ಬ್ರೇಕಿಂಗ್ ನ್ಯೂಸ್
ಕರ್ನಾಟಕ

Food : ಗರ್ಭಿಣಿ ಸ್ತ್ರೀಯರಿಗೆ ಉತ್ತಮ ಬೀಟ್ರೋಟ್ ಪಾಯಸ…!

Food : ಬೀಟ್ರೂಟ್ ಪಾಯಸವು ರಕ್ತ ಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್ರೋಟ್ ನಲ್ಲಿ ಕಬ್ಬಿಣಾಂಶ ಹೆಚ್ಚಿರುವುದರ ಜೊತೆಗೆ, ಹಾಲನ್ನು ಹಾಕುವುದರಿಂದ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಿಗುತ್ತದೆ. ಎರಡು ಸೇರಿ ರಕ್ತ ನಿರ್ಮಾಣವನ್ನು ಸುಧಾರಿಸುತ್ತದೆ. ಬಿಪಿ ಇರುವವರಿಗೆ ಇದು ತಡೆಯನ್ನು ಹಾಕುತ್ತದೆ ಅಂದ್ರೆ ಬಿಪಿಯನ್ನು ಕಂಟ್ರೋಲ್ ಮಾಡುತ್ತದೆ ಮತ್ತು ಯಕೃತ್ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಚರ್ಮಕ್ಕೂ ಕಾಂತಿಯನ್ನು ನೀಡುತ್ತದೆ, ಮಲಬದ್ಧತೆಯನ್ನು ಕೂಡಾ ಇದು ಸುಧಾರಿಸುತ್ತದೆ.

ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು ;

ಬೀಟ್ರೂಟ್ ಪಾಯಸವನ್ನು ಹೆಚ್ಚಾಗಿ ಗರ್ಭಿಣಿಯರು ಸೇವಿಸುವಂತೆ ಹೇಳುತ್ತಾರೆ. ಯಾಕೆಂದರೆ ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು ಮತ್ತು ಯಾವಾಗಲೂ ಎನರ್ಜಿಯಿಂದ ಇರುವಂತೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಕೆಂಪು ಕಣಗಳ ಹೆಚ್ಚಳಕ್ಕೆ ಕೂಡ ಇದು ಸಹಕಾರಿಯಾಗಿದೆ ಎಂದು ಹೇಳಲಾಗಿದೆ‌. ಬೀಟ್ರೋಟ್ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು ಬಿಟ್ರೋಟ್, ಹಾಲು, ಸಕ್ಕರೆ ಅಥವಾ ಬೆಲ್ಲ, ಏಲಕ್ಕಿ, ತುಪ್ಪ,‌ ಗೋಡಂಬಿ, ದ್ರಾಕ್ಷಿ. ಇದು ಬಹಳ ಸುಲಭವಾಗಿ ಮಾಡುವಂತಹ ಪಾಯಸವಾದ ಕಾರಣ ಮೊದಲಿಗೆ ಬೀಟ್ರೂಟ್ ಅನ್ನು ಚೆನ್ನಾಗಿ ಬೇಯಿಸಿ, ಬೇಯಿಸಿದ ಬೀಟ್ರೋಟ್ ನ್ನು ಕಿವುಜಿ ಅಥವಾ ಸ್ಮ್ಯಾಶ್ ಮಾಡಿದ ನಂತರ ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಬೇಕು. ಅದಕ್ಕೆ ಬೀಟ್ರೋಟ್ ಸೇರಿಸಿ 10 ನಿಮಿಷ ಕಳೆದ ನಂತರ ಚೆನ್ನಾಗಿ ಕುದಿ ಬರುವ ತನಕ ಕುದಿಸಿ. ಆನಂತರ ಅದಕ್ಕೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಏಲಕ್ಕಿ ಪುಡಿಯನ್ನು ಪರಿಮಳಕ್ಕೆ ಹಾಕಬೇಕು. ಆನಂತರ ತುಪ್ಪದಲ್ಲಿ ಹುರಿದಂತಹ ಗೋಡಂಬಿ ದ್ರಾಕ್ಷಿಯನ್ನು ಹಾಕಿದರೆ ಬೀಟ್ರೋಟ್ ಪಾಯಸ ತಯಾರು.

ಇದನ್ನೂ ಓದಿ :Rain Alert: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=90oupIZX6wzeX976

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page