ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

Mangaluru: ಮೊಯ್ದಿನ್‌ ಬಾವಾ ವಾಟ್ಸಾಪ್‌ ಹ್ಯಾಕ್‌ – ಹಣಕ್ಕಾಗಿ ಬೇಡಿಕೆಯಿಟ್ಟ ಖದೀಮರು

Mangaluru: ಸಾಮಾಜಿಕ ಜಾಲತಾಣವನ್ನು ಹ್ಯಾಕ್‌ ಮಾಡಿ ಹಣ ವಂಚಿಸುವ ಪ್ರಕರಣಗಳು ಜಾಸ್ತಿಯಾಗ್ತಿದೆ. ಅಂತೆಯೇ ಮಾಜಿ ಶಾಸಕರೊಬ್ಬರ ವಾಟ್ಸ್‌ಆಪ್‌ ಹ್ಯಾಕ್‌ ಮಾಡಿದ ಖದೀಮರು ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ನಡೆದಿದೆ.

ಮಾಜಿ ಶಾಸಕ ಮೊಯ್ದೀನ್‌ ಬಾವಾರ ಅವರ ವಾಟ್ಸ್ಯಾಪ್‌ ಹ್ಯಾಕ್‌ ಮಾಡಿದ ಖದೀಮರು ಅವರ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿದ್ದವರನ್ನು ಸಂಪರ್ಕಿಸಿದ್ದಾರೆ. ಸಂಪರ್ಕಿಸಿ ಹಣ ನೀಡುವಂತೆ ಸಂದೇಶ ರವಾನಿಸಿದ್ದಾರೆ. ನ. 17ರ ಸೋಮವಾರದಂದು ಮದ್ಯಾಹ್ನದ ವೇಳೆ ಮೊಯ್ದೀನ್‌ ಬಾವಾ ಅವರ ನಂಬರ್‌ನಿಂದಲೇ ಪತ್ರಕರ್ತರು, ಪೊಲೀಸರು, ಸೇರಿದಂತೆ ಹಲವರಿಗೆ ಸಂದೇಶ ರವಾನೆಯಾಗಿದೆ.

ವಾಟ್ಸ್ಯಾಪ್‌ ಹ್ಯಾಕ್‌ ಮಾಡಿರುವ ಹ್ಯಾಕರ್ಸ್‌ ಅವರ ನಂಬರ್‌ನಿಂದಲೇ ಪೊಲೀಸರು, ಪತ್ರಕರ್ತರು ಸೇರಿ ಅವರ ಕಾಂಟಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ದುಡ್ಡು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ʻನಿಮ್ಮಿಂದ ನನಗೆ ಸಹಾಯ ಬೇಕುʼ ಎಂಬ ಮೆಸೇಜ್‌ ಬಂದಿದೆ. ಬಾವಾ ಏನೋ ಕಷ್ಟದಲ್ಲಿದ್ದಾರೆ ಎಂದು, ʻಏನಾಯ್ತು ಬಾವಾ?ʼ ಎಂದು ಕೇಳಿದಾಗ, ಇಂಗ್ಲೀಷ್‌ನಲ್ಲಿ ಕಂತೆ ಪುರಾಣಗಳನ್ನೆಲ್ಲಾ ಬಿಚ್ಚಿಟ್ಟು, ತನ್ನ ಮತ್ತೊಂದು UPI ID ನೀಡಿ ಇದಕ್ಕೆ ಹಣ ಕಳಿಸುವುದು ಮಾತ್ರವಲ್ಲದೆ, ಅದರ ಸ್ಕ್ರೀನ್‌ ಶಾಟ್‌ ಕಳಿಸುವಂತೆಯೂ ಕೇಳಿದ್ದಾರೆ.

ಇದನ್ನು ನೋಡಿ ಅಚ್ಚರಿಗೊಂಡ ಹಲವರು ಮೊಯ್ದಿನ್‌ ಬಾವಾರಿಗೆ ನೇರವಾಗಿ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಅವರ ಮೊಬೈಲ್ ಹ್ಯಾಕ್ ಆಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: Workplace Relationships Ban: ಇನ್ಮುಂದೆ ಆಫೀಸ್‌ ನಲ್ಲಿ ಗುಟ್ಟಾಗಿ ಲವ್‌ ಮಾಡಿದ್ರೆ ಕೆಲಸದಿಂದ ವಜಾ!

============================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page