ಬ್ರೇಕಿಂಗ್ ನ್ಯೂಸ್
ಕರಾವಳಿಪುತ್ತೂರು

Puttur: ಕೋಡಿಂಬಾಡಿ ಬಾರ್‌ನಲ್ಲಿ ಮಾರಾಮಾರಿ: ಪ್ರಕರಣ ಮುಚ್ಚಿ ಹಾಕಲು ಯತ್ನ!?

Puttur:ಕೋಡಿಂಬಾಡಿಯಲ್ಲಿರುವ ಬಾರ್ ಒಂದರಲ್ಲಿ ಮಾರಾಮಾರಿ ನಡೆದಿರುವ ಬಗ್ಗೆ ವರದಿಯಾಗಿದೆ.ಎರಡು ದಿನಗಳ ಹಿಂದೆ ಬಾರ್ ಗೆ ಬಂದಿದ್ದ ತಂಡ ಮತ್ತು ಇನ್ನೋರ್ವ ವ್ಯಕ್ತಿ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಕೋಡಿಂಬಾಡಿ ಹೋಟೇಲ್ ಮಾಡಿಕೊಂಡಿದ್ದ ವ್ಯಕ್ತಿ ಮತ್ತು ಸ್ನೇಹಿತರು ಬಾರ್ ಗೆ ಬಂದಿದ್ದಾರೆ. ಇದೇ ವೇಳೇ ಅಲ್ಲಿಗೆ ಆಗಮಿಸಿದ ಇನ್ನೊಂದು ಹೋಟೇಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ. ತದನಂತರ ಮಾತು ವಿಕೋಪಕ್ಕೆ ತೆರಳಿ ಹಲ್ಲೆ ಮಾಡಿಕೊಂಡಿದ್ದಾರೆ. ಹೋಟೇಲ್ ಮಾಲೀಕನ ಹಣೆಯ ಭಾಗಕ್ಕೆ ತೀವ್ರ ಏಟಾಗಿರುವ ಮಾಹಿತಿಯಿದೆ.

ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪುತ್ತೂರು ನಗರ ಪೊಲೀಸರು ಮಾರಾಮಾರಿ ನಡೆದಿರುವ ಬಗ್ಗೆ ತಿಳಿದಿದೆ. ಆದ್ರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಬಾರ್ ಮಾಲೀಕರು ತಮ್ಮ ಬಾರ್ ನ ಹೆಸರಿಗೆ ಡ್ಯಾಮೇಜ್ ಆಗುತ್ತೆ ಎನ್ನುವ ಕಾರಣಕ್ಕೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಇದುವರೆಗೆ ಕೇಸ್ ಆಗದಂತೆ ನೋಡಿಕೊಳ್ಳುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.

ಇಂತಹ ಪ್ರಕರಣ ಮುಚ್ಚಿಹೋದಲ್ಲಿ, ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗಿ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸ್ತಿದ್ದಾರೆ.

ಇದನ್ನೂ ಓದಿ: Dharmasthala: ಧರ್ಮಸ್ಥಳ ವಿರುದ್ಧ ಅಪಪ್ರಚಾರದ ಹಿನ್ನೆಲೆ ಟೆಂಪಲ್‌ ತಲುಪಿದ ತನ್ವೀರ್ ಅಹಮ್ಮದ್ ಉಲ್ಲಾ ಟೀಮ್!

=========================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page