ಬ್ರೇಕಿಂಗ್ ನ್ಯೂಸ್
ಕರ್ನಾಟಕ

BPL CARD:ರಾಜ್ಯ ಸರ್ಕಾರದಿಂದ ಅನರ್ಹ ರೇಷನ್ ಕಾರ್ಡ್‌ಗಳು ರದ್ದು.

BPL CARD;ರಾಜ್ಯದಲ್ಲಿ ಅನರ್ಹ BPL ಕಾರ್ಡ್‌ ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.ಉಚಿತವಾಗಿ ಸಿಗುತ್ತಿರುವ ಅನ್ನಬಾಗ್ಯ ಯೋಜನೆಯ ಪಡಿತರ ಕಾರ್ಡ್‌ ಪರಿಷ್ಕರಣೆ ಮಾಡಿದೆ.ಇದರಿಂದ ಉಚಿತವಾಗಿ ಸಿಗುವ ಅನ್ನಬಾಗ್ಯ ಯೋಜನೆಯನ್ನು ಪಡೆಯುತ್ತಿರುವ ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಬೀಳುತ್ತಿದೆ.

ರಾಜ್ಯ ಸರ್ಕಾರವು ಈ ಹಿಂದೆಯೇ ಅನರ್ಹ ಕಾರ್ಡ್ ಗಳ ನಿಷ್ಕಿಯಗೊಳಿಸಲು ಮುಂದಾಗಿತ್ತು.ಈ ಬಾರಿ ಮತ್ತೆ ಕಾರ್ಡ್‌ಗಳನ್ನು ಪರಿಷ್ಕರಿಸುವುದಕ್ಕೆ ಮುಂದಾಗಿದೆ.ಈ ಬಾರಿ ಕಾರ್ಡ್‌ಗಳನ್ನು ಡಿಲೀಟ್‌ ಮಾಡಿದ್ದು ಮಾತ್ರವಲ್ಲದೆ.ಡಿಲೀಟ್‌ ಆದ ಕಾರ್ಡ್‌ಗಳ ಹೆಸರಿನಲ್ಲಿ ಇರುವ ವ್ಯಕ್ತಿಗಳ ವಿವರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಅಂಟಿಸಲಾಗಿದೆ.

ಇನ್ನು ನೋಟಿಸ್‌ ಬೋರ್ಡುಗಳಲ್ಲಿ ವಾರ್ಷಿಕ ಆದಾಯ 1.20 ಲಕ್ಷ ಮೀರಿದೆ.ಈ ಕಾರಣಗಳಿಂದ ನಿಮ್ಮ (http://Ration card)ರದ್ದುಗೊಳ್ಳುತ್ತಿದೆ.ಈ ಬಾರಿ ನಿಮಗೆ ಕೊನೆಯ ಅನ್ನಬಾಗ್ಯ ಯೋಜನೆಯ ಪಡಿತರವನ್ನು ನೀಡಲಾಗುತ್ತಿದೆ.ಮುಂದಿನ ತಿಂಗಳಿನಿಂದ ನೀವು ಪಡಿತರವನ್ನು ಪಡೆಯಲು ಅನರ್ಹರು ಎಂದು ನೋಟಿಸ್‌ ಹಾಕಲಾಗಿದೆ.

ಸಾಲಕ್ಕಾಗಿ ಬ್ಯಾಂಕಿನಲ್ಲಿ ಐಟಿ ಫೈಲಿಂಗ್‌ ತೋರಿಸಿದವರಿಗೂ ಕಾರ್ಡ್‌ ರದ್ದಾಗುವ ಶಾಕ್‌!


ಕೃಷಿಕರು ಬ್ಯಾಂಕ್‌ನಲ್ಲಿ ಸಾಲವನ್ನು ಪಡೆಯಲು  ಐಟಿ ಫೈಲಿಂಗ್‌ ಮಾಡಿಸಿದ್ದರೆ ಅಂತಹ ಕಾರ್ಡ್‌ ರದ್ದಾಗುವ ಸಾಧ್ಯತೆ ದಟ್ಟಾವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲ,  ವಾಹನಗಳನ್ನು ಖರೀದಿಸಲು ಪಡೆದ ಸಾಲಗಳು, ಇವುಗಳನ್ನು ಸುಲಭವಾಗಿ ಪಡೆಯಲು ಐಟಿ ಫೈಲಿಂಗ್‌ ಮಾಡಿಸಿರುವ ಪಡಿತರ ಫಲಾನುಭವಿಗಳಿಗೆ ಕಾರ್ಡ್‌ ರದ್ದಾಗುವ  ಸಾಧ್ಯತೆಗಳು ಕಂಡು ಬರ್ತಿದೆ.

ಕಾರ್ಡ್‌ ರದ್ದಾದವರಲ್ಲಿ ಕುಟುಂಬದ ಎಲ್ಲರು ಆದಾಯ ಪಾವತಿದಾರರಲ್ಲ ಅವರಲ್ಲಿ ಒಬ್ಬ ಸದಸ್ಯನು ಬ್ಯಾಂಕಿನಿಂದ ಸಾಲವನ್ನು ಪಡೆಯಲು ಐಟಿ ಫೈಲಿಂಗ್‌ ಮಾಡಿಸಿದ್ದಾರೆ.ಆ ಕುಟುಂಬದ ಎಲ್ಲರು ಪಡಿತರ ಪಡೆಯಲು ಅನರ್ಹರಾಗಿರುತ್ತಾರೆ. 
ಸರ್ಕಾರದ ಈ ನಿರ್ದಾರದಿಂದ ಕೆಲವೊಮ್ಮೆ ಬಡವರು, ಮದ್ಯಮ ವರ್ಗದವರು ಕೂಡ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಪಡೆಯಲು ಅನರ್ಹರಾಗಿರುತ್ತಾರೆ.
ಇದನ್ನೂ ಓದಿ:RSS 100 YEARS:ಬಿಜೆಪಿ ನಾಯಕರ ನಡೆಗೆ ಸ್ವಯಂಸೇವಕರ ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page