ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ರಕ್ಷಿತಾನನ್ನು ನೇರವಾಗಿ ನಾಮಿನೇಟ್ ಮಾಡಿದ ರಘು..!

BBK12: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ 10 ಜನರು ನಾಮಿನೇಟ್ ಆಗಿದ್ದಾರೆ. ಆದ್ರಲ್ಲೂ, ವಿಶೇಷ ಅಂದ್ರೆ ಈ ವಾರ ರಘ ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪದ ಬಳಕೆ…!

ಕ್ಯಾಪ್ಟನ್ ರಘು ತನ್ನ ವಿಶೇಷ ಅಧಿಕಾರ ಬಳಸಿಕೊಂಡು ರಕ್ಷಿತಾ ಶೆಟ್ಟಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರ ಜೊತೆಗೆ
ನಿಯಮ ಉಲ್ಲಂಘಿಸಿದ ಅಶ್ವಿನಿ ಗೌಡ ಮತ್ತು ಜಾಹ್ನವಿ ಕೂಡ ನೇರವಾಗಿ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರ ಆಯ್ಕೆಯ ಪ್ರಕಾರ,  ಅಭಿಷೇಕ್, ಮಾಳು ನಿಪನಾಳ, ರಿಷಾ, ಧ್ರುವಂತ್, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್ ಹಾಗೂ ಸ್ಪಂದನಾ  ನಾಮಿನೇಟ್ ಆದರು. ಅಂತಿಮವಾಗಿ ಕ್ಯಾಪ್ಟನ್ ರಘು ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದರು.

ಇದನ್ನೂ ಓದಿ: ಅರಣ್ಯ ಇಲಾಖೆಯ ಈ ಸಾಹಸಕ್ಕೆ ಅರಣ್ಯ ಸಚಿವರಿಂದ ಶ್ಲಾಘನೆ…!

ಕಳೆದ ವಾರ  ರಕ್ಷಿತಾ ಶೆಟ್ಟಿ ಅವರು ನಾಮಿನೇಷನ್ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ರಘು ಹೆಸರನ್ನು ನಾಮಿನೇಟ್ ಮಾಡಿದ್ದರು. ಇದು  ರಘುಗೆ ಬೇಸರ ಆಗಿತ್ತು. ಈಗ ರಘು ರಕ್ಷಿತಾ ಮಾಡಿರೋ ಬೇಸರಕ್ಕೆ ರಘು ನೇರವಾಗಿ ರಕ್ಷಿತಾಳನ್ನು ನಾಮಿನೇಟ್‌ ಮಾಡಿದ್ದಾರೆ. ನಾಮಿನೇಟ್‌ ಮಾಡುವಾಗ ರಘು, ಆಕೆಯ ಮೇಲೆ ಬೇರೆ ರೀತಿಯ ಅಭಿಪ್ರಾಯ ಇತ್ತು. ಚಿಕ್ಕ ಹುಡುಗಿ, ತಂಗಿ ರೀತಿ ನೋಡುತ್ತಿದ್ದೆ. ಆದರೆ, ಅವಳಿಂದ ನನಗೆ ಹರ್ಟ್ ಆಗಿದೆ. ಹಾಗಾಗಿ ರಕ್ಷಿತಾನ ನಾಮಿನೇಟ್ ಮಾಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: ಪೈಂಟಿಂಗ್‌ ವೇಳೆ ಕುಸಿದು ಬಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು

ರಕ್ಷಿತಾ ಶೆಟ್ಟಿ ಅವರು ಸರಿಯಾಗಿ ಆಟವನ್ನು ಅರ್ಥ ಮಾಡಿಕೊಳ್ಳದೇ ರಘು ಅವರನ್ನು ಈ ಮೊದಲು ನಾಮಿನೇಟ್ ಮಾಡಿದ್ದರು. ಬಳಿಕ ತಮ್ಮ ತಪ್ಪಿನ ಬಗ್ಗೆ ಗೊತ್ತಾಗುತ್ತದೆ. ಬಳಿಕ ರಕ್ಷಿತಾ ರಘು ಬಳಿ ಕ್ಷಮೆ ಕೂಡ ಕೇಳುತ್ತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂಬ ನಿಯಮ ಇದೆ.  ಆದ್ರೆ, ಅಶ್ವಿನಿ ಗೌಡ ಮತ್ತು ಜಾಹ್ನವಿ ಈ ನಿಯಮ ಗೊತ್ತಿದ್ದರೂ ಮೆತ್ತಗೆ ಮಾತನಾಡಿದ್ದಾರೆ.  ಸುದೀಪ್‌ ಎಚ್ಚರಿಸಿದರೂ ಡ್ರೆಸಿಂಗ್ ರೂಮ್​​ನಲ್ಲಿ ಪಿಸುದನಿಯಲ್ಲಿ ಮಾತನಾಡುತ್ತಿದ್ದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page