Bantwal: ಬುರ್ಖಾ ಹಾಕಿಕೊಂಡು ಮಾರುವೇಷದಲ್ಲಿ ಬಂದ ಹೆಂಡತಿಯೇ ಗಂಡನಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ. ಬಿ.ಸಿ.ರೋಡ್ KSRTC ಬಸ್ ನಿಲ್ದಾಣದ ಬಳಿಯ ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ನ. 19ರ ಬುಧವಾರ ರಾತ್ರಿ ನಡೆದಿದೆ.
ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯ ಮಾಲೀಕ ಕೃಷ್ಣ ಕುಮಾರ್ ಸೋಮಯಾಜಿ ಗಾಯಗೊಂಡವರು. ಪತ್ನಿ ಜ್ಯೋತಿ ಸೋಮಯಾಜಿ ಚೂರಿ ಇರಿದಾಕೆ. ಆರೋಪಿ ಮಹಿಳೆಯ ಜ್ಯೋತಿ ಸೋಮಾಯಾಜಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ಕೃಷ್ಣ ಕುಮಾರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ ವೇಳೆ ಏಕಾಏಕಿ ಸೋಮಯಾಜಿ ಟೆಕ್ಸ್ಟ್ ಟೈಲ್ಸ್ ಮಳಿಗೆಗೆ ಬುರ್ಖಾ ಧರಿಸಿ ಬಂದ ಹೆಂಡತಿ ಜ್ಯೋತಿ, ಅಂಗಡಿಯ ಕ್ಯಾಶ್ ಕೌಂಟರಿನಲ್ಲಿದ್ದ ಪತಿಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Puttur: ಬಿಜೆಪಿ – ಪುತ್ತಿಲ ಪರಿವಾರದಲ್ಲಿ ಬಿರುಕು! ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ಪುತ್ತಿಲ ಗೈರು
==============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/hOy5CycSYqo?si=kN5HjWltTutQOZjM











