Pomegranate : ದಾಳಿಂಬೆ ಕೃಷಿ ಕರ್ನಾಟಕದ ಒಣಭೂ ಪ್ರದೇಶಗಳಿಗೆ ಅತ್ಯಂತ ಸೂಕ್ತ. ಕಡಿಮೆ ನೀರಿನಲ್ಲೂ ಉತ್ತಮ ಹಣಕಾಸಿನ ಲಾಭ ನೀಡುವ ಫಲವಾಗಿ ಇದು ರೈತರಿಗೆ ಜನಪ್ರಿಯವಾಗಿದೆ. ಆದರೆ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರೋಗ ಹೆಚ್ಚು ಹಿಡಿಯಬಹುದು. ಹಾಗಾಗಿ, ತಾಪಮಾನ ನೋಡಿಕೊಳ್ಳುವುದು ಮುಖ್ಯ. ಪ್ರತೀ ಗಿಡದಿಂದ ಸರಾಸರಿ 10–15 kg, ಉತ್ತಮ ನಿರ್ವಹಣೆಯಲ್ಲಿ 20–25 kg ಯಷ್ಟು ದಾಳಿಂಬೆ ಸಿಗುತ್ತದೆ.
ವಿಶೇಷವಾಗಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಮಾರು 2,344 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ದಾಳಿಂಬೆ ಬೆಳೆ ವಿಸ್ತರಣೆಯಾಗಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ ಪ್ರದೇಶ ಬೆಳೆಯುತ್ತಲೇ ಇದೆ. ದ್ರಾಕ್ಷಿ ತೋಟಗಳನ್ನು ಕಿತ್ತು ದ್ರಾಕ್ಷಿ ಚಪ್ಪರಗಳಲ್ಲೇ ದಾಳಿಂಬೆ ಗಿಡಗಳನ್ನು ನಾಟಿ ಮಾಡಲಾಗಿದೆ. ಇನ್ನೊಂದೆಡೆ ನೆರೆಹೊರೆಯ ಜಿಲ್ಲೆಯವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಮೀನನ್ನು ಲೀಸ್‌ಗೆ ಪಡೆದು ದಾಳಿಂಬೆ ಬೆಳೆಯನ್ನು ಹಾಕಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ದಾಳಿಂಬೆಯ ಬೆಲೆ ಏರಿಕೆಯಾಗುವ ಹಿನ್ನಲೆ ಇಲ್ಲಿನ ರೈತರು ದಾಳಿಂಬೆ ಕೃಷಿಯನ್ನೇ ನಂಬಿರುತ್ತಾರೆ.
ಭಾರಿ ಸೂಕ್ಷ್ಮತೆ ಮತ್ತು ಸ್ವಚ್ಛತೆ ಬಯಸೋ ದಾಳಿಂಬೆ ಬೆಳೆಯನ್ನು ಬಹಳ ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿರುವ ಜಿಲ್ಲೆಯ ರೈತರು ಈಗ ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ರಾತ್ರಿಯಿಡೀ ಕಾವಲು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ತೋಟಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ದೊಣ್ಣೆ, ಲೈಟ್ ಹಿಡಿದು ತಿರುಗಾಡುವಂತಾಗಿದೆ. ಇಲ್ಲಿನ ಜನರಿಗೆ ದಾಳಿಂಬೆ ರಕ್ಷಣೆ ಮಾಡುವುದು ಭಾರಿ ಕಷ್ಟ. ಗಿಡಗಳನ್ನು ಕಟ್ಟಿಂಗ್ ಮಾಡಲು ಬರುವ ಕೂಲಿ ಕಾರ್ಮಿಕರಿಂದಲೂ ಬ್ಯಾಕ್ಟೀರಿಯಾ ರೋಗ ಹರಡುವ ಅಪಾಯವಿದೆ. ಕೂಲಿ ಕಾರ್ಮಿಕರು ಬಳಸುವ ಕತ್ತರಿಗಳನ್ನು ಸ್ಯಾನಿಟೈಸ್ ಮಾಡಿಯೇ ಕಟಿಂಗ್‌ಗೆ ಬಳಸಬೇಕು. ಇಲ್ಲವಾದಲ್ಲಿ ಕತ್ತರಿಗಳಲ್ಲಿ ಅಡಗಿಕೂತಿರುವ ಬ್ಯಾಕ್ಟೀರಿಯಾಗಳು ಗಿಡಕ್ಕೆ ಆವರಿಸಿದರೆ ಇಡೀ ತೋಟವೇ ರೋಗಗಳಿಗೆ ಬಲಿಯಾಗುವ ಸಾಧ್ಯತೆಗಳು ಇರುತ್ತವೆ. ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡಾ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಹಾಗಿದ್ದರೆ ಮಾತ್ರ ಸಂಪೂರ್ಣ ಹಣ್ಣಾದ, ಆರೋಗ್ಯಯುತ ದಾಳಿಂಬೆ ಸಿಗಲು ಸಾಧ್ಯವೆಂದು ರೈತರು ಜಾಗೃತೆ ವಹಿಸುತ್ತಾರೆ.
ಇದನ್ನೂ ಓದಿ :Alert: ನೀವು ವಾಟ್ಸಾಪ್ ಬಳಸ್ತಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಗಮನವಿಟ್ಟು ಓದಿ!
……
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=tTkUySKt1kRjkGWm











