Bantwal: ಕಾರು – ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳದ ಕಾವಳಕಟ್ಟೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಕಡಬಾದ ಯುವತಿ ಮೃತಪಟ್ಟಿದ್ದಾರೆ.
ಸ್ಕೂಟರ್ ಸವಾರೆ, ಕಡಬದ ಶ್ರೀ ದುರ್ಗಾ ಎಲೆಕ್ಟ್ರಿಕಲ್ ಮಾಲಕ ಕುಂತೂರು ನಿವಾಸಿ ಸುನಿಲ್ ಕೊಲತ್ತಾಯ ಎಂಬವರ ಪುತ್ರಿ ಅನನ್ಯಾ (21ವ) ಮೃತಪಟ್ಟವರು. ಸಹ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರೂ ಮಂಗಳೂರು ಕಾಲೇಜೊಂದರ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ. ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Men’s Day: ಇಂದು ಪುರುಷರ ದಿನ..ನಿಮ್ಮ ಹೆಂಡತಿಗೆ ನೀವು ಈ ದಿನ ಮಾಡುವ ಪ್ರಾಮಿಸ್ ಹೇಗಿರಬೇಕು..?
====================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











