ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಬಿಗ್‌ ಬಾಸ್‌ ಮನೇಲಿ ಅಶ್ವಿನಿ ಗೌಡ ಕಣ್ಣೀರಧಾರೆ..! ಮನೆಗೆ ಹೋಗ್ತೀನಿ ಅಂತ ಪಟ್ಟು!

BBK12: ಬಿಗ್‌ ಬಾಸ್ ಮನೇಲಿ ಹೋರಾಟಗಾರ್ತಿ ಅಶ್ವಿನಿ ಗೌಡ  ತನ್ನ ಮಾತುಗಳಿಂದಲೇ ಹೈಡ್ರಾಮಾ ಮಾಡ್ತಿದ್ದಾರೆ ಅಂತ ವೀಕ್ಷಕರು ಮಾತನಾಡಿಕೊಳ್ತಿದ್ದಾರೆ. ಮನೆಯ ಒಳಗಡೆ ಎಷ್ಟೇ ಸ್ಟ್ರಾಂಗ್‌ ಅಂತ ಅನಿಸಿದರೂ ಅಶ್ವಿನಿ ಗೌಡ ಕಣ್ಣೀರಲ್ಲೇ ಮುಳುಗುತ್ತಿದ್ದಾರೆ.

ಇದೀಗ ಮನೆಯಲ್ಲಿ ಗಿಲ್ಲಿನಟನ ಜೊತೆ ವಾಗ್ವಾದ ನಡೆಯುತ್ತಲೇ ಇದೆ. ಮನೆಮಂದಿ ಎಲ್ಲಾರೂ ಗಿಲ್ಲಿನ ಬಯ್ಯುತ್ತಿದ್ದಾರೆ,  ಗಿಲ್ಲಿಯ ವರ್ತನೆ ಕೂಡ ಬರ್ತಾ ಬರ್ತಾ ವಿಪರೀತ ಕಿರಿ ಕಿರಿಯಾಗತೊಡಗಿದೆ. ಇನ್ನು ಕೇವಲ ಬಿಗ್‌ ಬಾಸ್‌ ಮನೆಯಲ್ಲಿ ಅಲ್ಲದೇ ಹೊರಗೆ ಕೂಡ ಗಿಲ್ಲಿ ಕೆಟ್ಟ ರೀತಿಯಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಇದೀಗ ನಿನ್ನೆಯ ಎಪಿಸೋಡ್‌ ನಲ್ಲಿ ಗಿಲ್ಲಿ ಅಶ್ವಿನಿ ಗೌಡ ಜೊತೆ ಮಾತನಾಡಿದ ರೀತಿಗೆ ಅಶ್ವಿನಿ ಕೋಪದಿಂದ ವರ್ತಿಸಿದ್ದಾರೆ. ನಾನೂ ಕೂಡ ಬಿಡಲ್ಲ ಅನ್ನೋ ರೀತಿಯಾಗಿ ಗಿಲ್ಲಿಗೆ ಸವಾಲು ಎಸೆಯುವ ರೀತಿ ಅಶ್ವಿನಿ ಗೌಡ ಮಾತನಾಡಿದಾರೆ.  ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ – ಗಿಲ್ಲಿ ನಡುವೆ ನಿನ್ನೆಯೇ ದಿನ ಉಸ್ತುವಾರಿ ವಿಚಾರಕ್ಕೆ ವಾಗ್ವಾದ ನಡೆದಿದೆ. ಅಶ್ವಿನ ಗೌಡ ಗಿಲ್ಲಿಗೆ ಯೋಗ್ಯತೆ ಬಗ್ಗೆ ಮಾತನಾಡಿದ್ದರು. ಇತ್ತ ಗಿಲ್ಲಿ ‘ನೀನು – ತಾನು’ ಅಂತ ಏಕವಚನದಲ್ಲೇ ಅಶ್ವಿನಿ ವಿರುದ್ಧ ಗುಡುಗಿದ್ದಾರೆ.  ಇದಕ್ಕೆ ಅಶ್ವಿನಿ ಗೌಡ ಕುಗ್ಗಿ, ‘ನಾವು ಮರ್ಯಾದೆಗೋಸ್ಕರ’ ಬದುಕೋದು’ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ಇನ್ನು ಇಂದು ರಿಲೀಸ್‌ ಆದಂತಹ ಪ್ರೋಮೋದಲ್ಲಿ  ಅಶ್ವಿನಿ ಗೌಡ ಗುಡುಗಿದ್ದು, ಮನೆ ಬಿಟ್ಟು ಹೋಗಲು ರೆಡಿಯಾಗಿದ್ದಾರೆ. ಕ್ಯಾಪ್ಟನ್ ರಘು ಮನೆಯ ಕೆಲಸ ಮಾಡೋಕೆ ಅಶ್ವಿನಿ ಅವರಿಗೆ ಹೇಳಿದ್ದಾರೆ. ಇದಕ್ಕೆ ಬ್ಯಾಕ್ ಪೇನ್ ಆಗುತ್ತಿದೆ. ಹತ್ತು ನಿಮಿಷದಲ್ಲಿ ಮಾಡುತ್ತೇನೆ ಅಂತ ಅಶ್ವಿನಿ ಹೇಳಿದ್ದಾರೆ. ಹತ್ತು ನಿಮಿಷದಲ್ಲಿ ಬ್ಯಾಕ್ ಪೇನ್ ಕಡಿಮೆ ಆಗುತ್ತಾ, ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ. ಎಲ್ಲರೂ ಮಾತನಾಡೋಕೆ ಬರ್ತಿರಿ ಎಂದು ರಘು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಅಶ್ವಿನಿ  ಗೌಡ ಮಾಡಲ್ಲ ಹೋಗ್ರಿ’ ಅಂತ ಕಿರುಚಾಡಿ ಹೇಳಿದ್ದಾರೆ. ಇದಕ್ಕೆ ರಘು ‘ಮಾಡ್ಕೊಬೇಡ ಹೋಗೇ’. ಎಂದು ತಿರುಗಿ ಹೇಳಿದ್ದಾರೆ. ಹೋಗು, ಗೀಗು ಅಂತ ಮಾತನಾಡುವ ಅಧಿಕಾರ ನಿನಗಿಲ್ಲ. ನೀನ್ಯಾರೋ ಏಕವಚನದಲ್ಲಿ ಮಾತನಾಡೋಕೆ. ಯಾವನೋ ನೀನು..ಎಂದು ಹೇಳಿ ಬಾಗಿಲು ತರೆದು ಹೋಗಲು ರೆಡಿಯಾಗಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page