GBIT : ಜಿಬಿಐಟಿ ಯೋಜನೆಗೆ ಬಿಡದಿ ಭಾಗದ ಅನ್ನದಾತರಿಂದ ವಿರೋಧ ವ್ಯಕ್ತವಾಗಿದೆ. GBIT ಅಂದ್ರೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ. ಇದನ್ನು ಬೆಂಗಳೂರು ದಕ್ಷಿಣ ಬಿಡದಿಯ 9 ಸಾವಿರ ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಈ ಯೋಜನೆಗೆ ಆರಂಭದಿಂದಲೇ ರೈತರ ತೀವ್ರ ವಿರೋಧ ;
ರಾಜ್ಯಸರ್ಕಾರದ ಸುಮಾರು 20 ಸಾವಿರ ಕೋಟಿಮೊತ್ತದ ಯೋಜನೆ ಇದಾಗಿದೆ. ಜಮೀನಿನ ಮಾನದಂಡದ ಆದಾರದ ಮೇಲೆ ಪ್ರತೀ ಎಕರೆಗೆ 1.50 ಕೋಟಿಯಿಂದ 2 ಕೋಟಿ ರೂ. ಪರಿಹಾರ ನೀಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಆದ್ರೆ ಈ ಯೋಜನೆಗೆ ಆರಂಭದಲ್ಲೇ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಜಿಲ್ಲಾಧಿಕಾರಿ ಬೇನಾಮಿಯಾಗಿ ಎಕರೆ ಖರೀದಿ ;
ಈ ಮಧ್ಯೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ವಿರುದ್ಧ ಮಾಜಿ ಶಾಸಕ ಎ. ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಯೋಜನೆಯ ಮುಂಚಿತವಾಗಿ ಜಿಲ್ಲಾಧಿಕಾರಿ ಬೇನಾಮಿಯಾಗಿ ಎಕರೆಯನ್ನು ಖರೀದಿಸಿರುವುದು ಹಾಗೂ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಸಲುವಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಹೇಳಲಾಗಿದೆ. ಹಾಗಾಗಿ ಡಿಸಿ ವಿರುದ್ಧ ಮಾಜಿ ಶಾಸಕ ಗಂಭೀರ ಆರೋಪ ಮಾಡಿರುತ್ತಾರೆ.
ಈ ವಿಷಯವಾಗಿ ಬೈರಮಂಗಲದ ಗ್ರಾಮದ ಬಳಿ ಕಳೆದ ಹಲವು ದಿನಗಳಿಂದ ಈ ಯೋಜನೆಗೆ ಭೂಮಿ ನೀಡಲು ಅಸಾಧ್ಯ ಎಂದು ಪ್ರತಿಭಟನೆ ನಡೆಯುತ್ತಲೇ ಇದೆ. ರೈತರಲ್ಲಿ ಕೆಲವರು ಈ ಯೋಜನೆ ಬೇಕು ಅಂತ ಹೇಳಿದ್ರೆ, ಇನ್ನು ಕೆಲವರು ಬೇಡ ಅಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂತಿಮವಾಗಿ ರಾಜ್ಯ ಸರ್ಕಾರ ಯಾವ ನಿಲುವನ್ನು ತೆಗೆದುಕೊಳ್ಳತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ :Udupi: ಸಹಕಾರಿ ಸಂಘದ ಶಾಖೆಯಲ್ಲಿ ಹಣ ಹಾಗೂ ಚಿನ್ನ ಲಪಟಾಯಿಸಿ ಕೋಟ್ಯಾಂತರ ಹಣ ವಂಚನೆ!
….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/vXhwD33EPDk?si=qR7k_hwIVfKqAEN9











