ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

CM Siddaramaiah: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು ICU ನಲ್ಲಿ ಚಿಕಿತ್ಸೆ!

CM Siddaramaiah: ಸಿಎಂ ಸಿದ್ದರಾಮಯ್ಯ ಪಾರ್ವತಿ ಅವರು  ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆಯಿಂದ  ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಪಾರ್ವತಿ ಅವರಿಗೆ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಡಾ. ಬಿಸಿ ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಐಸಿಯುನಲ್ಲಿ ಪಾರ್ವತಿಗೆ ಚಿಕಿತ್ಸೆ ನೀಡುತ್ತಿದ್ದಾರೆ.ನವದೆಹಲಿಯಲ್ಲಿರುವ ಸಿದ್ದರಾಮಯ್ಯ ವೈದ್ಯರಿಗೆ ಕರೆ ಮಾಡಿ ಪತ್ನಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪ್ರಧಾನಿ- ಸಿಎಂ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಲಾಗದು.. ಸಿ.ಟಿ.ರವಿ!

ಇನ್ನು ವಿಚಾರ ತಿಳಿದು ಅಪೋಲೋ ಆಸ್ಪತ್ರೆಗೆ ಶಾಸಕ‌ ಶಿವಲಿಂಗೇಗೌಡ ಭೇಟಿ ನೀಡಿ, ನಾಳೆ ಸಂಜೆ ವರೆಗೆ ಆಸ್ಪತ್ರೆಯಲ್ಲೇ ಇರಲು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ, ಸಿಎಂ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ ಜೊತೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ. ಸಿಎಂ‌ ಪತ್ನಿ ಅವರ ಆರೋಗ್ಯ ಏರುಪೇರು ಅಂತ ತಿಳಿದು ಆರೋಗ್ಯ ವಿಚಾರಿಸಲು ಬಂದೆ. ಒಳಗೆ ಯಾರನ್ನೂ ನೋಡಲು ಬಿಡ್ತಿಲ್ಲ. ಯತೀಂದ್ರ ಅವರನ್ನು  ಮಾತಾಡಿಸಿದೆ. ಆರೋಗ್ಯವಾಗಿದ್ದಾರೆ ಏನೂ ಸಮಸ್ಯೆಯಿಲ್ಲ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ಕಾರ್ತಿಕ ಮಾಸದ ಕೊನೆಯ ಸೋಮವಾರ : ಕಿಕ್ಕಿರಿದ ಜನಜಂಗುಳಿ

ಇನ್ನು ತಾಯಿಯ ಆರೋಗ್ಯದ ಬಗ್ಗೆ ಮಾತನಾಡಿದ ಸಿಎಂ ಪುತ್ರ ಯತೀಂದ್ರ, ಉಸಿರಾಟದ ಸಮಸ್ಯೆಯಿಂದ ಅಡ್ಮಿಟ್ ಮಾಡಿದ್ವಿ, ಈಗ ತಾಯಿಯವರ ಆರೋಗ್ಯ ಸ್ಥಿರವಾಗಿದೆ. ಲಂಗ್ಸ್ ನಲ್ಲಿ ನೀರು ತುಂಬಿಕೊಂಡಿತ್ತು ಹಾಗಾಗಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕ ಪಡುವಂತ ಅಗತ್ಯವಿಲ್ಲ. ತಂದೆಯವರು ಸಹ ದೆಹಲಿಯಿಂದ ವಾಪಸ್‌ ಆದ ನಂತರ ಬರ್ತಾರೆ  ನಾಳೆಯವರೆಗೂ ನಿಗಾವಹಿಸಲು ಸೂಚಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ಧಾರೆ ಎಂದು ಯತೀಂದ್ರ ತಿಳಿಸಿರುವುದಾಗಿ ಶಾಸಕರು ಹೇಳಿದರು. ಸಿದ್ದರಾಮಯ್ಯ ಮತ್ತು ಪಾರ್ವತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಹಿರಿಯ ಮಗ ರಾಕೇಶ್ 2016 ರಲ್ಲಿ ನಿಧನರಾದರು, ಮತ್ತು ಕಿರಿಯ ಮಗ ಯತೀಂದ್ರ ಸಿದ್ದರಾಮಯ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಮಾಜಿ ಶಾಸಕರಾಗಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page