ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಗಿಲ್ಲಿ ವರ್ತನೆ ಸ್ವಲ್ಪ ಓವರ್ ಅಂತ ಅನಿಸಲ್ವಾ..! ಜನ ಹೀಗಂದ್ರು ಯಾಕೆ..?

BBK12: ಬಿಗ್ ಬಾಸ್ ಸೀಸನ್ 12ರ ಸ್ಪರ್ಧೆ ಗಿಲ್ಲಿ ನಟ ಅವರು ಬಿಗ್ ಬಾಸ್ ಶೋನಲ್ಲಿ ತನ್ನ ಕಾಮಿಡಿಯಿಂದ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅದೇ ರೀತಿಯಾಗಿ ಗಿಲ್ಲಿ ನಟನ ವರ್ತನೆಯ ಬಗ್ಗೆ ಜನ ಬೇಸರಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟನನ್ನು ಯಾವ ರೀತಿಯಾಗಿ ಜನ ತಿಳಿದುಕೊಂಡಿದ್ದಾರೆ ನೋಡೋಣ..

ಗಿಲ್ಲಿ ಇರೋದೆ ಹಾಗೆನಾ..? ವೀಕ್ಷಕರು ಕನ್ಫ್ಯೂಶನ್!

ಸಾಮಾನ್ಯವಾಗಿ ಬಿಗ್ ಬಾಸ್ ಶೋನಲ್ಲಿ ತಮಾಷೆಯಾಗಿ ಮಾತನಾಡುವವರು ಒಬ್ಬರಾದರೂ ಇದ್ದೇ ಇರುತ್ತಾರೆ. ಕಳೆದ ಬಾರಿ ಧನರಾಜ್ ಆಚಾರ್ ಅವರು ಬಿಗ್ ಬಾಸ್ ಮನೆಯಲ್ಲಿ ತನ್ನ ಮಾತಿನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದರು. ಪ್ರತಿಬಾರಿಯೂ  ತಮಾಷೆಯಾಗಿ ಮಾತನಾಡುತ್ತ ಕಾಲ ಕಳೆಯುತ್ತಿದ್ದರು. ಅದೇ ರೀತಿ ಈ ಸೀಸನ್ ನಲ್ಲಿ ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಫನ್‌ ಮಾಡುತ್ತಾ ಮನೆಯವರೆಲ್ಲರನ್ನು ಕೂಡ ಕಾಲೆಳೆಯುತ್ತಾ ಇರುತ್ತಾರೆ. ಇದನ್ನು ನೋಡಿದಂತಹ ಜನ ಗಿಲ್ಲಿಯ ವರ್ತನೆಯ ಬಗ್ಗೆ ಎಷ್ಟು ಪಾಸಿಟಿವ್ ಆಗಿ ಮಾತನಾಡುತ್ತಾರೋ ಅಷ್ಟೇ ನೆಗೆಟಿವ್ ಆಗಿಯೂ  ಮಾತನಾಡಲು ಶುರು ಮಾಡಿದ್ದಾರೆ.

ಗಿಲ್ಲಿಯಿಂದ ಮನೆಮಂದಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ !

ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳಲ್ಲಿ ಗಿಲ್ಲಿ ನಟ ಬಹಳ ಡಿಫರೆಂಟ್ ಆಗಿ ಅನಿಸುತ್ತಾರೆ. ಅದಾಗ್ಯೂ, ಕೂಡ ಕಿಚ್ಚ ಸುದೀಪ್ ಅವರು ವೀಕೆಂಡ್ ಬಂದಾಗ ಗಿಲ್ಲಿ ನಟನಿಗೆ ಏನು ಕೂಡ ಜಾಸ್ತಿಯಾಗಿ ಹೇಳುವುದಿಲ್ಲ.  ಗಿಲ್ಲಿಗಿರುವಂತಹ ಫ್ಯಾನ್ ಬೇಸ್ ಹೆಚ್ಚಾಗಿದೆ. ಮನೆಯ ಒಳಗಡೆ ಗಿಲ್ಲಿ ನಟ ಕಾಮಿಡಿ ಮಾಡಿಕೊಂಡೆ ದಿನ ಕಳೆಯುತ್ತಿದ್ದಾರೆ. ಇದು ಬಿಗ್ ಬಾಸ್ ಶೋನಲ್ಲಿ ಗೆಲ್ಲಲೇ ಬೇಕು ಅಂತ ಅಂದುಕೊಂಡಿರುವಂತಹ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ. ಅದ್ಯಾವ ಸಂದರ್ಭದಲ್ಲಿ ಕೂಡ ಗಿಲ್ಲಿ ನಟ ಮನೆಯ ಒಳಗಡೆ ಗಂಭೀರವಾಗಿ ಇರುವುದಿಲ್ಲ. ಇದರಿಂದ ಮನೆ ಮಂದಿ ಊಟವನ್ನು ಕೂಡ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಪೇಷನ್ಸ್ ಕೂಡ ಕಳೆದುಕೊಳ್ಳುತ್ತಿದ್ದಾರೆ.

ರಘು ವಾರ್ನ್‌ ಮಾಡಿದ್ರೂ ಗಿಲ್ಲಿ ನೋ ಚೇಂಜ್‌ !

ಕಳೆದ ಸಂಚಿಕೆಯಲ್ಲಿ ಗಿಲ್ಲಿ ಗುಲಾಮ ಎಂಬ ಪಟ್ಟವನ್ನು ಮನೆ ಮಂದಿ ಎಲ್ಲಾ ಕೂಡ ಸೇರಿ ಗಿಲ್ಲಿಗೆ ಕೊಟ್ಟಿದ್ದಾರೆ. ಇದರಿಂದ ಈ ಒಂದು ಗುಲಾಮಗಿರಿಯನ್ನು ಗಿಲ್ಲಿ ಮಾಡಬೇಕಾಗಿತ್ತು. ಆದರೆ ರಘು ಎಷ್ಟೇ ವಾರ್ನ್ ಮಾಡಿದರೂ ಕೂಡ ಗಿಲ್ಲಿ ತಮಾಷೆಯಾಗಿಯೇ ಮಾತನಾಡುತ್ತಿದ್ದರು. ಕಸ ಗುಡಿಸಬೇಕು, ಪಾತ್ರ ತೊಳೆಬೇಕು, ಬಟ್ಟೆ ಒಗೆಯಬೇಕು ಹೀಗೆ ನಾನಾ ರೀತಿಯ ಕೆಲಸಗಳನ್ನು ಸಹಸ್ಪರ್ಧಿಗಳು ಗಿಲ್ಲಿಗೆ ಕೊಡಬೇಕಿತ್ತು. ಆದರೆ ಗಿಲ್ಲಿ ಚಿಕ್ಕಪುಟ್ಟ ಕಾರಣ ಹೇಳಿಕೊಂಡು ಅಲ್ಲಗೆಳೆಯುತ್ತಿದ್ದರು. ನಾನು ಮಾಡುವುದಿಲ್ಲ ಅಂತ ಖಡಕ್ಕಾಗಿ ಹೇಳುತ್ತಿದ್ದರು ಇನ್ನು ನೀವು ಕೂಡ ನನಗೆ ಸಹಾಯ ಮಾಡಿ ಅಂತ ತಮಾಷೆಯಾಗಿಯೇ ಹೇಳುತ್ತಿದ್ದರು. ಮನೆಮಂದಿ ಎಲ್ಲಾ ಸೇರಿ ಗಿಲ್ಲಿ ನಟನನ್ನೇ ಗುಲಾಮ ಅಂತ ಪಟ್ಟಕೊಟ್ಟಿರುವ ಕಾರಣ ಗಿಲ್ಲಿ ಎಲ್ಲಾ ಕೆಲಸವನ್ನು ಮಾಡಲೇಬೇಕಿತ್ತು. ಇಲ್ಲವಾದಲ್ಲಿ ಮನೆ ಮಂದಿಗೆ ಯಾವುದೇ ಅಡ್ವಾಂಟೇಜ್ ಸಿಗುವುದಿಲ್ಲ.

ಗಿಲ್ಲಿಗೆ ಸಾರಿ ಕೇಳಿದ ಅಶ್ವಿನಿ ಗೌಡ..!

ಅಶ್ವಿನಿ ಗೌಡ ಅವರು ಮಾಡಿದ ತಪ್ಪಿಗೆ ಮನೆಮಂದಿಯ ಎಲ್ಲರ ಜೊತೆಗೆ ಐ ಯಾಮ್ ಸಾರಿ ಅಂತ ಹೇಳಿಕೊಂಡು ಕ್ಷಮೆಯಾಚಿಸಬೇಕಿತ್ತು, ಅದನ್ನು ಅಶ್ವಿನಿ ಗೌಡ ನೀಟಾಗಿ ಮಾಡಿದ್ದಾರೆ. ಹಾಗೆಯೇ ಗಿಲ್ಲಿ ನಟನ ಜೊತೆಗೆ ಸಾರಿ ಕೇಳಲು ಬಂದಾಗ ಕಾಲು ಮೇಲೆ ಮಾಡಿಕೊಂಡು ಕುಳಿತು ತಮಾಷೆಯಾಗಿ ಮಾತನಾಡಿದ್ದಾರೆ. ಇದರಿಂದ ಮನೆ ಮಂದಿ ಗಿಲ್ಲಿ ಈ ಸಮಯದಲ್ಲೂ ಕೂಡ ತಮಾಷೆ ಬೇಡ ಸ್ವಲ್ಪ ಸೀರಿಯಸ್ ಆಗಿರಿ ಅಂತ ಎಲ್ಲರೂ ಹೇಳೋಕೆ ಟ್ರೈ ಮಾಡಿದ್ದಾರೆ. ಆದರೆ ಗಿಲ್ಲಿ ಒಪ್ಪಲೇ ಇಲ್ಲ. ಕೊನೆಗೆ ಹೇಗೋ ಒಪ್ಪಿಕೊಂಡು ಅಶ್ವಿನಿ ಗೌಡ ಸಾರಿ ಅಂತ ಹೇಳಲು ಅವಕಾಶವನ್ನು ಗಿಲ್ಲಿ ಕೊಟ್ಟಿದ್ದಾರೆ. ಇದರಿಂದ ಈ ಸಂಚಿಕೆಯನ್ನು ನೋಡಿರುವಂತಹ ವೀಕ್ಷಕರು ಎಲ್ಲೋ ಒಂದು ಕಡೆ ಗಿಲ್ಲಿ ನಟನ ವರ್ತನೆ ಸರಿಯಾಗಿಲ್ಲ.. ಗಿಲ್ಲಿ ಓವರ್ ಆಗಿ ಮನೆಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳ ರೀತಿ ಗಂಭೀರವಾಗಿ ಆಟಗಳನ್ನು ಆಡುತ್ತಿಲ್ಲ. ಜೊತೆಗೆ ಪ್ರತಿ ಟೈಮ್ ಕೂಡ ತಮಾಷೆಯಲ್ಲಿಯೇ ದಿನ ಕಳೆಯುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದರ ಬಗ್ಗೆನಿಮ್ಮ ಅನಿಸಿಕೆ ತಿಳಿಸಿ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page