ಬ್ರೇಕಿಂಗ್ ನ್ಯೂಸ್
ಕರ್ನಾಟಕ

Mantri Mall : ಮಂತ್ರಿಮಾಲ್ ಗೆ ಮತ್ತೊಮ್ಮೆ ಬೀಗ : ತೆರಿಗೆ ಕಟ್ಟಲು ಬಾಕಿ

Mantri Mall : ಬೆಂಗಳೂರಲ್ಲಿ ತುಂಬಾನೇ ಇಷ್ಟಪಡುವಂತಹ ಮಾಲ್ ನಲ್ಲಿ ಮಂತ್ರಿಮಾಲ್ ಕೂಡಾ ಒಂದು. ಸಾಕಷ್ಟು ಜನ ಇಲ್ಲಿಗೆ ಹೋಗ್ತಾರೆ ಜೊತೆಗೆ ತಮಗೆ ಬೇಕಾದನ್ನು ಖರೀದಿಸುತ್ತಾರೆ. ಆದರೆ ಕಳೆದ ವರ್ಷದಿಂದ ಇಷ್ಟೆಲ್ಲಾ ವ್ಯವಹಾರ ನಡೆಸುತ್ತಿರುವ ಮಂತ್ರಿಮಾಲ್ ತೆರಿಗೆ ಪಾವತಿ ಮಾಡದ ಹಿನ್ನಲೆ ಸ್ತಬ್ಧವಾಗಿತ್ತು. ಆದರೆ ಮತ್ತೆ ತನ್ನ ಕಾರ್ಯ ಆರಂಭಿಸಿದ್ದು, ಇಂದು ಬೆಳಗ್ಗೆ ಮತ್ತೆ ಬೀಗ ಜಡಿದಿರುವುದು ಕಂಡುಬಂದಿದೆ. ಹೌದು…! ಈ ಹಿಂದೆ ಕೋಟ್ಯಾಂತರ ತೆರಿಗೆ ಪಾವತಿಸದ ಸಲುವಾಗಿ ಹಲವು ಬಾರಿ ಮಾಲ್​ ಅನ್ನು ಸೀಜ್ ಮಾಡಲಾಗಿತ್ತು. ಈ ಬಾರಿಯೂ 30 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಬಾಕಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧಿಕಾರಿಗಳು ಇಂದು ಬೆಳಗ್ಗೆ ಮಾಲ್​ ಅನ್ನು ಸೀಜ್ ಮಾಡಿ ನೋಟಿಸ್ ಕಳುಹಿಸಿದ್ದಾರೆ. ಬೀಗ ಹಾಕಿದ್ದರಿಂದ ಮಾಲ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಇತ್ತ ಪೊಲೀಸರು ಮಾಲ್ ಬಳಿಯೇ ಬೀಡುಬಿಟ್ಟಿದ್ದಾರೆ. 2023ರಲ್ಲಿ 32 ಕೋಟಿ ವರೆಗೂ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ ಗೆ ಪಾಲಿಕೆ ಒನ್ ಟೈಂ ಪೇಮೆಂಟ್​ಗೆ ಅವಕಾಶ ಕೊಟ್ಟಿತ್ತು. ಆದರೆ ಸೆಟಲ್​ ಆಗದಿರುವ ಕಾರಣ ಮಾಲ್​ಗೆ ಬೀಗ ಜಡಿದಿತ್ತು. ಮತ್ತೊಮ್ಮೆ 2024ರಲ್ಲಿಯೂ ಇದೇ ತಪ್ಪು ಮಾಡಿದ್ದ ಮಂತ್ರಿ ಮಾಲ್, ಸುಮಾರು 50 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಹಿನ್ನಲೆ ಮಂತ್ರಿ ಮಾಲ್​ನ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಬೋರ್ಡ್ ಹಾಕಿ, ಪಾಲಿಕೆ ಅಧಿಕಾರಿಗಳು ಸೀಜ್ ಮಾಡಿದ್ದರು. ಇದೀಗ ಮತ್ತೊಮ್ಮೆ ತೆರಿಗೆ ವಿಷಯದಲ್ಲಿಯೇ ಮಾಲ್​ಗೆ ಬೀಗ ಬಿದ್ದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ :D. K. Shivakumar: ದೇಶದ ಮಹಿಳಾ ಶಕ್ತಿಯ ಚಿಹ್ನೆ ಇಂದಿರಾ ಗಾಂಧಿ..!

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lXUijjM7amA?si=RrUTI9DNUj7rZ839

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page