Devotional : ನಾವು ಸಾಮಾನ್ಯವಾಗಿ ಎಲ್ಲರೂ ಪೂಜಿಸುವ ದೈವ, ದೇವರನ್ನೇ ಪೂಜಿಸುತ್ತೇವೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಆದರೆ ಇಲ್ಲೊಂದು ಜನರ ವರ್ಗ ವಿಶೇಷವೆಂಬಂತೆ ಬಾವಲಿಗಳನ್ನು ಪೂಜಿಸುತ್ತಾರೆ. ಹಾರಬಲ್ಲ ಏಕೈಕ ಸಸ್ತನಿಯಾಗಿರುವ ಈ ಬಾವಲಿಗಳು ಎಂದರೆ ಕೆಲವರಿಗೆ ಅದೇನೋ ಭಯ. ಹಗಲಿನಲ್ಲಿ ಮರಗಳಲ್ಲಿ ತಲೆಕೆಳಗಾಗಿ ನೇತಾಡಿಕೊಂಡು ಮಲಗಿಕೊಂಡಿದ್ದರೆ, ರಾತ್ರಿಯ ವೇಳೆ ಸದಾ ಚಟುವಟಿಕೆಯಿಂದಿರುತ್ತವೆ. ಹೌದು…! ನೋಡುವುದಕ್ಕೆ ವಿಚಿತ್ರ ಹಾಗೂ ಭಯ ಹುಟ್ಟಿಸುವ ಈ ಜೀವಿಯನ್ನು ಪೂಜಿಸುವ ಗ್ರಾಮವೊಂದಿದೆ. ಇದು ನಿಮಗೆ ವಿಚಿತ್ರ ಎನಿಸಿದ್ರು ಇದನ್ನು ನೀವು ನಂಬಲೇ ಬೇಕು. ಬಿಹಾರದ ವೈಶಾಲಿ ಜಿಲ್ಲೆಯ ಸರ್ಸಾಯಿ ಗ್ರಾಮದ ಜನರು ಬಾವಲಿಯನ್ನು ದೇವರಂತೆ ಪೂಜಿಸುತ್ತಾರೆ.
ಲಕ್ಷ್ಮಿಯನ್ನು ಬಾವಲಿಗಳಲ್ಲಿ ಕಾಣುವ ಭಕ್ತಿ ಇವರದ್ದು. ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ಸರ್ಸಾಯಿ ಗ್ರಾಮದ ಜನರು ಬಾವಲಿಗಳನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ. ನಾವೆಲ್ಲರೂ ಸಸ್ತನಿ ಜೀವಿಗಳೆಂದುಕೊಂಡಿರುವ ಬಾವಲಿಯನ್ನು ಈ ಗ್ರಾಮದ ಜನರು ಲಕ್ಷ್ಮೀ ದೇವಿಯ ಸಂಕೇತವೆಂದು ಪೂಜಿಸುತ್ತಾರೆ. ಗ್ರಾಮಸ್ಥರು ಬಾವಲಿಗಳನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿ ಕಾಣುತ್ತಾರೆ. ಇವರನ್ನು ಸದಾ ಈ ಬಾವಲಿಗಳೇ ರಕ್ಷಿಸುತ್ತವೆಯಂತೆ. ಹೀಗಾಗಿ ಕೆಟ್ಟ ಶಕುನಗಳಿಂದ ರಕ್ಷಿಸುವ ದೇವದೂತರು ಎಂದು ನಂಬಲಾಗಿದೆ. ಇನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಿರುವ ಕಾರಣ ಈ ಗ್ರಾಮದ ಜನರಿಗೆ ಇಲ್ಲಿಯವರೆಗೆ ಹಣದ ಸಮಸ್ಯೆಯೇ ಬಂದಿಲ್ಲ ಎನ್ನಲಾಗಿದೆ. ಯಾವುದೇ ಧಾರ್ಮಿಕ ಸಮಾರಂಭಗಳಿಗೆ ಈ ಬಾವಲಿಗಳು ಇರಲೇಬೇಕು ಎನ್ನುವುದು ಇಲ್ಲಿನವರ ನಂಬಿಕೆ. ಹೀಗಾಗಿ ಮಂಗಳಕರ ಸಮಾರಂಭಗಳು ನಡೆದಾಗ ಬಾವಲಿಗಳಿಗೆ ಸಾಂಪ್ರದಾಯಿಕ ನೈವೇದ್ಯವವಿಡಲಾಗುತ್ತದೆ ಎಂಬ ಮಾಹಿತಿಯಿದೆ.
ಮಧ್ಯಯುಗದ ಸಂದರ್ಭ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದ ಆ ಸಮಯ ಬಾವಲಿಗಳು ಇಲ್ಲಿ ಬಂದು ನೆಲೆಯೂರಿದ್ದೇ ತಡ, ಆ ರೋಗವೇ ಮಾಯ. ಈ ಬಾವಲಿಗಳ ಆಗಮನದ ಬಳಿಕ ಈ ಸಾಂಕ್ರಾಮಿಕ ರೋಗಕ್ಕೆ ಮುಕ್ತಿ ಸಿಕ್ಕಿತು ಎನ್ನಲಾಗಿದೆ. ಅಂದಿನಿಂದ ಬಾವಲಿಗಳು ನಮ್ಮನ್ನು ರಕ್ಷಿಸುತ್ತವೆ ಎನ್ನುವ ನಂಬಿಕೆಯಲ್ಲಿ ಈ ಸಸ್ತನಿಗಳನ್ನು ಪೂಜಿಸಲಾಗುತ್ತಿದೆ.
ಇದನ್ನೂ ಓದಿ :Belagavi : ಕೃಷ್ಣಮೃಗಗಳ ಸಾವಿಗೆ ಕಾರಣವಾದ ಗಳಲೆ ಕಾಯಿಲೆ…!
……
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=90oupIZX6wzeX976











