Karnataka state film award : ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆಯಾಗಿದೆ.” ಚಾರ್ಲಿ 777 ಚಿತ್ರದ ನಾಯಕ ರಕ್ಷಿತ್ ಶೆಟ್ಟಿಗೆ (Rakshit Shetty) ಉತ್ತಮ ನಾಯಕ ಪ್ರಶಸ್ತಿ ಲಭಿಸಿದೆ.ಅರ್ಚನಾ ಜೋಯಿಸ್ ಅವರಿಗೆ “ಮ್ಯೂಟ್” ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಣೆಯಾಗಿದೆ.”
ದೊಡ್ಡಹಟ್ಟಿ ಬೋರೇಗೌಡ” ರಘು ಕೆ. ಎಂ ನಿರ್ದೇಶನದ ಚಲನಚಿತ್ರ ಮೊದಲನೇ ಆತ್ಯುತ್ತಮ ಚಲನಚಿತ್ರವಾಗಿದೆ. ” ಚಾರ್ಲಿ777″ ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದ ಚಲನಚಿತ್ರ 2ನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ” ಬಿಸಿಲು ಕುದುರೆ” ಹೃದಯಶಿವ ನಿರ್ದೇಶನದಲ್ಲಿ ಮೂಡಿ ಬಂದ ಚಲನಚಿತ್ರ 3ನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಯುವರತ್ನ ಸಿನಿಮಾಗೂ ಲಭಿಸಿದ ಪ್ರಶಸ್ತಿ:
ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾವು ಅತ್ಯುತ್ತಮ ಮನರಂಜನಾ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಮೋದ್ ಅವರಿಗೆ “ರತ್ನನ್ ಪ್ರಪಂಚ” ನಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಹಿರಿಯ ನಟಿ ಉಮಾಶ್ರೀ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.
ಇಮ್ತಿಯಾಜ್ ಅವರಿಗೆ “ಬಿಸಿಲು ಕುದುರೆ” ಸಿನಿಮಾದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅತೀಶ್ ಶೆಟ್ಟಿಗೆ “ಕೇಕ್” ಸಿನಿಮಾದ ನಟನೆಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದೆ. ಬೇಬಿ ಭೈರವಿಗೆ “ಭೈರವಿ” ಸಿನಿಮಾದ ನಟನೆಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಲಭಿಸಿದೆ.
ಅಂದಹಾಗೆ ಈ ಬಾರಿ ಘೋಷಣೆಯಾಗಿರುವ ಪ್ರಶಸ್ತಿಯು 2021ನೇ ಸಾಲಿನ ಪ್ರಶಸ್ತಿಯಾಗಿದೆ. ಕಾರಣಾಂತರಗಳಿಂದ 2021ನೇ ಸಾಲಿನ ರಾಜ್ಯ ಪ್ರಶಸ್ತಿ ಘೋಷಣೆಯಾಗುವುದು ವಿಳಂಬವಾಗಿತ್ತು. ಇದೀಗ ಪ್ರಶಸ್ತಿ ಷಣೆಯಾಗಿರುವುದು ಚಿತ್ರರಂಗಕ್ಕೆ ಖುಷಿಕೊಟ್ಟಿದೆ.
ಕರ್ನಾಟಕ ಚಲನಚಿತ್ರ ಪ್ರಶಸ್ತಿಯ ಇನ್ನುಳಿದ ವಿವರಗಳು:
ಭಾರತದ ಪ್ರಜೆಗಳಾದ ನಾವು : ವಿಶೇಷ ಸಾಮಾಜಿಕ ಕಳಕಳಿ ಚಿತ್ರ
ಕೇಕ್ : ಅತ್ಯುತ್ತಮ ಮಕ್ಕಳ ಚಿತ್ರ
ಶಂಕರ್ ಗುರು : ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ
ನಾಡ ಪೆದ ಆಶಾ: ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ( ಕೊಡವ)
ಸಹನಾ ಎಂ ಭಾರದ್ಜಾಜ್ : ಅತ್ಯುತ್ತಮ ಹಿನ್ನಲೆ ಗಾಯಕಿ
ಅನೀಶ್ ಕೇಶವ ರಾವ್ : ಅತ್ಯುತ್ತಮ ಹಿನ್ನಲೆ ಗಾಯಕ
ರವಿ ಸಂತೇಹಕ್ಲು ಭಜರಂಗಿ 2: ಅತ್ಯುತ್ತಮ ಕಲಾ ನಿರ್ದೇಶಕ
ಶಿವಕುಮಾರ್ ಪೊಗರು : ಅತ್ಯುತ್ತಮ ನಿರ್ಮಾಣ ನಿರ್ವಾಹಕ
ನಾಗರ್ಜುನ ಶರ್ಮಚಾರ್ಲಿ 777 : ಅತ್ಯುತ್ತಮ ಗೀತಾ ರಚನೆಗಾರ
ಪ್ರತೀಶ್ ಶೆಟ್ಟಿ ಚಾರ್ಲಿ 777 : ಅತ್ಯುತ್ತಮ ಸಂಕಲನ
ಮಂಜುನಾಥ್ ಮುನಿಯಪ್ಪ 9 ಸುಳ್ಳು ಕಥೆಗಳು : ಅತ್ಯುತ್ತಮ ಕಥೆ
ಯೋಗಿ ಜಿ ರಾಜು ಭಜರಂಗಿ 2 : ಅತ್ಯುತ್ತಮ ವಸ್ತ್ರ ವಿನ್ಯಾಸ
ಭೈರವಿ : ಅತ್ಯುತ್ತಮ ಚಿತ್ರ
ಬರಗೂರು ರಾಮಚಂದ್ರಪ್ಪ ತಾಯಿ ಕಸ್ತೂರಿ ಗಾಂಧಿ: ಅತ್ಯುತ್ತಮ ಸಂಭಾಷಣೆ
ಇದನ್ನೂ ಓದಿ: Kantara chapter1:ಪೈರಸಿಯಿಂದ ಸಾವಿರಾರು ಜನರ ಶ್ರಮಕ್ಕೆ ಹಾನಿ:ಹೊಂಬಾಳೆ ಫಿಲ್ಮ್ಸ್











