ಬ್ರೇಕಿಂಗ್ ನ್ಯೂಸ್
ಪುತ್ತೂರುಬಂಟ್ವಾಳಮಂಗಳೂರು

Puttur: ಕೊಟ್ಟಿಗೆಯಲ್ಲಿಟ್ಟಿದ್ದ 16 ಗೋಣಿ ಅಡಿಕೆ ಕಳವು

Puttur: ಕೊಟ್ಟಿಗೆಯಲ್ಲಿಟ್ಟಿದ್ದ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ‌ ಮೌಲ್ಯದ ಅಡಿಕೆ ಕಳವಾದ ಘಟನೆ ನಡೆದಿದೆ. ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ಕಳುವು ಆಗಿದ್ದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಂತಿಗೋಡು ಗ್ರಾಮದ ವೀರಮಂಗಲ ಅಚ್ಯುತ ಗೌಡ ಎಂಬವರು ಕೊಟ್ಟಿಗೆಯಲ್ಲಿ 36 ಗೋಣಿ ಅಡಿಕೆ ತುಂಬಿಸಿಟ್ಟಿದ್ದರು.

ಒಟ್ಟು 36 ಗೋಣಿ ಚೀಲಗಳಲ್ಲಿ ಒಣಗಿಸಿದ ಅಡಿಕೆಯನ್ನು ಮಾ.25ರಂದು ಕೊಟ್ಟಿಗೆಯ ಅಟ್ಟದಲ್ಲಿ ಇರಿಸಿದ್ದರು. ನ.7ರಂದು ವಿವಾಹ ನಡೆದ ಬಳಿಕ ನ.12ರಂದು ಕೊಟ್ಟಿಗೆ ಅಟ್ಟದಲ್ಲಿ ನೋಡಿದಾಗ 16 ಗೋಣಿ ಅಡಿಕೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಅಡಿಕೆ ಮೌಲ್ಯ ರೂ. 1 ಲಕ್ಷಕ್ಕೂ ಅಧಿಕವಾಗಿದ್ದು, ಘಟನೆ ಕುರಿತು ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Puttur : ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನೂತನ ಯೋಜನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದಿನ ನಿಗದಿ…!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=tTkUySKt1kRjkGWm

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 29

You cannot copy content of this page