Belthangady: ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದ ಯುವಕ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉಜಿರೆಯ ರೆಂಜಾಳ ನಿವಾಸಿ ಪ್ರಮೋದ್ ಗೌಡ (37) ಮೃತಪಟ್ಟ ಯುವಕ.
ಒಂದು ತಿಂಗಳ ಹಿಂದೆ ಪೈಂಟ್ ಬಳಿಯುವ ವೇಳೆ ಆಯತಪ್ಪಿ ಬಿದ್ದು ತಲೆಯ ಭಾಗ ಮತ್ತು ಕುತ್ತಿಗೆಯ ಸ್ಪೈನಲ್ ಕಾರ್ಡ್‌ಗೆ ಸಂಪೂರ್ಣವಾಗಿ ಮುರಿತಕ್ಕೆ ಒಳಗಾಗಿತ್ತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಪ್ರಮೋದ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಚಿಕಿತ್ಸೆಗಾಗಿ ಲಕ್ಷಾಂತರ ವ್ಯಯಿಸಿ ಆನಂತರ ನೆರವಿಗಾಗಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ನ. 17ರ ಸೋಮವಾರದಂದು ಪ್ರಮೋದ್ ಗೌಡ ಅಸುನೀಗಿದ್ದಾರೆ. ಮೃತರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.
ಇದನ್ನೂ ಓದಿ: Puttur: ಕೋಡಿಂಬಾಡಿ ಬಾರ್‌ನಲ್ಲಿ ಮಾರಾಮಾರಿ: ಪ್ರಕರಣ ಮುಚ್ಚಿ ಹಾಕಲು ಯತ್ನ!?
=======================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











