Food : ನೀವೇನಾದ್ರೂ ಹಗಲಕಾಯಿ ಪಾಯಸ ತಿಂದಿದ್ದೀರಾ…? ಹಗಲಕಾಯಿ ಎಂದಾಕ್ಷಣ ಕೆಲವರಂತು ಒಂದಷ್ಟು ದೂರಕ್ಕೆ ಓಡಿ ಬಿಡುತ್ತಾರೆ. ಇನ್ನು ಕೆಲವರು ಚಪ್ಪರಿಸಿಕೊಂಡು ಹಗಲಕಾಯಿ ಪಲ್ಯ ತಿನ್ನೋ ವರ್ಗವನ್ನು ಕಾಣುತ್ತೇವೆ. ಹಾಗಿದ್ರೆ ಈ ಹಗಲಕಾಯಿ ಪಾಯಸ ಎಷ್ಟು ಜನ ಇಷ್ಟ ಪಟ್ಟು ತಿನ್ತಾರೆ ಅನ್ನೋದನ್ನ ನೋಡೋಣ ಬನ್ನಿ. ಇದು ಜೀರ್ಣಶಕ್ತಿಗೆ ಬೇಕಾದ ಉತ್ತಮ ಆಹಾರದಲ್ಲಿ ಒಂದಾಗಿದ್ದು, ಯಕೃತ್ತ್ ಶುದ್ಧೀಕರಣ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ತೂಕ ನಿಯಂತ್ರಣ, ರಕ್ತಹೀನತೆ ತಡೆಯುವಲ್ಲಿ ಸಹಕಾರಿಯಾಗಿದೆ.
ಹಗಲಕಾಯಿ ಪಾಯಸ ಮಾಡಲು ಬೇಕಾಗುವ ವಸ್ತುಗಳು :
ಹಗಲಕಾಯಿ – 1 ಕಪ್ (ಸಣ್ಣ ತುಂಡುಗಳನ್ನಾಗಿ ಮಾಡಿ), ಬೆಲ್ಲ – ¾ ಕಪ್ (ರುಚಿಗೆ ತಕ್ಕಂತೆ), ತೆಂಗಿನ ಹಾಲು – 1 ಕಪ್ (ದಪ್ಪ), ಏಲಕ್ಕಿ, ತುಪ್ಪ – 1 ಚಮಚ ಕಾಯಿ ಚೂರು, ದ್ರಾಕ್ಷಿ.
ಮಾಡುವ ವಿಧಾನ : ತುರಿದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ ಹಗಲಕಾಯಿ ಬೇಯಿಸುವುದು, 8 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಜೊತೆಗೆ, ಬೆಲ್ಲದ ಸಿರಪ್ ಮಾಡಿಟ್ಟುಕೊಂಡಿರಿ. (ಬೆಲ್ಲ, ನೀರು ಹಾಕಿ ಸಿರಪ್ ರೀತಿ), ಈಗ ಬೇಯಿಸಿದ ಹಗಲಕಾಯಿ ಮೇಲೆ ಬೆಲ್ಲದ ಸಿರಪ್ ಹಾಕಿ. 5 ನಿಮಿಷ ಚೆನ್ನಾಗಿ ಕುದಿಸಿ, ತೆಂಗಿನ ಹಾಲನ್ನು ಸೇರಿಸಿಕೊಳ್ಳಬೇಕು. ಸ್ಟವ್ ಅಥವಾ ಒಲೆಯಲ್ಲಿ ಪಾಯಸ ಮಾಡುವಾಗ ಬೆಂಕಿ ನಿಧಾನಕ್ಕೆ ಉರಿಯುತ್ತಿದರೆ ಒಳ್ಳೆಯದು. ಇದಕ್ಕೆ ಸ್ವಲ್ಪ ದಪ್ಪ ತೆಂಗಿನ ಹಾಲನ್ನು ಸೇರಿಸಿದರೆ ರುಚಿ ಹೆಚ್ಚುತ್ತೆ. ನಂತರ ಇದಕ್ಕೆ, ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಇನ್ನೊಂದೆಡೆ, ಒಂದು ಚಿಕ್ಕ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಕಾಯಿ ಹಾಗೂ ದ್ರಾಕ್ಷಿಯನ್ನು ಬಾಡಿಸಿ ಪಾಯಸಕ್ಕೆ ಸೇರಿಸಿ. ಇದನ್ನು ವಾರಕ್ಕೆ 1–2 ಬಾರಿ ತಿನ್ನುವುದು ಉತ್ತಮ. ಅಲ್ಲದೇ, ಊಟದ ಕೊನೆಯಲ್ಲಿ ಅಥವಾ ಸಂಜೆ 4 ರಿಂದ 5 ಗಂಟೆಯ ಸಮಯದಲ್ಲಿ ಈ ಪಾಯಸ ತಿಂದರೆ ಜೀರ್ಣಕ್ಕೆ ಒಳ್ಳೆಯದು. ಹಗಲಕಾಯಿ ಸ್ವಭಾವತಃ ಶೀತಪ್ರಕೃತಿ, ನೀರಿನ ಅಂಶ ಹೆಚ್ಚು ಇರುವ ತರಕಾರಿ. ಆದ್ದರಿಂದ ಪಾಯಸವೂ ಹಗುರ ಮತ್ತು ಜೀರ್ಣಕ್ಕೆ ಸುಲಭ. ಹಾಗೆಯೇ, ದೇಹದ ಬಿಸಿ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಇದನ್ನೂ ಓದಿ :Bengaluru: ರಾಜ್ಯದಲ್ಲಿ ಇನ್ಮುಂದೆ ಹಾವು ಕಚ್ಚಿದ್ರೆ ಚಿಕಿತ್ಸೆಗೆ ದುಡ್ಡು ಕೊಡಬೇಕಾಗಿಲ್ಲ..!
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=tTkUySKt1kRjkGWm











