Belagavi Zoo : ಸೋಮವಾರದ ದಿನ ಕೃಷ್ಣಮೃಗಗಳ ಸಾವಿನ ಸಂಖ್ಯೆ 31 ಕ್ಕೆ ಏರಿದೆ. ಕಿತ್ತೂರು ಚೆನ್ನಮ್ಮ ಕಿರುಮೃಗಾಲಯ ಮರಣ ಮೃದಂಗವಾಗಿದ್ದು, 4 ದಿನಗಳ ಅಂತರದಲ್ಲಿ ಒಟ್ಟು 31 ಕೃಷ್ಣ ಮೃಗಗಳು ಬಲಿಯಾಗಿವೆ. ಬೆಳಗಾವಿಯಲ್ಲಿರುವ ಈ ಮೃಗಾಲಯದಲ್ಲಿ ಪ್ರಾಣಿಗಳ ಸ್ಥಿತಿ ಹಾಗೂ ಆರೋಗ್ಯದ ಬಗ್ಗೆ ಆತಂಕಗೊಂಡಂತೆ ಕೃಷ್ಣಮೃಗಗಳ ಸರಣಿ ಸಾವು ಗಂಭೀರವಾಗುತ್ತಿದೆ. ಇಲ್ಲಿ ನಡೆಸುತ್ತಿರುವ ಚಿಕಿತ್ಸೆಗಳು ಯಾವುದೂ ಯಶಸ್ವಿಯಾಗುತ್ತಿಲ್ಲ. ಹಾಗಾಗಿ, ಉಳಿದಿರುವ 7 ಕೃಷ್ಣಮೃಗಗಳನ್ನು ಉಳಿಸುವ ಸಲುವಾಗಿ ವೈದ್ಯಕೀಯದಲ್ಲಿ ಹರಸಾಹಸ ಮಾಡುತ್ತಿದ್ದಾರೆ.
ತಜ್ಞ ವೈದ್ಯರಿಂದ ಕೃಷ್ಣಮೃಗಗಳಿಗೆ ಚಿಕಿತ್ಸೆ ಮುಂದುವರೆಯುತ್ತಿದ್ದು, ಅರಣ್ಯ ಇಲಾಖೆಗಳು ಆತಂಕಕ್ಕೀಡಾಗಿವೆ. ಈಗಾಗಲೇ, ಗದಗದಿಂದ 38 ಕೃಷ್ಣಮೃಗಗಳನ್ನು ತೆಗೆದುಕೊಂಡು ಬರಲಾಗಿತ್ತು. ಗಳಲೆ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ನವೆಂಬರ್ 13 ರಂದೇ ಎಚ್ಚೆತ್ತುಕೊಂಡಿದ್ದರೆ, ಈ ಪರಿಸ್ಥಿತಿ ಬಂದಿರಲಿಕ್ಕಿಲ್ಲ ಎಂದು ಒಂದೆಡೆ ಚರ್ಚೆಯೂ ನಡೆಯುತ್ತಿದೆ.
ಈ ಸಲುವಾಗಿ ಬನ್ನೇರುಘಟ್ಟದ ವೈದ್ಯರೂ ಕೂಡಾ ತಪಾಸಣೆ ಮಾಡುತ್ತಿದ್ದರೂ ಸಾವನ್ನು ತಡೆಯಲು ಆಗುತ್ತಿಲ್ಲ ಎಂದು ವರದಿಯಾಗಿರುತ್ತದೆ. ಆದರೆ ಇದೀಗ ಕೈ ಮೀರಿ ಹೋಗಿದ್ದು, ಈಗಾಗಲೇ ಸೋಂಕು ತಗುಲಿದ್ದ ಮೃಗಗಳಿಗೆ ರೋಗನಿರೋಧಕ ಶಕ್ತಿ ಹಾಗೂ ಗ್ಲುಕೋಸ್ ಚಿಕಿತ್ಸೆ ನೀಡಲಾಗಿದ್ದು, ಬದುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾಗಾಗಿ, ಉನ್ನತ ಮಟ್ಟದ ತನಿಖೆ ಆಗಲೇ ಬೇಕು ಎಂಬುದಾಗಿ ಒತ್ತಾಯವನ್ನು ಮಾಡುತ್ತಿದ್ದಾರೆ.
ಈ ಮೃಗಾಲಯದಲ್ಲಿ ಈಗ ಸ್ಮಶಾನ ಮೌನ ಆವರಿಸಿದಂತಾಗಿದೆ. ಎಲ್ಲಾ ಕೃಷ್ಣಮೃಗಗಳ ಸಾವು ಒಮ್ಮಿಂದೊಮ್ಮೆಗೆ ಆಗುತ್ತಿರೋದನ್ನು ನೋಡುವಾಗ ತುಂಬಾ ದುಃಖವಾಗುತ್ತಿದೆ ಎಂದು ಅರಣ್ಯ ಇಲಾಖೆಯೂ ಹಾಗೂ ಸ್ಥಳೀಯರು ನೊಂದಿರುತ್ತಾರೆ. ಇದೀಗ ಮುಂಜಾಗ್ರತಾ ಕ್ರಮವಾಗಿ, ಮೃಗಾಲಯದಲ್ಲಿರುವ 50 ಜಿಂಕೆ ಮರಿಗಳಿಗೆ ಈ ರೋಗ ತಗುಲಬಾರದು ಎಂಬ ನಿಟ್ಟಿನಲ್ಲಿ ಎಲ್ಲಾ ವೈದ್ಯಕೀಯ ಪ್ಲಾನ್ ಆಗಿದ್ದು, ಅವುಗಳ ತಪಾಸಣೆ ಆಗುತ್ತಲೇ ಇದೆ.
ಇದನ್ನೂ ಓದಿ :Life: ಎಲ್ಲರೂ ನಿಮ್ಮನ್ನು ಮೂಲೆಗುಂಪು ಮಾಡುತ್ತಾರೆಯೇ? ಹಾಗಾದ್ರೆ ಈ ಟ್ರಿಕ್ಸ್ ನಿಮಗಾಗಿ!
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=KRIGAzO0rhTFKOng











