore: ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಮುಹೂರ್ತ ಇಟ್ಟ ಪಾಪಿ ಹೆಂಡ್ತಿ..!

Mysore: ನಂಜನಗೂಡಿನ‌ ಹದಿನಾರು ಗ್ರಾಮದ ರಾಜೇಂದ್ರ ಎಂಬವನನ್ನು ಚಾಕುವಿನಿಂದ ಕೊಂದ ಪತ್ನಿ ಸಂಗೀತಾಳ ಹಾಗೂ ಆಕೆಯ ಗೆಳೆಯ ಹಾಗೂ ಸಹೋದರನನ್ನು ಪೊಲೀಸರು ಈಗ ಅರೆಸ್ಟ್‌ ಮಾಡಿದ್ದಾರೆ. ಈ  ಕೊಲೆಗೆ ಸಂಬಂಧಪಟ್ಟಂತೆ ಹಲವಾರು ದಾಖಲೆಗಳು ಈಗ ಪತ್ತೆಯಾಗಿದ್ದು, ಸಂಗೀತಾಳ ಕಳ್ಳಾಟ ಬಯಲಾಗಿದೆ.

ಇದೀಗ ಲವರ್ ಜೊತೆಗಿನ ಸಂಗೀತಾಳ ಫೋಟೋಗಳು ವೈರಲ್ ಆಗಿದೆ. ಗಂಡನ ಕೊಂದ‌ ಹೆಂಡತಿಗೆ ಇತ್ತಾ ಅನೈತಿಕ ಸಂಬಂಧ..?
ಎಂಬ ಪ್ರಶ್ನೆಗಳು ಉದ್ಭವಿಸಿದೆ.  ಅನೈತಿಕ ಸಂಬಂಧಕ್ಕಾಗಿ ತನ್ನ   ಗಂಡನಿಗೆ ಹೆಂಡ್ತಿ ಮುಹೂರ್ತ ಇಟ್ಟು ಕೊಲೆ ಮಾಡಿದ್ದಾಳೆ ಅನ್ನೋದು ಗೊತ್ತಾಗುತ್ತಿದೆ.  ರಾಜೇಂದ್ರನನ್ನ ಪ್ರಿಪ್ಲಾನ್ ಮಾಡಿ, ಕೊಲೆ ಮಾಡಿಸಿದ್ದಳು ಸಂಗೀತಾ, ಏಳು ವರ್ಷದ ಹಿಂದೆ ರಾಜೇಂದ್ರನನ್ನೂ ಪ್ರೀತಿಸಿ ಮದುವೆ ಆಗಿದ್ದ ಸಂಗೀತಾ, ಸಂಗೀತಾಗೆ ಪ್ರವೀಣ್  ಎಂಬ ಯುವಕನ ಜೊತೆಗೆ ಲವ್ ಇತ್ತು ಅನ್ನೋದು ಬಯಲಾಗಿದೆ.

ಗೆಳೆಯನ ಜೊತೆ ಸೇರಿಕೊಂಡು ನಾಟಕವಾಡಿದ ಪತ್ನಿ!

ಪ್ರವೀಣ್ ಎಂಬುವನ ಜೊತೆ ಸಲುಗೆಯಿಂದ ಇರುವ ಫೋಟೋಗಳು ರಿವೀಲ್ ಆಗಿದ್ದು,  ವಿಡಿಯೋಕಾಲ್, ವಾಟ್ಸಾಪ್ ಚಾಟ್ ಗಳು ರಿವೀಲ್ ಆಗಿವೆ, ಸಂಗೀತಾ  ತಾಳಿಯನ್ನ ಬಿಚ್ಚಿಟ್ಟು, ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದಾಳೆ.  ಈ ವಿಚಾರ ತಿಳಿದು ಗಂಡ ರಾಜೇಶ್ ನಿಂದ ಲವರ್ ಪ್ರವೀಣ್ ಗೆ ಕರೆ ಮಾಡಿದ್ದ,  ರಾಜೇಶ್ ಇಲ್ಲದ ವೇಳೆ ಪ್ರವೀಣ್   ಮನೆಗೆ ಬಂದು ಹೋಗ್ತಿದ್ದ,  ಈ ವಿಚಾರ ತಿಳಿದು ರಾಜೇಶ್  ಫೋನ್ ನಲ್ಲಿಯೇ ವಾರ್ನಿಂಗ್ ಮಾಡಿದ್ದ,  ರಾಜೇಶ್ ಹೆಂಡತಿ‌ ಸಂಗೀತಾ ನಡೆಗೆ ಬೇಸರ ವ್ಯಕ್ತಪಡಿಸಿದ್ದ. ಅಕ್ಟೋಬರ್ 25 ರಂದು ಸಂಗೀತಾ ಗೆಳೆತಿಯ ಮನೆಗೆ ಕರೆದುಕೊಂಡು‌ ಹೋಗಿದ್ದಳು, ವಾಪಸ್ ಮನೆಗೆ ಬರುವಾಗ ದರೋಡೆ ನೆಪದಲ್ಲಿ ಅಟ್ಯಾಕ್ ಪ್ಲಾನ್ ಮಾಡಿದ್ದಳು,  ಗಂಡ ರಾಜೇಶ್ ಗೆ ಚಾಕುವಿನಿಂದ ಚುಚ್ಚಿ,  ಹೆಂಡತಿ ಸಂಗೀತಾ ಕೊಲೆಗೆ ಯತ್ನಿಸಿದ್ದಳು.  ಈ ವೇಳೆ ದಾರಿಹೋಕರು ಬಂದ ಕಾರಣಕ್ಕೆ ಅಲ್ಲೇ   ಬಿಟ್ಟು ಸಂಗೀತಾಳ ಗ್ಯಾಂಗ್‌  ಪರಾರಿಯಾಗಿದ್ದರು.

ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ರಾಜೇಶ್‌ ಕೊನೆಯುಸಿರು.!

ನಂತರ ಸಾವು- ಬದುಕಿನ ನಡುವೆ  ರಾಜೇಶ್ ಹೋರಾಟ ನಡೆಸುತ್ತಿದ್ದ ಎನ್ನಲಾಗಿದೆ. ಇನ್ನು ಸಂಗೀತಾ  ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಾಟಕವಾಡಿದ್ದಳು.  ಇದೀಗ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ  ಬಳಿಕ ಸಂಗೀತಾ, ಸಹೋದರ ಹಾಗೂ ಸ್ನೇಹಿತರನ್ನು ಅರೆಸ್ಟ್ ಮಾಡಲಾಗಿದೆ.  ನಂಜನಗೂಡು ಠಾಣಾ ಪೊಲೀಸರಿಂದ ಸಿಸಿಟಿವಿ ಪರಿಶೀಲಿಸಿ ನಡೆಸಿ ವಿಚಾರಣೆ ಬಳಿಕ ಈಗ ಬಂಧಿಸಲಾಗಿದೆ.  ವಿಚಾರಣೆ ವೇಳೆ ಕೊಲೆ ನಾಟಕ‌ ಬಯಲಾಗಿತ್ತು, ಇದಾದ ಬಳಿಕ 20 ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ ಕೊನೆಯುಸಿರೆಳೆದಿದ್ದಾರೆ. ರಾಜೇಶ್ ಮೊಬೈಲ್ ಪರಿಶೀಲನೆ ವೇಳೆ ಸಂಗೀತಾಳ ಕಳ್ಳಾಟ ಬಟಾಬಯಲಾಗಿದೆ. ಸಂಗೀತಾಳ ಕೃತ್ಯ ಕಂಡು  ಕುಟುಂಬ ಬೆಚ್ಚಿ ಬಿದ್ದಿದೆ.  ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ ತಾಯಿ ಕಣ್ಣೀರು ಹಾಕುತ್ತಿದ್ದಾರೆ.  ಇದೀಗ ಈ ಪ್ರಕರಣದ ಬಗ್ಗೆ  ಕಠಿಣ ಶಿಕ್ಷೆ ವಿಧಿಸುವಂತೆ ಕುಟುಂಬಸ್ಥರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page