ಬ್ರೇಕಿಂಗ್ ನ್ಯೂಸ್
ಕರ್ನಾಟಕ

Dhavanagere : ಕಾದ ಕಾವಲಿಯಂತಾದ ಮನೆಯ ಹಾಲ್….!

Dhavanagere : ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ವಿಸ್ಮಯ ಒಂದು ನಡೆದಿದೆ. ಮನೆಯ ಹಾಲ್ ಕಾದ ಹೆಂಚಿನಂತಾಗಿದೆ. ರಾಜರಾಮ್ ಕಾಲೋನಿಯ ಶಿಕ್ಷಕರೊಬ್ಬರ ಮನೆಯ ಟೈಲ್ಸ್ ಬಿಸಿಯಾಗಿ ತುಂಬಾ ಕಾಯುತ್ತಿದೆ. ಎಷ್ಟೇ ನೀರು ಹಾಕಿ, ಒದ್ದೆ ಬಟ್ಟೆಯಲ್ಲಿ ಒರೆಸಿದರೂ ಕೂಡಾ ಬಿಸಿ ನಿಲ್ಲುತ್ತಿಲ್ಲ. ಇನ್ನೊಂದು ವಿಶೇಷತೆ ಏನೆಂದರೆ, ಇಡೀ ಮನೆ ತಣ್ಣಗಿದ್ದರೂ ಆ ಹಾಲ್ ನಲ್ಲಿರುವಂತಹ ಸ್ವಲ್ಪ ಜಾಗದಲ್ಲಿ ಬಿಸಿ ಜಾಸ್ತಿಯಾಗಿರುವುದು ಕಂಡು ಬಂದಿದೆ.

ಹರಿಹರದ ಈ ಒಂದು ಮನೆಯಲ್ಲಿ ಈ ತರಹದ ಬಿಸಿ ಕಂಡು ಬಂದಿರುವುದು ವಿಜ್ಞಾನಕ್ಕೆ ಸವಾಲಾಗಿದೆ. ಈ ಅಚ್ಚರಿಯನ್ನ ನೋಡಲು ಜನರು ಕೂಡ ದೌಡಾಯಿಸುತ್ತಿದ್ದಾರೆ. ಕೆಲವೊಮ್ಮೆ ವಿಜ್ಞಾನದಲ್ಲಿ ನೆಲ ಬಿಸಿಯಾಗುವ ಕಾರಣ ಕೇಳಿದಾಗ, ಮನೆಯ ದಿಕ್ಕು ಪಶ್ಚಿಮ/ದಕ್ಷಿಣ ಮುಖವಾಗಿದ್ದರೆ ಹೆಚ್ಚು ಬಿಸಿ ಹಿಡಿಯುತ್ತದೆ ಎಂದು ಹೇಳಲಾಗುತ್ತದೆ. ಅಥವಾ ಸೂರ್ಯನ ಬೆಳಕು ನೇರವಾಗಿ ಒಳ ಬರುವ ಕಿಟಕಿಗೆ ತಗುಲಿದರೆ ಬಿಸಿ ಹೆಚ್ಚುವ ಸಾಧ್ಯತೆಯಿದೆ. ಆದರೆ ಇದಕ್ಕೆ ಇದೇ ಕಾರಣ ಅಂತ ಹೇಳಲು ಆಗುತ್ತಿಲ್ಲ. ಕಾರಣ, ಒಂದೇ ಕಡೆ ಒಂದೇ ಸಮನೆ ಬಿಸಿ ಹೆಚ್ಚುತ್ತಿರುವ ಕಾರಣ ಅದೂ ಈ ದಿನ ಮಾತ್ರ ಈ ರೀತಿಯ ವಿಚಿತ್ರ ಸಂಭವಿಸಿದ ಕಾರಣ ಅಚ್ಚರಿಗೆ ಕಾರಣವಾಗಿದೆ. ಹಾಗಾಗಿ ಮನೆಯವರು ಈ ಸಮಸ್ಯೆಯನ್ನು ಬಗೆಹರಿಸಲು ಖಗೋಳ ಶಾಸ್ತ್ರರಿಗೆ ಮನವಿ ಮಾಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ :Sabarimala Temple: ಶಬರಿಮಲೆಗೆ ಹೋಗುವ ಭಕ್ತರಿಗೆ ಶಾಕ್‌ ನೀಡಿದ ಕೇರಳ ಸರ್ಕಾರ..!

…..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=tN1FfmnSl3fWdPST

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page