ಭಾರತ ಸೇನಾ ಮುಖ್ಯಸ್ಥರು ಪಾಕಿಸ್ಥಾನಕ್ಕೆ ನೀಡಿದ ಎಚ್ಚರಿಕೆಗೆ ಪಾಕಿಸ್ತಾನ ಎದುರೇಟು ನೀಡಿದೆ.
ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನ ಪ್ರಾಯೋಜಿತ ಭಯೊತ್ಪಾದನೆಯನ್ನು ನಿಲ್ಲಿಸದೆ ಹೋದರೆ ಜಗತ್ತಿನ ಭೂಪಟದಲ್ಲಿ ನಿಮ್ಮನ್ನು ಆಳಿಸಿಹಾಕಲಾಗುತ್ತದೆ.
ಎಂದು ಎಚ್ಚರಿಕೆಯನ್ನು ಸಂದೇಶವನ್ನು ನೀಡಿದ್ದರು.ಪಾಕಿಸ್ತಾನವು ಪಹಲ್ಗಾಮ್ನಲ್ಲಿ ಪ್ರವಾಸಿ ಅಮಾಯಕರ ಬಲಿ ಪಡೆದ ನಂತರ ಅದಕ್ಕೆ ಪ್ರತಿಯಾಗಿ ಬಾರತವು ನಡೆಸಿದ “ಆಪರೇಷನ್ ಸಿಂದೂರ”ದ ಮೂಲಕ ಪಾಕಿಸ್ತಾನವನ್ನು ಬಗ್ಗು ಬಡಿಯಿತು. ಆ ಸಮಯದಲ್ಲಿ ತೋರಿಸಿದ ಸಂಯವನ್ನು ಮುಂದೆ ಎಂದಿಗೂ ತೋರಿಸುವುದಿಲ್ಲ. ಎಂದು ಈ ಬಾರಿ ಖಡಕ್ ಎಚ್ಚರಿಕೆಯನ್ನು ಭಾರತೀಯ ಸೇನಾ ಮುಖ್ಯಸ್ಥರು ನೀಡಿದ್ದರು.
ಸರ್ ಕ್ರೀಕ್ ಪ್ರದೇಶದ ಕುರಿತು ಎಚ್ಚರಿಕೆ ಸಂದೇಶ ರವಾನೆ ಈ ಪ್ರದೇಶವು ಭಾರತದ ಗುಜರಾತ್ನ ಕಛ್ ನ ರಣ್ ಮತ್ತು ಪಾಕಿಸ್ತಾನದ ಸಿಂಧ್ ಪ್ರದೇಶದ ನಡುವೆ ಇರುವ 96 ಕಿ. ಮೀ ಉದ್ದದ ಜೌಗು ಪ್ರದೇಶದ ಮದ್ಯೆ ಇರುವ ವಿವಾದಿತ ಪ್ರದೇಶವಾಗಿದೆ.
ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನವು ಯಾವುದೇ ರೀತಿಯ ಮಿಲಿಟರಿ ಕಾರ್ಯಕ್ಕೆ ಮುಂದಾದರೆ ಅದರ ಪ್ರಕಿಯೆಯು “ಇತಿಹಾಸ ಮತ್ತು ಭೂಪಟ ಎರಡನ್ನು ಬದಲಾಯಿಸಬೇಕಾಗುತ್ತದೆ.
ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಮತ್ತೆ ಹೋರಾಟ ಶುರುವಾದರೆ ಭಾರತವನ್ನು ತಮ್ಮ ವಿಮಾನ ಅವಶೇಷಗಳಡಿಯಲ್ಲಿ ಸಮಾಧಿ ಮಾಡುತ್ತೇವೆ ಎಂಬ ಹೇಳಿಕೆಯು ಪಾಕಿಸ್ಥಾನದಿಂದ ಹೊರಬಿದ್ದಿದೆ.ಭಾರತದಿಂದ ಹೊಸ ಆಕ್ರಮಣ ಮುಂದುವರಿದರೆ ಧೈರ್ಯವಾಗಿ ಎದುರಿಸಿ ನಿಲ್ಲುತ್ತೇವೆ ಎಂಬ ಹೇಳಿಕೆಯನ್ನು ಪಾಕಿಸ್ತಾನದ ಸೇನಾವಕ್ತಾರರು ನೀಡಿದ್ದಾರೆ.











