Baby Care : ಮಗು ಅಳೋದಂದ್ರೆ ತಾಯಂದಿರಿಗೆ ಎಲ್ಲಿಲ್ಲದ ಸಂಕಟ. ಈ ಅಳು ನಿಲ್ಲಿಸೋದಕ್ಕೆ ಪರದಾಡೋ ತಾಯಂದಿರನ್ನು ನೋಡುವಾಗ ಅಯ್ಯೋ ಅನಿಸುತ್ತೆ. ಹೌದು..! ಮಗು ಅಳುವಾಗ ಅದಕ್ಕೆ ಹಸಿವಾಗಿದೆ ಎಂದುಕೊಳ್ಳುತ್ತೇವೆ. ಅಂತಹ ಸಂದರ್ಭಗಳಲ್ಲಿ ಅನೇಕ ತಾಯಂದಿರು ಮಗುವಿಗೆ ಹಾಲುಣಿಸುತ್ತಾರೆ. ಮಕ್ಕಳ ಬಾಯಿಯಲ್ಲಿ ಹಾಲಿನ ಬಾಟಲಿಯನ್ನು ಇಡುತ್ತಾರೆ. ಇನ್ನೂ ಕೆಲವರು ಶಿಶುಗೆ ಗ್ಲೂಕೋಸ್ ನೀರು ಅಥವಾ ಗ್ರೈಪ್ ವಾಟರ್ ಕುಡಿಸುತ್ತಾರೆ. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಕೆಲವೊಮ್ಮೆ ಶಿಶುಗಳು ನಿರಂತರವಾಗಿ ಅಳುತ್ತಲೇ ಇರುತ್ತವೆ. ಆದ್ರೆ ಈ ಅಳುವಿಗೆ ಕಾರಣ ಹಸಿವು ಅಲ್ಲ ಅಂತ ಕೆಲವೊಮ್ಮೆ ಅನಿಸುತ್ತದೆ.
ಸಾಮಾನ್ಯವಾಗಿ, ನವಜಾತ ಶಿಶುಗಳು ಮೊದಲ ಬಾರಿಗೆ ದೊಡ್ಡದಾದ ಶಬ್ಧಗಳು ಕೇಳಿದಾಗ ಅಳಲು ಶುರು ಮಾಡುತ್ತಾರೆ ಹಾಗೂ ಭಯಬೀಳುತ್ತಾರೆ. ಆದರೆ, ಕೆಲವರು ಶಿಶುಗಳು ಸಾಮಾನ್ಯವಾಗಿ ಹಸಿವಿನಿಂದ ಅಳುತ್ತಾರೆ ಎಂದು ಭಾವಿಸುತ್ತಾರೆ. ಶಿಶುಗಳು ಹಸಿವಿನ ಹೊರತಾಗಿ ಅಳಲು ಹಲವು ಕಾರಣಗಳಿವೆ. ಮೂರು ತಿಂಗಳ ವಯಸ್ಸಿನವರೆಗೆ ಶಿಶುಗಳ ಜೀರ್ಣಾಂಗ ವ್ಯವಸ್ಥೆ ಮತ್ತು ನರಮಂಡಲವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ. ಶಿಶುಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವವರೆಗೆ ಆಗಾಗ್ಗೆ ಅಳುತ್ತಲೇ ಇರುತ್ತವೆ ಎಂದು ತಜ್ಞರು ಹೇಳುತ್ತಾರೆ.
ಕೆಲವು ಶಿಶುಗಳು ಒಂದೇ ಸಮನೆ ಅಳುತ್ತವೆ. ಎಷ್ಟೇ ಸಮಾಧಾನ ಪಡಿಸಲು ಪ್ರಯತ್ನಿಸಿದರು ಅವರು ಅಳುತ್ತಲೇ ಇರುತ್ತಾರೆ. ಡೈಪರ್ಗಳಿಂದ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಹ ಅವರಿಗೆ ಶೀತ, ಕೆಮ್ಮು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿರುವುದಿಲ್ಲ. ಹಾಸಿಗೆ ಕೂಡ ಮೃದು ಮತ್ತು ಆರಾಮದಾಯಕವಾಗಿರುತ್ತದೆ. ಆದರೂ ಕೂಡ ಮಗು ಅಳುತ್ತದೆ. ಅಂತಹ ಸಂದರ್ಭಗಳಲ್ಲಿ ನೀವು ಕಾಲುಗಳು ಮತ್ತು ತೋಳುಗಳ ಬಗ್ಗೆ ಗಮನ ಹರಿಸಬೇಕು. ಸಂಪ್ರದಾಯಗಳು ಮತ್ತು ಪದ್ಧತಿಗಳ ಹೆಸರಿನಲ್ಲಿ ಮಕ್ಕಳಿಗೆ ಕಟ್ಟುವ ಮಣಿಗಳು, ಬಳೆ, ಗೆಜ್ಜೆ ಇತ್ಯಾದಿಗಳು ಕೆಲವೊಮ್ಮೆ ಮಕ್ಕಳಿಗೆ ಬಹಳಷ್ಟು ತೊಂದರೆ ಉಂಟುಮಾಡುತ್ತವೆ. ಕೆಲವು ಮಕ್ಕಳು ಸಂಜೆ ಹೆಚ್ಚು ಅಳುತ್ತಾರೆ, ಅವರಿಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಪೌಡರ್ ಹಚ್ಚಿ, ಚೆನ್ನಾಗಿ ತೊಳೆದ ಬಟ್ಟೆಗಳನ್ನು ಹಾಕಿದರೆ ವಿಶ್ರಾಂತಿ ಪಡೆದು ಚೆನ್ನಾಗಿ ನಿದ್ರೆ ಮಾಡುತ್ತಾರೆ. ಶಿಶುಗಳು ಅಳುವಾಗ, ಅವರು ಏಕೆ ಅಳುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಶಿಶುಗಳು ಶಾಂತವಾಗುತ್ತವೆ. ಶಿಶುಗಳು ಸಾಮಾನ್ಯವಾಗಿ ಹಸಿವಿನಿಂದ ಅಳುತ್ತಾರೆ ಮತ್ತು ಅಂತಹ ಸಂದರ್ಭಗಳಲ್ಲಿ ಅವರ ಹಸಿವು ನೀಗಬೇಕು, ಅದು ಅಳುವುದನ್ನು ನಿಲ್ಲಿಸುತ್ತದೆ.
ಹಾಸಿಗೆಯನ್ನು ಒದ್ದೆ ಮಾಡಿದಾಗ ಅಥವಾ ಮಲವಿಸರ್ಜನೆ ಮಾಡಿದಾಗ, ಅದನ್ನು ತಕ್ಷಣ ಸ್ವಚ್ಛಗೊಳಿಸಬೇಕು ಹಾಗೂ ದೇಹವನ್ನು ಒಣ ಬಟ್ಟೆಯಿಂದ ಮುಚ್ಚಬೇಕು. ಅಲ್ಲದೆ, ಬಟ್ಟೆಗಳು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಬೇಕು. ಶಿಶುಗಳು ದೀರ್ಘಕಾಲ ಅಳುತ್ತಿದ್ದರೆ, ಅವರಿಗೆ ಹೊಟ್ಟೆ ನೋವು ಬರುತ್ತದೆಯೇ ಅಥವಾ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಇದನ್ನೂ ಓದಿ :Belthangady: ಪೈಂಟಿಂಗ್ ವೇಳೆ ಕುಸಿದು ಬಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು
…….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=9-p-hEdxSIH5NIgZ











