ಬ್ರೇಕಿಂಗ್ ನ್ಯೂಸ್
ತುಳು ಟಾಕೀಸ್

Kantara chapter 1:ಪೈರಸಿಯಿಂದ ಸಾವಿರಾರು ಜನರ ಶ್ರಮಕ್ಕೆ ಹಾನಿ:ಹೊಂಬಾಳೆ ಫಿಲ್ಮ್ಸ್

Kantara chapter 1 ಸಿನಿಮಾ ಥಿಯೇಟರ್ ಗಳಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ತಿದೆ.ರಿಲೀಸಾಗಿರೋ ಎಲ್ಲಾ ಕಡೆ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.ರಿಷಬ್ ಶೆಟ್ಟಿ (Rishabh Shetty) ಅಬ್ಬರವನ್ನು ಪ್ರೇಕ್ಷಕರು ಥಿಯೇಟರ್ ನಲ್ಲಿ ಕಣ್ತುಂಬಿಕೊಳ್ತಿದ್ದಾರೆ.ಈ ಚಿತ್ರ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮುರಿಯುವುದು ಪಕ್ಕಾ ಎನ್ನಲಾಗ್ತಿದೆ.ಸಿನಿಪ್ರಿಯರ ರೆಸ್ಪಾನ್ಸ್ ಕಂಡಿರೋ ಚಿತ್ರತಂಡಕ್ಕೆ ಖುಷಿ ಆಗಿದೆ.ಆದ್ರ ಜೊತೆಗೆ ಇದೀಗ ಶಾಕಿಂಗ್ ನ್ಯೂಸ್ ಕೂಡ ಸಿಕ್ಕಿದೆ.

ಅದೇನಂದ್ರೆ  ಕಾಂತಾರ ಚಾಪ್ಟರ್ 1  ಪೈರಸಿ ಸಿನಿಮಾ ಹರಿದಾಡ್ತಿದೆ.ಇದ್ರಿಂದ ಕಲೆಕ್ಷನ್ ಗೆ ತೊಂದ್ರೆ ಆಗ್ಬೋದು ಅನ್ನೋ ಅಭಿಪ್ರಾಯನೂ ಕೇಳಿ ಬರ್ತಿದೆ.ಇದನ್ನೂ ಅರಿತಿರೋ ಸಿನಿಮಾ ತಂಡ ಕಾಂತಾರ ಸಿನಿಮಾಭಿಮಾನಿಗಳಿಗೆ ಮನವಿಯನ್ನು ಮಾಡಿಕೊಂಡಿದೆ.ಕಾಂತಾರ ಬರೀ ಸಿನಿಮಾವಲ್ಲ ಅದು ಈ ನೆಲದ ಕತೆ ಈ ದೊಡ್ಡ ಕನಸನ್ನು ಪೋಲಾಗಲು ಬಿಡಬೇಡಿ ಯಾರು ಪೈರಸಿ ಸಿನಿಮಾ ನೋಡ್ಬೇಡಿ ಅಂತಾ ಚಿತ್ರತಂಡ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಲವಾರು ಅಕ್ರಮ ವೈಬ್ ಸೈಟ್ ನಲ್ಲಿ ಸೋರಿಕೆಯಾಗಿದೆ.ಟೆಲಿಗ್ರಾಂನಲ್ಲೂ ಕಾಂತಾರ ಚಾಪ್ಟರ್ 1 ಹರಿದಾಡೋಕೆ ಶುರುವಾಗಿತ್ತು.ಇನ್ನೂ ಹಲವಾರು ವೆಬ್ ಸೈಟ್ ಗಳಲ್ಲಿ ಕಾಂತಾರ ಸಿನಿಮಾ ಲೀಕ್ ಆಗಿರೋದ್ರ ಬಗ್ಗೆ ಮಾಹಿತಿ ಸಿಕ್ಕಿದೆ.ಇದನ್ನು ಅರ್ಥ ಮಾಡಿಕೊಂಡಿರುವ ಹೊಂಬಾಳೆ ಸಂಸ್ಥೆ ಪೈರಸಿ ಸಿನಿಮಾಗಳನ್ನು ನೋಡದಂತೆ ಮನವಿ ಮಾಡಿಕೊಂಡಿದೆ.

ಸಾವಿರಾರು ಜನರ ಶ್ರಮವನ್ನು ಪೈರಸಿಯಲ್ಲಿ ನೋಡಬೇಡಿ.ದೊಡ್ಡ ಶ್ರಮವನ್ನು ಪೈರೇಟೇಡ್ ಕಾಪಿಯಲ್ಲಿ ನೋಡಿ ಹಾನಿ ಮಾಡಬೇಡಿ ಎಂದು ಪ್ರೇಕ್ಷಕರಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದೆ.ಅಂದಹಾಗೆ ಕಾಂತಾರ ಚಾಪ್ಟರ್ 1 ನಂತಹ ಸಿನಿಮಾಗಳನ್ನು ಪೈರೆಸಿ ಕಾಪಿಗಳಲ್ಲಿ ನೋಡಿದ್ರೆ ಆ ಸಿನಿಮಾದ ನಿಜವಾದ ಸ್ವಾರಸ್ಯ ಲಭಿಸುವುದು ಕಷ್ಟ.

ದೊಡ್ಡ ಸ್ಕ್ರೀನ್ ನಲ್ಲಿ ಅದ್ಬುತ ಸಿನಿಮಾವನ್ನು ನೋಡುವ ಮಜಾವೇ ಬೇರೆ ಇಂತಹ ಅನುಭವವನ್ನು ಯಾವುದೇ ಸಿನಿಪ್ರಿಯ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ.ಪೈರಸಿ ಸಿನಿಮಾವನ್ನು ನೋಡುವವರು ನಿಜವಾದ ಸಿನಿಪ್ರೇಮಿಗಳು ಆಗಿರುವುದಕ್ಕೆ ಸಾಧ್ಯಾವೇ ಇಲ್ಲ.ಹಿಂದಿನಿಂದಲೂ ದೊಡ್ಡ ದೊಡ್ಡ ಸಿನಿಮಾಗಳು ಕೆಲವೇ ಸಮಯದಲ್ಲಿ ಪೈರಸಿ ಕಾಪಿ ರಿಲೀಸ್ ಆಗಿ ಪ್ರೇಕ್ಷಕರಿಗೆ ಸಿಗುತಿತ್ತು.

ಇನ್ನೂ ಪೈರಸಿ ತಡೆಗೆ ಕಾನೂನುಗಳಿದ್ದರೂ ಅದರ ಪಾಲನೆಯಂತೂ ಆಗ್ತಾನೆ ಇಲ್ಲ..ಪೈರಸಿ ಮಾಡುವವರು ರಾಜಾರೋಷವಾಗಿ ಸಿನಿಮಾವನ್ನು ಕಾಪಿ ಮಾಡಿ ಪ್ರಕಟಿಸಿ ಬಿಂದಾಸ್ ಆಗಿ ಓಡಾಡ್ತಿರ್ತಾರೆ.ಅದರರ್ಥ ಕಾನೂನು ಇದ್ದರೂ ಅದು ಸರಿಯಾಗಿ ಜಾರಿಯಾಗ್ತಿಲ್ಲ ಅನ್ನೋದು ಗೊತ್ತಾಗುತ್ತೆ.ಆದ್ರೂ ಕಾಂತಾರದಂತಹ ಸಿನಿಮಾದ ಅನುಭವ ಥಿಯೇಟರ್ ನಲ್ಲೇ ಸಿಗುವುದಕ್ಕೆ ಸಾಧ್ಯ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page