Bengaluru: ಸ್ಯಾಂಡಲ್‌ವುಡ್ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಪ್ರಕರಣದಡಿ ಖ್ಯಾತ ಉದ್ಯಮಿ ಅರವಿಂದ್ ರೆಡ್ಡಿ ಅವರ ಮೇಲೆ ನಟಿ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ನಟಿಗೆ ಸೂಕ್ತವಾದ ದಾಖಲೆಗಳನ್ನು ನೀಡುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಆ ನಟಿ ಯಾರು..? ಘಟನೆ ಏನು?
ಉದ್ಯಮಿ ಅರವಿಂದ್ ರೆಡ್ಡಿಎಂಬವರು ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕನಾಗಿದ್ದರು. ಜೊತೆಗೆ ಎವಿಆರ್ ಗ್ರೂಪ್ ಮಾಲೀಕನಾಗಿದ್ದರು. ಅಲ್ಲದೇ ಚಲನಚಿತ್ರ ನಿರ್ಮಾಪಕ ಕೂಡ ಹೌದು, ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಚಲನಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದರು. 2021ರಲ್ಲಿ ನಟಿಗೆ ಅರವಿಂದ್‌ಗೆ ಪರಿಚಯವಾಗಿತ್ತು. ನಂತರ ಕೆಲವು ವರ್ಷಗಳ ಬಳಿಕ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ನಟಿ ತನ್ನ ದೂರಿನಲ್ಲಿ ತಿಳಿಸಿದ್ದರು.
ಲಿವ್ ಇನ್ ಟುಗೇದರ್ ನಲ್ಲಿದ್ವಿ ಆಮೇಲೆ ಅವರಿಗೂ ನನಗೂ ಹೊಂದಾಣಿಕೆ ಬರಲಿಲ್ಲ! ನಟಿ
ನಟಿ ತನ್ನ ದೂರಿನಲ್ಲಿ, ಅರವಿಂದ್ ರೆಡ್ಡಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಷ್ಟೇ ದೂರ ಸರಿದ್ರೂ, ಹಿಂದೆ ಬಿದ್ದು ನನ್ನ ಜೊತೆಗೆ ಸಲುಗೆಯಿಂದ ಇರುವಂತೆ ಒತ್ತಾಯ ಮಾಡ್ತಿದ್ದಾರೆ. ನನ್ನ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನನ್ನ ಕುಟುಂಬದವರ ಬಳಿ ಕೆಟ್ಟದಾಗಿ ಹೇಳ್ಕೊಂಡು ಬರ್ತಿದ್ದಾರೆ. ಲೈಂಗಿಕವಾಗಿಯೂ ಕಿರುಕುಳ ನೀಡ್ತಿದ್ದಾರೆ ಎಂದು ನಟಿ ಹೇಳಿಕೊಂಡಿದ್ದರು. ನಟಿ ಮತ್ತು ನಾನು ಎರಡು ವರ್ಷದಿಂದ ಲಿವಿ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದೆವು. ಈ ವೇಳೆ ಆಕೆಗೆ ಐಷಾರಾಮಿ ಕಾರು, ಸೈಟ್, ಮನೆ ಸೇರಿದಂತೆ ಐದು ಕೋಟಿ ರೂ.ಯಷ್ಟು ಖರ್ಚು ಮಾಡಿದ್ದೀನಿ. ಲಿವಿಂಗ್‌ನಿಂದ ಮದುವೆ ಆಗೋಣ ಅಂದಿದ್ದಕ್ಕೆ ನನ್ನ ವಿರುದ್ಧ ಆರೋಪ ಮಾಡ್ತಿದ್ದಾಳೆ. ಆಕೆ ಬೇರೊಬ್ಬರ ಜೊತೆಗೆ ಓಡಾಡ್ತಿದ್ದಾಳೆ ಎಂದು ಅರವಿಂದ್ ರೆಡ್ಡಿ ಆರೋಪಿಸಿದ್ದಾರೆ.
ಇದೀಗ ಪೊಲೀಸರು, ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸಂತ್ರಸ್ತ ನಟಿ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಅರವಿಂದ್ ರೆಡ್ಡಿ ವಿರುದ್ಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಅದರಂತೆ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ 46 ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ಈ ಸಂಬಂಧ ಪೊಲೀಸರು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟಿಸ್ ನೀಡಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











