ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bengaluru: 8 ವರ್ಷದ ಬಾಲಕಿ ಹೊಟ್ಟೆಯಲ್ಲಿ 3 ಕೆ.ಜಿ ಕೂದಲು ಪತ್ತೆ!

Bengaluru: ಬೆಂಗಳೂರಿನಲ್ಲಿ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದೇ ರೀತಿ ಇದೀಗ
8 ವರ್ಷದ ಬಾಲಕಿ ಹೊಟ್ಟೇಲಿ 3 ಕೆಜಿ ಕೂದಲು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ.

ಮಕ್ಕಳ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಜಡೆಯಂತೆ ಗಂಟು ಕಟ್ಟಿಕೊಂಡಿದ್ದ 3 ಕೆ.ಜಿ ಕೂದಲಿನ ಗಡ್ಡೆ ತೆಗೆದಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್‌ ಮಹಿಳೆ ಮತ್ತು  ಮಕ್ಕಳ ಆಸ್ಪತ್ರೆಯ  ವೈದ್ಯರು ಯಶಸ್ವಿಯಾಗಿ ಕೂದಲನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ: ಮಹಿಷಾಸುರನ ವೇಷ ಕಳಚುತ್ತಿದ್ದಂತೆ ಯಕ್ಷಗಾನ ಕಲಾವಿದನಿಗೆ ಹೃದಯಾಘಾತ..!

ಮಕ್ಕಳ ಕ್ರಿಟಿಕಲ್‌ ಕೇರ್‌ ತಜ್ಞರಾದ ಡಾ.ಎಚ್.ಎಸ್‌.ಸುರೇಂದ್ರ ನೇತೃತ್ವದಲ್ಲಿ ಡಾ.ಪ್ರದೀಪ್‌, ಡಾ.ಹೇಮಾ, ಡಾ. ದೀಪ್ತಿ, ಡಾ.ಕೇಶವ ಮೂರ್ತಿ, ಡಾ.ಮಂಜುನಾಥ್ ಅವರನ್ನು ಒಳಗೊಂಡ ವಿವಿಧ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಈ ಬಾಲಕಿ ಸುಮಾರು 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ.  ಹಾಗಾಗಿ  ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ಹಲವಾರು ವರ್ಷಗಳಿಂದಲೇ ಕೂದಲು ನುಂಗುವ ಹವ್ಯಾಸ ಇಟ್ಟುಕೊಂಡಿದ್ದ ಈಕೆಯ ಮೇಲೆ ಯಾರಿಗೂ ಅನುಮಾನವೇ ಬರಲಿಲ್ಲ ಎನ್ನಲಾಗಿದೆ.  ಇದರ ಪರಿಣಾಮಇತ್ತೀಚೆಗೆ ತೂಕ ಕಡಿಮೆಯಾಗುತ್ತಿತ್ತು. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಹೊಟ್ಟೆ ಭಾಗದಲ್ಲಿ ಗಡ್ಡೆ ರೀತಿಯ ಗುರುತು ಪತ್ತೆಯಾಗಿದ್ದರಿಂದ ಭಯಗೊಂಡ ಪೋಷಕರು ನೇಟಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಪರಿಶೀಲಿಸಿದಾಗ, ಹೊಟ್ಟೆ ಭಾಗದಲ್ಲಿ ಗಡ್ಡೆ ಇದ್ದಿದ್ದರಿಂದ ಸಿಟಿ-ಸ್ಕ್ಯಾನ್‌ ಮಾಡಿದ್ದರು. ಸ್ಕ್ಯಾನ್‌ ವರದಿಯಲ್ಲಿ ಕೂದಲು ಇರುವುದು ಪತ್ತೆಯಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಕೂದಲು ಹೊರ ತೆಗೆಯಲಾಗಿದೆ.

ಇದನ್ನೂ ಓದಿ: ನ. 28ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ..!

ಸುಮಾರು 3 ಕೆ.ಜಿ. ಅಷ್ಟು ಕೂದಲು ಸುರುಳಿ ಆಕಾರದಲ್ಲಿ ಸುತ್ತಿಕೊಂಡು ಬರೋಬ್ಬರಿ 35 ಸೆ.ಮೀ. ಉದ್ದದಷ್ಟು ಜಡೆ ಸೃಷ್ಟಿಯಾಗಿತ್ತು. ಹೊಟ್ಟೆ ಭಾಗದಲ್ಲಿ ಸಣ್ಣ ಕರುಳಿನವರೆಗೂ ಕೂದಲಿನ ಗಡ್ಡೆ ವ್ಯಾಪಿಸಿತ್ತು. ಮೊದಲಿಗೆ ಎರಡು ಬಯೋಪ್ಸಿ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ಪ್ರಯತ್ನಿಸಿದರೂ ಕೂದಲು ತುಂಡಾಗುತ್ತಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಕೂದಲಿನ ಗಡ್ಡೆ ತೆಗೆಯಲಾಗಿದೆ ಎಂದು ಈ ಬಗ್ಗೆ  ಡಾ.ಎಚ್.ಎಸ್‌. ಸುರೇಂದ್ರ ಮಾಹಿತಿ ನೀಡಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page