ಬ್ರೇಕಿಂಗ್ ನ್ಯೂಸ್
ಕರ್ನಾಟಕ

Sandalwood: ಪಟ ಪಟ ಮಾತನಾಡುವ ನಟಿ ರಚನಾ ಇಂದರ್ ಈಗ ಏನ್ಮಾಡ್ತಿದ್ದಾರೆ ಗೊತ್ತಾ..?

Sandalwood: ಸ್ಯಾಂಡಲ್‌ ವುಡ್‌ ನ ಕೆಲವು ನಟಿಯರು ಒಮ್ಮೆ ಹಿಟ್‌ ಸಿನಿಮಾಗಳ ಮೂಲಕ ಜನ ಮೆಚ್ಚುಗೆ ಪಡೆದು, ಕೆಲವೊಮ್ಮೆ ನಾಪತ್ತೆಯಾಗಿರುತ್ತಾರೆ, ಇದೀಗ  ಕಾಣೆಯಾಗಿದ್ದ  ನಟಿ ರಚನಾ ಇಂದರ್‌  ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ.

ಇದೀಗ ತೀರ್ಥರೂಪ ತಂದೆಯವರಿಗೆ’ ಸಿನಿಮಾದ ಪೆಪ್ಪಿ ಸಾಂಗ್ ರಿಲೀಸ್ ಆಗಿದ್ದು,  ಈ ಹಾಡಿನಲ್ಲಿ ರಚನಾ ಇಂದರ್ ಹಾಗೂ ನಿಹಾರ್ ಮುಖೇಶ್ ಮಿಂಚಿದ್ದಾರೆ. ಅಪ್ಪಟ ಕನ್ನಡ ಟೈಟಲ್ ಹಾಗೂ ತಾರಾಬಳಗದ ಮೂಲಕ‌ ಕುತೂಹಲ ಹೆಚ್ಚಿಸಿರುವ ಸಿನಿಮಾ ತೀರ್ಥರೂಪ ತಂದೆಯವರಿಗೆ. ಈ ಹಿಂದೆ ಹೊಂದಿಸಿ ಬರೆಯರಿ ಕಥೆ ಹೇಳಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಎರಡನೇ ಪ್ರಯತ್ನ ಇದು. ಈಗಾಗಲೇ ತೀರ್ಥರೂಪ ತಂದೆಯವರಿಗೆ ಚಿತ್ರದ ನನದೇ ಜಗದಲಿ ಎಂಬ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ನೀ ನನ್ನವಳೇ ಎಂಬ ಮೆಲೋಡಿ ಗೀತೆ ರಿಲೀಸ್ ಆಗಿದೆ.

ನೀ ನನ್ನವಳೇ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ, ಈಶಾ ಸುಚಿ ಧ್ವನಿಯಾಗಿದ್ದಾರೆ. ಜೋ‌ ಕೋಸ್ಟ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‌ನಾಯಕ ನಿಹಾರ್ ಮುಖೇಶ್ ಹಾಗೂ ನಾಯಕಿ ರಚನಾ ಇಂದರ್ ಹಾಡಿನಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ, ಅಶ್ವಿತಾ ಹೆಗಡೆ ಸೇರಿದಂತೆ ಅನುಭವಿ ತಾರಾಬಳಗದವಿದೆ. ‘ತೀರ್ಥರೂಪ ತಂದೆಯವರಿಗೆ’ ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿದೆ.

ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ‘ಬ್ಲಿಂಕ್’ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ. ಅವರು ‘ತೀರ್ಥರೂಪ ತಂದೆಯವರಿಗೆ’ ಸಿನಿಮಾಗೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ದೀಪಕ್ ಯರಗೇರಾ ಅವರು ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಮಾಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಅವರು ಸಂಭಾಷಣೆ ಬರೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page