ಬ್ರೇಕಿಂಗ್ ನ್ಯೂಸ್
ಕರ್ನಾಟಕ

Life: ಎಲ್ಲರೂ ನಿಮ್ಮನ್ನು ಮೂಲೆಗುಂಪು ಮಾಡುತ್ತಾರೆಯೇ? ಹಾಗಾದ್ರೆ ಈ ಟ್ರಿಕ್ಸ್ ನಿಮಗಾಗಿ!

Life: ನಾವು ಪ್ರತಿ ದಿನದ ಲೈಫ್ ನಲ್ಲಿ ಒಂದಲ್ಲಾ ಒಂದು ರೀತಿಯಾದಂತಹ ಬೇಸರ, ನೋವನ್ನು ಅನುಭವಿಸುತ್ತೇವೆ. ಮನುಷ್ಯರಾದ ನಾವು ಯಾವತ್ತೂ ಕೂಡ ನಾವೇ ಶ್ರೇಷ್ಠ ಅಂತ  ಅಂದುಕೊಳ್ಳಬಾರದು. ಯಾಕೆಂದರೆ, ಒಂದಲ್ಲ ಒಂದು ದಿನ ನಿಮಗೆ ನೋವುಗಳು ಇದ್ದದ್ದೇ.. ಅಂತಹ ದುಃಖಗಳನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ. ಎಲ್ಲರೂ ನಿಮ್ಮನ್ನು ದೂಷಿಸುತ್ತಾರೆಯೇ ಅಥವಾ ನಿಮ್ಮನ್ನು ಒಬ್ಬರನ್ನೇ ಮೂಲೆಗುಂಪು ಮಾಡುತ್ತಾರೆಯೇ..? ಹಾಗಾದರೆ ನೀವು ಮಾಡಬೇಕಾಗಿರುವುದು ಇಷ್ಟೇ.

ತಕ್ಷಣಕ್ಕೆ ಯಾಕೆ ಪ್ರತಿಕ್ರೀಯಿಸುತ್ತೀರಿ..?

ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ವಿಷಯದಲ್ಲಿ ಮನಸ್ಸಿಗೆ ಘಾಸಿಯಾಗುತ್ತದೆ. ಇದರಿಂದ, ಆ ಕ್ಷಣವೇ ಹಲವಾರು ಜನ ತಕ್ಷಣವೇ ತಿರುಗೇಟು ನೀಡುತ್ತಾರೆ. ಇದರಿಂದ ಆ ವ್ಯಕ್ತಿ ಎಲ್ಲರ ಎದುರು ಕೆಟ್ಟವರಾಗಿ ಕಾಣುತ್ತಾರೆ. ನಿಮಗೂ ಕೂಡ ಈ ರೀತಿಯಾದಂತಹ ಅನುಭವ ಆಗಿರಲೂಬಹುದು. ಹೌದು, ನಿಮಗೆ ಯಾರಾದರೂ ಕೆಟ್ಟದಾಗಿ ಬೈದರೆ ಅಥವಾ ಜೋರಾಗಿ ನಿಮ್ಮತ್ರ ವಾದಿಸಿದ್ರೆ ಅಂತವರ ಜೊತೆ ತಕ್ಷಣವೇ ಪ್ರತಿಕ್ರಿಯೆ ನೀಡದಿರಿ. ಒಂದು ವೇಳೆ ನೀವು ಪ್ರತಿಕ್ರಿಯೆ ನೀಡಿದ್ರಿ ಅಂತ ಅಂದುಕೊಳ್ಳಿ, ಆ ಕ್ಷಣವೇ ನಿಮ್ಮ ಜಗಳ ಅಥವಾ ಮನಸ್ತಾಪಗಳು ತಾರಕಕ್ಕೆ ಏರುತ್ತದೆ. ಇಂತಹ ಸಮಯದಲ್ಲಿ ನೀವು ನಿಮ್ಮ ಮನಸ್ಸಿನ ನೋವನ್ನು ಅದುಮಿಟ್ಟುಕೊಳ್ಳುವುದು ಒಳ್ಳೆಯದು. ತಕ್ಷಣವೇ ಮಾತನಾಡಿ ಸಮಸ್ಯೆಯನ್ನು ಜಾಸ್ತಿ ಮಾಡಿಕೊಂಡರೆ ನಿಮ್ಮ ಆರೋಗ್ಯ ಕೆಡುತ್ತದೆ. ಜೊತೆಗೆ ನೀವು ಎಲ್ಲರ ಎದುರು ಕೆಟ್ಟವರಾಗಿ ಕಾಣುತ್ತೀರಿ. ಹಾಗಾಗಿ, ಸಾಕಷ್ಟು ಜನ ಈ ರೀತಿಯಾದಂತಹ ಸಮಸ್ಯೆಗಳನ್ನು ಅನುಭವಿಸಿರುತ್ತಾರೆ. ಇಂತಹ ಸನ್ನಿವೇಶಗಳನ್ನು ಎದುರಿಸಿರುತ್ತಾರೆ. ಇದರಿಂದ ಸಮಾಜದ ದೃಷ್ಟಿಯಲ್ಲಿ ನೀವು ಮೂಲೆಗುಂಪಾಗುತ್ತೀರಿ. ಹಾಗಾಗಿ ಯಾವುದೇ ವಿಚಾರವನ್ನು ಕೂಡ ತಕ್ಷಣವೇ ವಾದಿಸಿ ಗೆಲ್ಲಲು ನೋಡಬೇಡಿ. ಒಂದಿಷ್ಟು ಸಮಯ ಕಾದು ನಂತರ ತಾಳ್ಮೆಯಿಂದ ಬಗೆಹರಿಸಿಕೊಳ್ಳಿ.

ನಿಮ್ಮತನವನ್ನು ಕಾಪಾಡಿಕೊಳ್ಳಿ!

ಸಾಕಷ್ಟು ಬಾರಿ ವಾಗ್ವಾದಗಳು ನಡೆದಾಗ ಆ ಕ್ಷಣದಲ್ಲಿ ನೀವು ಏನು ಮಾತನಾಡುತ್ತೀರಿ ಅನ್ನುವುದು ನಿಮಗೂ ಕೂಡ ಗೊತ್ತಿರುವುದಿಲ್ಲ. ಅಂತಹ ಸನ್ನಿವೇಶದಲ್ಲಿ ನೀವು ನಿಮ್ಮ ಕೋಪವನ್ನು ಎಲ್ಲರಿಗೂ ತೋರಿಸಿಕೊಳ್ಳದಿರಿ. ಇದರಿಂದ ಕೆಲವೊಮ್ಮೆ ನಿಮ್ಮತನ ಇನ್ನೊಬ್ಬರಿಗೆ ಆಟವಾಗಬಹುದು ಅಥವಾ ನಿಮ್ಮತನ ಇನ್ನೊಬ್ಬರ ಎದುರು ಬಹಳ ಕೆಟ್ಟ ರೀತಿಯಾಗಿ ಕಾಣಿಸಿಕೊಳ್ಳಬಹುದು. ಇದರಿಂದ ನೀವು ಮುಂದೆ ಮಾತನಾಡುವಂತಹ ವಿಚಾರಗಳು ನಿಮಗೆ ತೊಡಕಾಗಬಹುದು. ಇಂತಹ ಸನ್ನಿವೇಶದಲ್ಲಿ ನಿಮ್ಮತನವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಇದರಿಂದ ನೀವು ಮೂಲಗುಂಪಾಗುವುದು ತಪ್ಪುತ್ತದೆ.

ವಿಚಾರಗಳನ್ನು ತಮಾಷೆಯಾಗಿ ತೆಗೆದುಕೊಳ್ಳಿ..!

ಕೆಲವೊಮ್ಮೆ ಒಂದು ವಿಚಾರದ ಬಗ್ಗೆ ಚರ್ಚೆ ನಡೆದಾಗ ನೀವು ತುಂಬಾ ಸೀರಿಯಸ್ ಆದಂತಹ ವಿಷಯವನ್ನು ಅತಿಯಾಗಿ ನಿಮ್ಮ ಮನಸ್ಸಿಗೆ ತೆಗೆದುಕೊಳ್ಳದಿರಿ. ನೀವು ಎಲ್ಲಿಯಾದರೂ ಬಹಳ ಗಂಭೀರವಾಗಿ ಒಂದು ವಿಚಾರವನ್ನು ನಿಮ್ಮ ಮನಸ್ಸಿಗೆ ತೆಗೆದುಕೊಂಡರೆ ಸಮಸ್ಯೆ ಕಟ್ಟಿದ ಬುತ್ತಿ ಹೇಗೆಂದರೆ ನೀವು ಎಷ್ಟು ಸೀರಿಯಸ್ ಇದ್ದೀರಾ ಅಂತ ಅವರಿಗೆ ತಿಳಿಯುತ್ತದೆ. ಜೊತೆಗೆ ಅದೇ ಅವರ ಅಡ್ವಾಂಟೇಜ್ ಆಗುತ್ತದೆ. ನಿಮ್ಮ ನೆಗೆಟಿವ್ ಅಂಶ ಅವರಿಗೆ ತಿಳಿಯುತ್ತದೆ. ಇದರಿಂದ ನಿಮ್ಮನ್ನು ಇನ್ನಷ್ಟು ಕೋಪಗೊಳ್ಳುವಂತೆ ಅವರು ಮಾಡಲು ಸಾಧ್ಯ. ಹಾಗಾಗಿ, ವಿಷಯಗಳನ್ನು ತಮಾಷೆಯಾಗಿ ತೆಗೆದುಕೊಂಡು ಮುಂದುವರಿಯುವುದು ಒಳ್ಳೆಯದು. ಹಾಗೆಯೇ ನಂತರ ನೀವು ಆ ವಿಚಾರದ ಕಡೆಗೆ ಯೋಚನೆ ಮಾಡಿ ಮುಂದೆ ಏನು ಮಾಡಬಹುದು ಅಂತ ನಿರ್ಧಾರ ಮಾಡಿಕೊಳ್ಳುವುದು ಒಳ್ಳೆಯದು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page