Yuvanidhi Yojana : ಕರ್ನಾಟಕ ಸರ್ಕಾರದ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸಹಾಯ ನೀಡಿ, ಉದ್ಯೋಗದಲ್ಲಿ ಪರಿಪೂರ್ಣವಾಗಿ ಸಿದ್ಧರಾಗುವ ತನಕ ನೀಡುವ ಯೋಜನೆಯೇ ಯುವನಿಧಿ ಯೋಜನೆ. ಪದವಿ ಅಥವಾ ಡಿಪ್ಲೊಮಾ ಮುಗಿಸಿದ್ದರೂ ಉದ್ಯೋಗವನ್ನು ಇನ್ನೂ ಹೊಂದದ ಯುವಕರಿಗೆ ಈ ಮೂಲಕ ಅವರು ಸ್ವಯಂ ಉದ್ಯೋಗ, ಉದ್ಯೋಗ ಹುಡುಕುವ ಕಾರ್ಯಗಳನ್ನು ಸಂಪೂರ್ಣವಾಗಿ ಕೈಗೊಳ್ಳುವಂತೆ ಪ್ರೋತ್ಸಾಹಿಸುವುದು. ಅದರಲ್ಲೂ ಪದವಿ ಮುಗಿಸಿಕೊಂಡ ನಿರುದ್ಯೋಗಿಗಳಿಗೆ: ಪ್ರತಿ ತಿಂಗಳು ₹3,000 ರಷ್ಟು ಹಾಗೂ ಡಿಪ್ಲೊಮಾ ಮುಗಿಸಿಕೊಂಡ ನಿರುದ್ಯೋಗಿಗಳಿಗೆ: ಪ್ರತಿ ತಿಂಗಳು ₹1,500 ರಷ್ಟು ನೀಡಲಾಗುವುದು ಎಂದು ಆಯೋಜಿಸದ್ದರು. ಈ ಸೌಲಭ್ಯವು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಾವಧಿಯವರೆಗೆ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು.
ಇದೀಗ, ಯುವನಿಧಿ ಫಲಾನುಭವಿಗಳು ಉಚಿತ ಕೌಶಲ್ಯ ತರಬೇತಿಗಾಗಿ ತಮ್ಮ ತಾಲ್ಲೂಕಿನ ಸಮೀಪದ ಐಟಿಐ, ಜಿಟಿಟಿಸಿ, ಸಿಡಾಕ್ ತರಬೇತಿ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿ ವಿವಿಧ ಕೌಶಲ್ಯ ತರಬೇತಿ ಪಡೆಯುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಜಿಲ್ಲೆಯ ಎಲ್ಲಾ ಯುವನಿಧಿ ಫಲಾನುಭವಿಗಳು ಯುವನಿಧಿ ಪ್ಲಸ್ ಯೋಜನೆಯಡಿ ಕೌಶಲ್ಯ ತರಬೇತಿ ಪಡೆಯಲು ತಮ್ಮ ತಾಲ್ಲೂಕಿನ ಸಮೀಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು(ಐಟಿಐ), ಸಿಡಾಕ್ ತರಬೇತಿ ಸಂಸ್ಥೆ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಗಳ ತರಬೇತಿ ಸಂಸ್ಥೆಗಳನ್ನು ಇದೇ ನ.24ರೊಳಗೆ ನೇರವಾಗಿ ಸಂಪರ್ಕಿಸಿ ಸ್ವ ವಿವರಗಳೊಂದಿಗೆ ನೋಂದಾಯಿಸುವ ಮೂಲಕ ಉಚಿತವಾಗಿ ವಿವಿಧ ಕೌಶಲ್ಯ ತರಬೇತಿ ಪಡೆಯಬೇಕು ಎಂದು ವರದಿಯಾಗಿರುತ್ತದೆ.
ಇದನ್ನೂ ಓದಿ :Alert: ನೀವು ವಾಟ್ಸಾಪ್ ಬಳಸ್ತಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಗಮನವಿಟ್ಟು ಓದಿ!
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=tTkUySKt1kRjkGWm











