ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Dharmasthala: ಧರ್ಮಸ್ಥಳ ವಿರುದ್ಧ ಅಪಪ್ರಚಾರದ ಹಿನ್ನೆಲೆ ಟೆಂಪಲ್‌ ತಲುಪಿದ ತನ್ವೀರ್ ಅಹಮ್ಮದ್ ಉಲ್ಲಾ ಟೀಮ್!

Dharmasthala: ಧರ್ಮಸ್ಥಳ ದ ಅಪಪ್ರಚಾರದ ವಿರುದ್ಧ ಮುಸ್ಲಿಂ ಚಿಂತಕ ತನ್ವೀರ್ ಅಹಮ್ಮದ್ ಉಲ್ಲಾ ನೇತೃತ್ವದ ತಂಡ
ಹತ್ತು ದಿನಗಳ  ಪಾದಯಾತ್ರೆ ನಡೆಸಿ, ಇಂದು ಧರ್ಮಸ್ಥಳ ದೇವಸ್ಥಾನ ತಲುಪಿದೆ.

ಈ ವೇಳೆ,  ಪಾದಯಾತ್ರಿಗಳಿಗೆ ದೇವಸ್ಥಾನದ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಗಿದ್ದು,  ಹಾರ ಹಾಕಿ ಬ್ಯಾಂಡ್,ವಾಲಗದ ಮೂಲಕ ಸ್ವಾಗತ ಕೋರಲಾಯಿತು.  ಹತ್ತು‌ ದಿನಗಳ‌ ಹಿಂದೆ ಬೆಂಗಳೂರಿನಿಂದ ಹೊರಟಿದ್ದ ತನ್ವೀರ್ ಅಹಮ್ಮದ್ ಉಲ್ಲಾ ನೇತೃತ್ವದ ತಂಡ  ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದೆ.  ಸದ್ಯಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಸರ್ವ ಧರ್ಮ ಸಮ್ಮೇಳನ ನಡೆಯಲಿದೆ.

ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು – ಹೈಕೋರ್ಟ್‌ ಆದೇಶ

ಸಮ್ಮೇಳನದಲ್ಲಿ ಪ್ರಮುಖ ಭಾಷಣ ಮಾಡಿದ ತನ್ವೀರ್ ಅಹಮ್ಮದ್ ಉಲ್ಲಾ, ನಮ್ಮ ಪಾದಯಾತ್ರೆ ಉದ್ದೇಶ ಒಂದೆ, ಪೂಜ್ಯ ಖಾವಂದರು ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳದ ಒಳ್ಳೆ ಕೆಲಸ ಕಣ್ಣಾರೆ ನೋಡಬೇಕು.ಕ್ಷೇತ್ರ ಧರ್ಮಸ್ಥಳ ಪ್ರೀತಿ ಪ್ರೇಮದ ದೇಗುಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರಿಗೆ ಏನು ಏನು ಕೊಡುಗೆ ನೀಡಿದ್ದಾರೆ ಅದನ್ನ ಕಣ್ಣಾರೆ ನೋಡಬೇಕು ಎಂದಿತ್ತು.ಇಲ್ಲಿಗೆ ಬಂದು ನಮ್ಮ ಅಪೇಕ್ಷೆ ಮೀರಿ ಖುಷಿಯಾಗಿದೆ. ಆರೋಪ ಯಾರ ಮೇಲೆ ಯಾರು ಬೇಕಾದರೂ ಮಾಡಬಹುದು.

ಆರೋಪ ಶುದ್ಧವಾಗಿದ್ದರೆ ಮಾತ್ರ ಶುದ್ಧವಾದ ಪ್ರತಿಫಲ ಸಿಗುತ್ತೆ. ಕ್ಷೇತ್ರ ಧರ್ಮಸ್ಥಳ ಅಗೆದರೆ ಬುರುಡೆ ಗಿರುಡೆ ಸಿಗಲ್ಲ, ಇವರು ಕೊಟ್ಟಿರುವ ಕೊಡುಗೆ, ಮಕ್ಕಳ ಶಿಕ್ಷಣ, ಅನುದಾನ, ಆಸ್ಪತ್ರೆಯಲ್ಲಿ ಮಾಡುತ್ತಿರುವ ಕೆಲಸಗಳು ಸಿಗುತ್ತವೆ. ಧರ್ಮವನ್ನ ಎತ್ತಿ ಹಿಡಿಯಲು ಮಾಡಿರುವ ಪ್ರಯತ್ನ ಮತ್ತು ಪ್ರೀತಿ ಪ್ರೇಮ ಭಾವೈಕ್ಯತೆಯ ಭಾರತ ಸಿಗುತ್ತೆ. ಮೊಟ್ಟ ಮೊದಲ ಬಾರಿ ಆರೋಪ ಬಂದಾಗ ಸಿಬಿಐ ಕೊಡಿ ಎಂದು ಹೇಳಿದವರೇ ಖಾವಂದರು. ಈಗ SIT ಗೆ ಕೊಟ್ಟಿದ್ದಾರೆ ಆದರೆ SIT ಸರಿಯಿಲ್ಲ ಅನ್ನುತ್ತಾರೆ. ಮುಂದೆ ಏನು ಅಮೆರಿಕಾದ FBI ಗೆ ತನಿಖೆಗೆ ಕೊಡಬೇಕಾ?. ನಾಲ್ಕೈದು ಕಿಡಿಗೇಡಿಗಳ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ. ನಮ್ಮ ಡಿಸಿಎಂ ಡಿಕೆ ಶಿವಕುಮಾರ್ ಅಧಿವೇಶನದಲ್ಲಿ ಇದೊಂದು ಷಡ್ಯಂತ್ರ ಎಂದಿದ್ದಾರೆ ಎಂದರು.

ಇದನ್ನೂ ಓದಿ: ಮಹಿಳೆಗೆ ಲೈಂಗಿಕ ಕಿರುಕುಳ ಯತ್ನ – ಆರೋಪಿ ಅರೆಸ್ಟ್‌

ಯಾರು ಸುಮ್ಮನೆ ದೂರು ನೀಡಿದ್ದಾರೆ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತೆ. ಈಗ ಅವರು ನಾವು ಕೊಟ್ಟಿರುವ ದೂರು ವಾಪಸ್ ತಗೋಳ್ತೀವಿ ಅಂತ್ತಿದ್ದಾರೆ. ಅವರು ಕೊಟ್ಟಿರುವ ದೂರು ಯಾವುದೇ ಕಾರಣಕ್ಕೂ ವಾಪಸ್ ತಗೊಳೋಕೆ ಬಿಡಬಾರದು. ಒಳ್ಳೆ ಕೆಲಸ ಮಾಡೋ ಸಂಸ್ಥೆ ಉಳಿಯಬೇಕು, ನಮ್ಮ ಮಕ್ಕಳು ಬೆಳೆಯಬೇಕು. ನಮ್ಮ ಮಕ್ಕಳು, ರೈತರು ಚೆನ್ನಾಗಿರಬೇಕು ಎಂದ್ರೆ..ಕ್ರಿಮಿನಲ್ ಮೈಂಡ್ ಇದೆ ಅವರನ್ನು  ಬಹಿರಂಗವಾಗಿ ಹೊರ ತಂದು ಸಮಾಜದ ಮುಂದೆ ಇಡಬೇಕು. ಮುಂದೆ ಯಾರು ಈ ತರಹ ಷಡ್ಯಂತ್ರ ಮಾಡಿದ್ರೆ ಯಾವ ರೀತಿ ಶಿಕ್ಷೆಯಾಗುತ್ತೆ ಎಂದು ತೋರಿಸಬೇಕು. ನನಗೆ ದೇಶದ ಎಲ್ಲಾ ಸಂಸ್ಥೆಗಳ ಮೇಲೆ ಸಂಪೂರ್ಣ ನಂಬಿಕೆ ಇದೆ. SIT ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಶೀಘ್ರ ಅವರ ವರದಿ ಜಾರಿಯಾಗುತ್ತೆ, ನಮ್ಮ ಅಶೋಕ ಸ್ಥಂಭ ದಲ್ಲಿ ನಾಲ್ಕು ಸಿಂಹಗಳಿವೆ, ಆ ಕಾಣಿಸದಿರೋ ನಾಲ್ಕನೇ ಸಿಂಹವೇ ಜನರು. ಮನೆಯಲ್ಲಿ ಕೂತ ಜನರು ಮನೆಯಿಂದ ಹೊರಗಡೆ ಬರಬೇಕು ಬಂದು ಕೇಳಬೇಕು. ಈ ಪ್ರಕರಣ ಜನತಾ ನ್ಯಾಯಾಲಯದಲ್ಲಿದೆ ಜನ ಮಾಡಬೇಕು. ನನಗೆ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ. ಡಿಕೆ ಶಿವಕುಮಾರ್ ಸೂಕ್ತ ಶಿಕ್ಷೆ ಕೊಡುತ್ತಾರೆ ಅನ್ನೋ ನಂಬಿಕೆ ಇದೆ ಎಂದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page