ಬ್ರೇಕಿಂಗ್ ನ್ಯೂಸ್
ಕರ್ನಾಟಕ

Sabarimala: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಕ್ಯೂನಲ್ಲಿ ನಿಂತಿದ್ದ 58 ವರ್ಷದ ಮಹಿಳೆ ಕುಸಿದು ಸಾವು..!

Sabarimala: ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನು ನೋಡಲು ಭಕ್ತರು ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಬಾರಿಯೂ ಭಾರಿ ಜನದಟ್ಟಣೆ ಉಂಟಾಗಿದ್ದು,  ಹಲವು ಭಕ್ತರು ಪರದಾಟ ನಡೆಸುತ್ತಿದ್ದಾರೆ,  ಓರ್ವ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಕುಂತಿ ದೇವಿಗೆ ವಿಶೇಷ ಪೂಜೆ : ತಲೆಮಾರುಗಳಿಂದ ಮುಂದುವರಿದ ಪ್ರಾರ್ಥನೆ

ಶಬರಿಮಲೆಗೆ ಭಕ್ತರ ದಂಡು..!
ಕಳೆದ ವರ್ಷವೂ ಇದೇ ರೀತಿಯ ಜನದಟ್ಟಣೆ ಉಂಟಾಗಿತ್ತು.  ದಿನಕ್ಕೆ ೯೦ ಸಾವಿರ ಆನ್ ಲೈನ್ ಬುಕ್ಕಿಂಗ್ ಮಾಡಿದ್ದ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು,  ಆದ್ರೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸ್ಪಾಟ್ ಬುಕ್ಕಿಂಗ್ ಗೂ ಅವಕಾಶ ನೀಡಲಾಗಿದೆ. ಈ ಹಿನ್ನಲೆ ಮತ್ತಷ್ಟು ಜನದಟ್ಟಣೆಯಾಗಿದೆ.  ಒಂದೇ ದಿನ ೭೦ ಸಾವಿರ ಸ್ಪಾಟ್ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಟ್ಟ ಕಾರಣ, ಜನಸಮೂಹ ಹೆಚ್ಚಳವೇ ಪ್ರಮುಖ ಕಾರಣವಾಗಿದೆ.  ಇನ್ನು ಕಳೆದ ಎರಡು ದಿನಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯೂನಲ್ಲಿ ನಿಂತಿದ್ದ ೫೮ ವರ್ಷದ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ  ಮೃತ ಮಹಿಳೆಯನ್ನು ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಗ್ರಾಮದ ಮಹಿಳೆ ಎಂದು ಗುರುತಿಸಲಾಗಿದೆ.  ಹೀಗಾಗಿ, ಜನಸಂದಣಿಯನ್ನ ನಿಯಂತ್ರಿಸಲು ಟಿಡಿಬಿ ಆಡಳಿತ ಮಂಡಳಿ ಹರಸಹಾಸಪಡುತ್ತಿದೆ.  ಬಾಲಾ ಮಾಲದಾರಿಗಳಿಗೂ ನೀರು ಸಿಗದೆ, ಜನದಟ್ಟಣೆಯಲ್ಲಿ ಪರದಾಟ ನಡೆಸಿದ್ದಾರೆ.

ಇದನ್ನೂ ಓದಿ: ಜಿಬಿಐಟಿ ಯೋಜನೆಗೆ ಅನ್ನದಾತರ ವಿರೋಧ…!

ನಾಳೆ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರವೇಶ..! ಭಾರಿ ಬಿಗಿ ಭದ್ರತೆ !

ಶಬರಿಮಲೆ ದೇಗುಲ ಜನವರಿ 20, 2026 ರಂದು ಮುಚ್ಚಲಾಗುತ್ತಿದೆ. ಈ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಭಕ್ತಾಧಿಗಳು ದೇಗುಲಕ್ಕೆ ಬರುವ ಹಿನ್ನೆಲೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ. ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕಳೆದ ಮಂಗಳವಾರ ಮಧ್ಯಾಹ್ನದ ವೇಳೆಗೆ, 1,96,594 ಯಾತ್ರಾರ್ಥಿಗಳು ದೇವಾಲಯದಲ್ಲಿ ದರ್ಶನ ಪಡೆದಿದ್ದಾರೆ. ಭಾನುವಾರ ಸಂಜೆ 5 ಗಂಟೆಯ ನಂತರ 53,278 ಮಂದಿ, ಸೋಮವಾರ 98,915 ಮಂದಿ, ಮತ್ತು ಮಂಗಳವಾರ ಮಧ್ಯಾಹ್ನ 12 ಗಂಟೆಯವರೆಗೆ 44,401 ಮಂದಿ ದರ್ಶನ ಪಡೆದಿದ್ದಾರೆ. ಪಂಪೆಯಿಂದ ಸನ್ನಿಧಾನದವರೆಗಿನ ಯಾತ್ರಾ ಮಾರ್ಗದಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು. ಇದರಿಂದಾಗಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಗಂಟೆಗಟ್ಟಲೆ ಕಾಯಬೇಕಾಯಿತು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page