ಬ್ರೇಕಿಂಗ್ ನ್ಯೂಸ್
ಕರ್ನಾಟಕ

Government : ಹೊರಗುತ್ತಿಗೆ ನೌಕರರ ನೇಮಕಕ್ಕೆ ಗಡುವು : ರಾಜ್ಯ ಸಚಿವ ಸಂಪುಟ

Government : ಹೊರಗುತ್ತಿಗೆ ನೌಕರರ ನೇಮಕದಲ್ಲಿ ಬದಲಾವಣೆ ತರಲಾಗಿದೆ. ಇಲ್ಲಿ, ಹೊರಗುತ್ತಿಗೆ ನೌಕರರು ಎಂದರೆ, ಒಂದು ಸಂಸ್ಥೆಗೆ ನೇರವಾಗಿ ನೇಮಕವಾಗದೇ, ತೃತೀಯ ಪಕ್ಷ ಅಥವಾ ಏಜೆನ್ಸಿ ಅಥವಾ ಗುತ್ತಿಗೆ ಕಂಪನಿಯ ಮೂಲಕ ಕೆಲಸ ಮಾಡುವ ನೌಕರರು. ಇವರೊಂದಿಗೆ ಸಂಸ್ಥೆಗೆ ನೇರ ಉದ್ಯೋಗ ಸಂಬಂಧ ಇರದು.

ಆರ್ಥಿಕ ಹೊರೆ ಬೀಳುವ ಅಂದಾಜು ;

ಇದೀಗ ಸರಕಾರಿ ಇಲಾಖೆ, ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕ ಪದ್ಧತಿಯನ್ನು 2028ರ ಮಾರ್ಚ್‌ನೊಳಗೆ ಸಂಪೂರ್ಣ ನಿಲ್ಲಿಸಲು ರಾಜ್ಯ ಸಚಿವ ಸಂಪುಟ ಉಪಸಮಿತಿ ನಿರ್ಣಯಿಸಿದೆ. ಖಾಸಗಿ ಏಜೆನ್ಸಿಗಳ ಮೂಲಕ ಬಹುದೊಡ್ಡ ಸಂಖ್ಯೆಯಲ್ಲಿ ನೇಮಕಗೊಂಡಿರುವ ಹೊರಗುತ್ತಿಗೆ ಸೇವೆಯನ್ನು ಈ ಗಡುವಿನೊಳಗೆ ಹಂತಹಂತವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ. ಈ ತೀರ್ಮಾನದಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುವರಿ 10,000 ಕೋಟಿ ರೂ. ಆರ್ಥಿಕ ಹೊರೆ ಬೀಳುವ ಅಂದಾಜು ಮಾಡಲಾಗಿದೆ.

ನಿಗದಿತ ಕಾಲದವರೆಗೆ ಮಾತ್ರ ಈ ತಾತ್ಕಾಲಿಕ ವ್ಯವಸ್ಥೆ ;

ಹೊರಗುತ್ತಿಗೆ ಸೇವೆ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ಸಂಪುಟ ಉಪಸಮಿತಿ ಈ ನಿರ್ಣಯ ಮಾಡಿದೆ. ಖಾಲಿ ಹುದ್ದೆಗಳಿಗೆ ನೇರ ನೇಮಕ ಆಗುವವರೆಗೆ ಕಚೇರಿಗಳ ನಿರ್ವಹಣೆ ಮತ್ತು ಆಡಳಿತಕ್ಕೆ ತೊಂದರೆಯಾಗದಂತೆ ಏಜೆನ್ಸಿಗಳ ಮೂಲಕ ಪಡೆಯುತ್ತಿರುವ ಹೊರಗುತ್ತಿಗೆ ಸೇವೆಯನ್ನು ಮುಂದುವರಿಸಬೇಕು. ಅಲ್ಲಿಯವರೆಗೆ ಈ ನೌಕರರಿಗೆ ಏಜೆನ್ಸಿಗಳಿಂದ ಅಗುತ್ತಿರುವ ಶೋಷಣೆ ತಗ್ಗಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಘವೊಂದನ್ನು ಸ್ಥಾಪಿಸಿ ಮೇಲ್ವಿಚಾರಣೆ ವ್ಯವಸ್ಥೆ ಮಾಡಬೇಕು. ನಿಗದಿತ ಕಾಲದವರೆಗೆ ಮಾತ್ರ ಈ ತಾತ್ಕಾಲಿಕ ವ್ಯವಸ್ಥೆ ಮುಂದುವರಿಯಬೇಕು ಎಂದು ಸಂಪುಟ ಉಪಸಮಿತಿ ಶಿಫಾರಸು ಮಾಡಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಈ ನಿರ್ಣಯ ಮಾಡಲಾಗಿದೆ.

ಇದನ್ನೂ ಓದಿ :Madikeri : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ

…….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=90oupIZX6wzeX976

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page