ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bangalore : ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಅಡ್ವಾನ್ಸ್ ಹೆಚ್ಚಳ : ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ

Bangalore : ಬೆಂಗಳೂರಿನಲ್ಲಿ ವಾಸಿಸುವ ಜನರು ಎಲ್ಲರೂ ಸ್ವಂತ ಮನೆ ಮಾಡಿಕೊಂಡು ಜೀವಿಸೋದು ಕಷ್ಟ. ಅದರಲ್ಲೂ ಉದ್ಯೋಗ ನಿಮಿತ್ತ ಊರಿನಿಂದ ಬೆಂಗಳೂರಿಗೆ ತೆರಳಿದವರಂತೂ ಬಾಡಿಗೆ ಮನೆ ಅಥವಾ ರೂಂ ಗಳನ್ನೇ ನೋಡಬೇಕಾಗುತ್ತವೆ. ಹೀಗಿರುವಾಗ, ಬೆಂಗಳೂರಿನ ಬಾಡಿಗೆದಾರರ ವಸತಿ ವೆಚ್ಚಗಳು ಹೆಚ್ಚಾಗುತ್ತಿವೆ ಎಂದು ಹೇಳುತ್ತಿದ್ದಾರೆ. ಅಲ್ಲದೇ 400 ರಿಂದ 600 ಚದರ ಅಡಿ ಭಾಗದ ಮನೆಗಳ ಬೆಲೆ ಈಗ ₹30 ಸಾವಿರದಿಂದ ₹40 ಸಾವಿರ ತಲುಪಿದೆ. ಅಲ್ಲದೇ ಬಾಡಿಗೆ ಮನೆಯ ಅಡ್ವಾನ್ಸ್‌ ಮೊತ್ತವು ಬರೋಬ್ಬರಿ ಲಕ್ಷಗಳಿಗೆ ತಲುಪಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಕಳಪೆ ನಿರ್ವಹಣೆ ಮತ್ತು ಹೆಚ್ಚುವರಿ ಶುಲ್ಕಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಮನೆಗಳ ಅಡ್ವಾನ್ಸ್ ಸಹ ಹೆಚ್ಚಳ ;

ಇದಕ್ಕೆ ಮುಖ್ಯ ಕಾರಣ, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಹಾಗೂ ಮನೆಗಳ ಅಡ್ವಾನ್ಸ್ ಸಹ ಹೆಚ್ಚಳವಾಗುತ್ತಿದೆ. ಮನೆ ಬಾಡಿಗೆದಾರರು ಮುಂಗಡ ಹಣ ನೀಡುವುದರಲ್ಲಿ ಸೋತು ಹೋಗಿದ್ದಾರೆ. ಆದರೆ ಆಸ್ತಿ ಮಾಲೀಕರು ಇದನ್ನು ಬೇರೆ ಕಾರಣಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ.

ಇನ್ನು ಬೆಂಗಳೂರಿನಲ್ಲಿ ಹಲವು ಆಸ್ತಿ ಮಾಲೀಕರು ಮನೆ ಬಾಡಿಗೆ ನೀಡುವಾಗ ಪಡೆದುಕೊಳ್ಳುವ ತೆಗೆದುಕೊಳ್ಳುವ ಅಡ್ವಾನ್ಸ್‌ನ ಮೊತ್ತದಲ್ಲಿ ಮನೆ ಬಿಡುವಾಗ ಪೂರ್ಣ ಪ್ರಮಾಣದಲ್ಲಿ ಕೊಡುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಮೊದಲಿನಿಂದಲೂ ಮನೆಗಳ ಆಸ್ತಿ ಮಾಲೀಕರು ಮನೆ ಬಾಡಿಗೆದಾರರ ಅಡ್ವಾನ್ಸ್‌ನಲ್ಲಿ ಮನೆಯ ಫೈಂಟಿಂಗ್ ಸೇರಿದಂತೆ ಕೆಲವೊಂದು ವಿಷಯಗಳಿಗೆ ಅಡ್ವಾನ್ಸ್‌ ಮೊತ್ತದಲ್ಲಿ ಕಡಿತ ಮಾಡುವುದು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಮನೆ ಬಾಡಿಗೆದಾರರಿಂದ ಕೇಳಿ ಬರುತ್ತಿದೆ.

ಇದನ್ನೂ ಓದಿ :Rain Alert: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=90oupIZX6wzeX976

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page