Cough syrup ಕುಡ್ದ್ರೆ ಬೇಗನೆ ಕೆಮ್ಮು ಗುಣ ಆಗುತ್ತೆ ಈ ಕಾರಣಕ್ಕೆ ಡಾಕ್ಟ್ರಲ್ಲಿ ಹೋಗ್ದೇನೆ ಮೆಡಿಕಲ್ ಗೋಗಿ ರಪ್ಪಂತಾ ಸಿರಪ್ ಹೀರೋರೋ ಸಂಖ್ಯೆ ದೊಡ್ಡದಿದೆ.
ಯಾವುದೇ ಸಣ್ಣ ಪುಟ್ಟ ಕಾಯಿಲೆ ಬಂದ್ರೆ ಅಕ್ಕ ಪಕ್ಕದ ಚಿಕ್ಕ ಆಸ್ಪತ್ರೆ ಅಥವಾ ಮೆಡಿಕಲ್ ಗೆ ಹೋಗಿ ಔಷದಿ ಪಡೆದು ಸೇವಿಸೋದು ಸಾಮಾನ್ಯ.
ಅದ್ರಲ್ಲೂ ಈ ಕೆಮ್ಮು ಗಿಮ್ಮು ಬಂತು ಅಂದ್ರೆ ಯಾರಿಗೂ ಕೂಡ ವೈದ್ಯರನ್ನೂ ಭೇಟಿಯಾಗ್ಬೇಕು ಅಂತಾ ಅನಿಸೋದಿಲ್ಲ.ಪಕ್ಕದಲ್ಲೇ ಇರೋ ಮೆಡಿಕಲ್ ಗೆ ಹೋಗಿ ಸಣ್ಣ ಸಿರಪ್ ಕುಡ್ದ್ರೆ ಕೆಮ್ಮು ಓಡಿ ಹೋಗುತ್ತೆ ಅಂತಾನೆ ಲೆಕ್ಕ,
ಇಂತಹ ಸುಲಭದ ಔಷದಿ 11 ಮಕ್ಕಳನ್ನು ಬಲಿ ಪಡೆದ ದಾರುಣ ಘಟನೆ ನಡೆದಿದೆ,ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಈ ದುರ್ಘಟನೆ ನಡೆದಿದೆ.ಇದ್ರಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಎರಡು ವರ್ಷದ ಮಕ್ಕಳಿಗೆ ಕಮ್ಮಿನ ಸಿರಪ್ ನೀಡದಂತೆ ಆದೇಶ ಹೊರಡಿಸಿದೆ.ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದ ಛಿಂದ್‌ವಾರ್ ಜಿಲ್ಲೇಯಲ್ಲಿ 9 ಮಕ್ಕಳು ಮತ್ತು ರಾಜಸ್ತಾನದ ಸಿಕರ್ ಹಾಗೂ ಭರತ್‌ನಲ್ಲಿ 2 ಮಕ್ಕಳು ಸಾವನ್ನಪ್ಪಿದ್ದಾರೆ.
ಕೆಲವು ಕೆಮ್ಮಿನ ಸಿರಪ್‌ಗಳು “ಡೈಥಿಲೀನ್ ಗ್ಲೈಕಾಲ್ (DEG) ಅಥವಾ ಎಥಿಲೀನ್ ಗ್ಲೈಕಾಲ್ ಅನ್ನು ಒಳಗೊಂಡಿಲ್ಲ ಎಂದು ಕೆಮ್ಮಿನ ಮಾದರಿ ಪರೀಕ್ಷೆಗಳ ಮೂಲಕ ತಿಳಿದು ಬಂದಿದೆ ಇದು ಕಿಡ್ನಿ ಸಮಸ್ಯೆಗಳನ್ನು ಉಂಟುಮಾಡುವ ಮಾಲಿನ್ಯಕಾರಕ ಅಂಶಗಳನ್ನು ಒಳಗೊಂಡಿದೆ. ಇದರಿಂದ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡ ಬೇಡಿ ಎಂದು ಕೇಂದ್ರ ಸಚಿವಾಲಯ ಆದೇಶ ಹೊರಡಿಸಿದೆ.
ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಇದುವರೆಗೆ 11 ಮಕ್ಕಳು ಸಾವಿಗೀಡಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆಗೆ ಆದೇಶ ನೀಡಿದ್ದಾರೆ. ಕೆಮ್ಮಿನ ಔಷಧಿ ಸೇವಿಸಿದ ಕೆಲವು ದಿನಗಳ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಪರೀಕ್ಷೆಯ ನಂತರ ಅವರಿಗೆ ಮೂತ್ರಪಿಂಡದ ಸಮಸ್ಯೆಗಳನ್ನು ಅನುಭಿವಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯ 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬಾರದಂದು ಆದೇಶ ನೀಡಿದ್ದಾರೆ.
ಅದು ಏನೇ ಆಗಿರಲಿ ಒಂದು ಔಷಧಿಯನ್ನು ಸಿದ್ದಪಡಿಸುವಾಗ ಅದರ ಉಪಯೋಗ ಮತ್ತು ಅದರಿಂದ ಆಗುವ ಸಮಸ್ಯೆಗಳ ಅದನ್ನು ಪರೀಕ್ಷೆ ಮಾಡುವುದು ಕೂಡ ಅನಿವಾರ್ಯವೇ ಆಗಿರುತ್ತದೆ.ಸಿರಪ್ ತಯಾರಿಕೆ ಮಾಡಿದ ಕಂಪನಿಗಳ ವಿರುದ್ಧ ಇದೀಗ ಜನರು ಆಕ್ರೋಶ ಹೊರಹಾಕ್ತಿದ್ದಾರೆ.ಸಿರಪ್ ಕುಡಿಯುವುದಕ್ಕೆ ಜನ ಈಗ ಭಯ ಪಡುವಂತಾಗಿದೆ.











